Volkswagen Cars Price Hike : ಕಾರು ಪ್ರಿಯರಿಗೆ ಶಾಕಿಂಗ್ ನ್ಯೂಸ್ ! ಎಪ್ರಿಲ್ 1 ರಿಂದ ದರದಲ್ಲಿ ಏರಿಕೆಯಾಗಲಿದೆ ಈ ಪೋಕ್ಸ್ ವ್ಯಾಗನ್ ಕಾರುಗಳು!

Volkswagen Cars : ವಾಹನ ಪ್ರಿಯರೇ ಗಮನಿಸಿ, ನೀವೇನಾದರೂ ಕಾರು, ಬೈಕ್ ಖರೀದಿ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರೆ, ಈ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಪ್ರಸಿದ್ದ ಜರ್ಮನ್ ವಾಹನ ತಯಾರಕರಾದ ಫೋಕ್ಸ್‌ವ್ಯಾಗನ್ (Volkswagen cars) ಇಂಡಿಯಾ ತನ್ನ ಟೈಗನ್ ಎಸ್‌ಯುವಿ(Volkswagen Taigun SUV) ಮತ್ತು ವರ್ಟಸ್ ಸೆಡಾನ್ ಮಾದರಿಗಳ(Volkswagen Virtus Sedan) ಬೆಲೆ ಏಪ್ರಿಲ್ 1ರಿಂದ ದುಬಾರಿಯಾಗಲಿದೆ.

 

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಟೈಗನ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಮಾದರಿಗಳ ಬೆಲೆಗಳ ಏಪ್ರಿಲ್ 1( April 1)ರಿಂದ ಶೇಕಡಾ 2 ರಷ್ಟು ಹೆಚ್ಚಳ ಮಾಡಲಿದೆ. 2023ರ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿ (Volkswagen Taigun SUV)ಮತ್ತು ವರ್ಟಸ್ ಸೆಡಾನ್ ಮಾದರಿಗಳು(Volkswagen Virtus Sedan) ಈಗ ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹಿಂಬದಿಯ ಫಾಗ್ ಲ್ಯಾಂಪ್‌ಗಳೊಂದಿಗೆ ಬರಲಿದೆ. ಇದಲ್ಲದೆ,ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಈ ಮಾದರಿಗಳಿಗೆ ಅನೇಕ ಹೊಸ ಫೀಚರ್ ಗಳನ್ನೂ ಸೇರಿಸಿದ್ದು, ಹೀಗಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಹಾಗಿದ್ದರೆ, ಈ ಎರಡು ಮಾದರಿಗಳು ಏನೆಲ್ಲ ವಿಶೇಷತೆಯನ್ನು ಒಳಗೊಂಡಿದೆ?

ಹೊಸ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ನವೀಕರಿಸಿದ ಗ್ಲೋಬಲ್-ಎನ್‌ಸಿಎಪಿ ಅಡಿಯಲ್ಲಿ ಎರಡೂ ಮಾದರಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿದೆ. ಈ ಎರಡು ಮಾದರಿಯನ್ನು ಒಂದೇ MQB-A0 IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನು 2023ರ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿ ಮತ್ತು ವರ್ಟಸ್ ಸೆಡಾನ್ ಮಾದರಿಗಳು ಹೆಚ್ಚು ಕಠಿಣವಾದ RDE ಮತ್ತು BS6 ಹಂತ 2 ಎಮಿಷನ್ ಮಾನದಂಡಗಳನ್ನು ಅನುಕರಣೆ ಮಾಡುತ್ತವೆ.ನವೀಕರಿಸಿದ ಕಾರುಗಳು E20 ಇಂಧನಕ್ಕೆ ಕೂಡ ಹೊಂದಿಕೊಳ್ಳುತ್ತವೆ. ಆಟೋ ಹೆಡ್‌ಲೈಟ್‌ಗಳು, ಆಟೋ ಕಮಿಂಗ್ ಹೋಮ್ ಮತ್ತು ಲೀವಿಂಗ್ ಹೋಮ್ ಲೈಟ್‌ಗಳಂತಹ ಫೀಚರ್ಸ್ ಗಳು ಹೈಲೈನ್ ಟ್ರಿಮ್ ಮಟ್ಟದಿಂದ ಲಭ್ಯವಿರಲಿದೆ.

ವರ್ಟಸ್ ಸೆಡಾನ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ.ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಒಳಗೊಂಡಿದ್ದು, ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ದೇಶದಲ್ಲಿ ವೆಂಟೊ ಮಾದರಿಯ ಬದಲಿನ ರೂಪವಾಗಿದ್ದು, ನೋಡಲು ಕೊಂಚ ದೊಡ್ಡದಾಗಿದೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫೋಕ್ಸ್‌ವ್ಯಾಗನ್ ವರ್ಟಸ್ ಮಾದರಿಯು ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ಬಳಿಕ ಭಾರತ 2.0 ಯೋಜನೆಯಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಹೊಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್‌ವ್ಯಾಗನ್ ಇಂಡಿಯಾ ಟೈಗನ್ ಎಸ್‌ಯುವಿಯನ್ನು ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು.ಈ ಎಸ್‍ಯುವಿಯಲ್ಲಿ( SUV) 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, 1.5 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು DSG ಗೇರ್ ಬಾಕ್ಸ್ ಆಯ್ಕೆ ಕೂಡ ಹೊಂದಿದೆ.ಇದು ಭಾರತದಲ್ಲಿ ಫೋಕ್ಸ್‌ವ್ಯಾಗನ್‌ನಿಂದ ಕೈಗೆಟಕುವ ದರದಲ್ಲಿ ದೊರೆಯುವ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. 1.0 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಜೊತೆಗೆ ಬರಲಿದೆ. ನವೀಕರಿಸಿದ ಬೆಲೆಗಳು ಈ ತಿಂಗಳ ಆರಂಭದಿಂದ ಜಾರಿಯಲ್ಲಿದ್ದರೂ ಕೂಡ , ಇತ್ತೀಚೆಗೆ ಪರಿಚಯಿಸಲಾದ ಫೋಕ್ಸ್‌ವ್ಯಾಗನ್ ಕೊಡುಗೆಗಳು ಮತ್ತು ರಿಯಾಯಿತಿಗಳು ವರ್ಟಸ್ ಮತ್ತು ಟೈಗನ್ ಅನ್ನು ಹೆಚ್ಚು ಅರ್ಕಷಕವಾಗಿಸುವುದಂತು ಸುಳ್ಳಲ್ಲ.

ಇದನ್ನೂ ಓದಿ: Ranjani Raghavan : ಹಸಿರು ಸೀರೆ, ಮೂಗುತಿ ತೊಟ್ಟು ಸಿಂಗಾರದ ಫೋಟೋ ಶೂಟ್‌ ಮಾಡಿದ ಕಿರುತೆರೆ ಸ್ಟಾರ್‌ ! ಟ್ರೆಡಿಶನಲ್‌ ಲುಕ್‌ನಲ್ಲಿಯೂ ಮಾಡರ್ನ್‌ ಆಗಿ ಕಂಡ ಕನ್ನಡತಿ!

Leave A Reply

Your email address will not be published.