Jio Postpaid Plans: ಜಿಯೋ ಗ್ರಾಹಕರೇ ಗಮನಿಸಿ, ಈ ರಿಚಾರ್ಜ್ ಪ್ಲಾನ್ ದುಬಾರಿ!

Jio Postpaid Plans: ಟೆಲಿಕಾಮ್ ಕಂಪನಿಗಳಲ್ಲಿ (Telicom Company) ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ವನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ (Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ. ಇದೆಲ್ಲದರ ನಡುವೆ ಜಿಯೋ ಗ್ರಾಹಕರಿಗೆ ಶಾಕ್ ನೀಡಲು ಮುಂದಾಗಿದೆ.
ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಬಳಕೆದಾರರಿಗೆ ಹಲವು ಉತ್ತಮ ಪ್ರಿಪೇಯ್ಡ್ ಯೋಜನೆ(Prepaid Plans) ಮೂಲಕ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಗ್ರಾಹಕರ ಪ್ರಯೋಜನದ ವಿಷಯದಲ್ಲಿ ಕಂಪನಿಯ ಪೋಸ್ಟ್ಪೇಯ್ಡ್ ಯೋಜನೆಗಳು ಕೂಡ ಉತ್ತಮವಾಗಿವೆ. ಹೆಚ್ಚಿನ ಡೇಟಾದ ಪ್ರಯೋಜನ ಬೇಕು ಎನ್ನುವುದಾದರೆ ನೀವು ಜಿಯೋದ ರೂ 1499 ಪೋಸ್ಟ್ಪೇಯ್ಡ್ ಯೋಜನೆಗೆ ಚಂದಾದಾರರಾಗಬಹುದಾಗಿದೆ. ಇಷ್ಟೆಲ್ಲಾ ಸೌಲಭ್ಯ ನೀಡುತ್ತಿರುವ ಜಿಯೋ ತನ್ನ ಗ್ರಾಹಕರಿಗೆ ಶಾಕ್ ನೀಡಿದ್ದು, 199 ರೂ.ಇದ್ದ ಪೋಸ್ಟ್ ಪೇಯ್ಡ್ ಯೋಜನೆಯನ್ನು ಈಗ ಹೆಚ್ಚಳ ಮಾಡಿದೆ.
ರಿಲಯನ್ಸ್‌ ಜಿಯೋ ಟೆಲಿಕಾಂ ತನ್ನ ಎಂಟ್ರಿ ಲೆವೆಲ್‌ ಯೋಜನೆಯೊಂದರ ಬೆಲೆಯನ್ನು ಹೆಚ್ಚಳ ಮಾಡಿ ಜಿಯೋ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. 199ರೂ. ಪೋಸ್ಟ್‌ಪೇಯ್ಡ್‌ ಯೋಜನೆಯನ್ನು ಈಗ 299ರೂ. ಗಳಿಗೆ ಏರಿಕೆ ಮಾಡಿದ್ದು ಮಾತ್ರವಲ್ಲದೆ, ಡೇಟಾ ಯೋಜನೆಯಲ್ಲಿ ಕೂಡ ಬದಲಾವಣೆ ಮಾಡಿದೆ. ಬೆಲೆ ಏರಿಕೆ ನಡುವೆ ಗ್ರಾಹಕರಿಗೆ ಜಿಯೋ 299ರೂ. ಪೋಸ್ಟ್‌ಪೇಯ್ಡ್‌(Jio Postpaid Plans) ಯೋಜನೆಯಲ್ಲಿ 5GB ಡೇಟಾ ಪ್ರಯೋಜನ ವನ್ನು ಸಹ ಹೆಚ್ಚಳ ಮಾಡಿದೆ.

 

ಹಾಗಿದ್ರೆ, ಜಿಯೋ ಪರಿಚಯಿಸಿರುವ ಇನ್ನಿತರ (Jio Postpaid Plans) ಯಾವುದೆಲ್ಲ ಎಂಬ ಮಾಹಿತಿ ನಿಮಗಾಗಿ.
ಜಿಯೋ 299ರೂ. ಪೋಸ್ಟ್‌ಪೇಯ್ಡ್‌ ಯೋಜನೆ :
ಈ ಯೋಜನೆಯು ಎಂಟ್ರಿ ಲೆವೆಲ್ ಪೋಸ್ಟ್‌ಪೇಯ್ಡ್‌ ಯೋಜನೆಯಾಗಿದ್ದು, ಈ ಯೋಜನೆಯು ಒಟ್ಟು 30GB ಡೇಟಾ ಪ್ರಯೋಜನ ನೀಡಲಿದೆ. ಪ್ರತಿದಿನ 100 ಎಸ್‌ಎಮ್‌ಎಸ್‌ (SMS), ಅನಿಯಮಿಯ ಉಚಿತ ವಾಯಿಸ್‌ ಕರೆಯ ಪ್ರಯೋಜನ ಪಡೆದುಕೊಳ್ಳಬಹುದು.

ಜಿಯೋ 1499ರೂ. ಪೋಸ್ಟ್‌ಪೇಯ್ಡ್‌ ಯೋಜನೆ :
ಜಿಯೋ ಟೆಲಿಕಾಂನ 1499ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಆಕರ್ಷಕ ಪ್ಲ್ಯಾನ್‌ಗಳಲ್ಲಿ ಒಂದಾಗಿದ್ದು, ಈ ಯೋಜನೆಯ ಮೂಲಕ 300 GB ಡೇಟಾ ಸೌಲಭ್ಯ ಪಡೆಯಬಹುದು. ಇದಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ, ಅನಿಯಮಿಯ ಉಚಿತ ವಾಯಿಸ್‌ ಕರೆಯ ಪ್ರಯೋಜನದ ಜೊತೆಗೆ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಚಂದಾದಾರಿಕೆ ಕೂಡ ದೊರೆಯಲಿದೆ.

ಜಿಯೋ 699ರೂ. ಪೋಸ್ಟ್‌ಪೇಯ್ಡ್‌ ಯೋಜನೆ :
ಜಿಯೋ ಟೆಲಿಕಾಂನ 699ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಬೆಸ್ಟ್ ಪ್ಲಾನ್ ಗಳಲ್ಲಿ ಒಂದಾಗಿದ್ದು, ಈ ಯೋಜನೆಯ ಮೂಲಕ 100 GB ಡೇಟಾ ಸೌಲಭ್ಯ ಪಡೆಯಬಹುದು. ಇದಲ್ಲದೇ ಅನಿಯಮಿತ ಉಚಿತ ವಾಯಿಸ್‌ ಕರೆಯ ಪ್ರಯೋಜನದ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಪಡೆಯಬಹುದು. ಇದಲ್ಲದೆ, ಫ್ಯಾಮಿಲಿ ಸಿಮ್‌ ಕಾರ್ಡ್‌, 3 ಸಿಮ್‌ ವರೆಗೆ ಆಡ್‌ ಆನ್‌ ಫ್ಯಾಮಿಲಿ ಸಿಮ್‌ ಸೌಲಭ್ಯ ಕೂಡ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಚಂದಾದಾರಿಕೆ ಕೂಡ ಪಡೆದುಕೊಳ್ಳಬಹುದು.

ಜಿಯೋ 599ರೂ. ಪೋಸ್ಟ್‌ಪೇಯ್ಡ್‌ ಯೋಜನೆ :
ಜಿಯೋ ಟೆಲಿಕಾಂನ 599ರೂ. ಪೋಸ್ಟ್‌ಪೇಯ್ಡ್‌ ಯೋಜನೆಯ ಮೂಲಕ ಅನಿಯಮಿತ ಡೇಟಾ ಸೌಲಭ್ಯ ಪಡೆದುಕೊಳ್ಳಬಹುದು. ಇದಲ್ಲದೇ, ಅನಿಯಮಿಯ ಉಚಿತ ವಾಯಿಸ್‌ ಕರೆ, ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯ ಕೂಡ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ ಜಿಯೋ ಆ್ಯಪ್ ಪ್ರಯೋಜನ ಪಡೆದುಕೊಳ್ಳಬಹುದು.

ಜಿಯೋ 399ರೂ. ಪೋಸ್ಟ್‌ಪೇಯ್ಡ್‌ ಯೋಜನೆ :
ಜಿಯೋ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಆಕರ್ಷಕ ಪ್ಲ್ಯಾನ್‌ಗಳಲ್ಲಿ ಒಂದಾಗಿದ್ದು, ಈ ಯೋಜನೆಯ ಮೂಲಕ 75 GB ಡೇಟಾ ಸೌಲಭ್ಯ ಪಡೆಯಬಹುದು. ಅನಿಯಮಿಯ ಉಚಿತ ವಾಯಿಸ್‌ ಕರೆ ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸೌಲಭ್ಯವನ್ನು ಪಡೆಯಬಹುದು. ಇದಲ್ಲದೆ, ಫ್ಯಾಮಿಲಿ ಸಿಮ್‌ ಕಾರ್ಡ್‌, 3 ಸಿಮ್‌ ವರೆಗೆ ಆಡ್‌ ಆನ್‌ ಫ್ಯಾಮಿಲಿ ಸಿಮ್‌ ಸೌಲಭ್ಯ ಕೂಡ ನಿಮ್ಮದಾಗಿಸಿಕೊಳ್ಳಬಹುದು.

ಇದನ್ನೂ ಓದಿ  : Exchange Old AC With New One Offer : ನಿಮ್ಮಲ್ಲಿ ಹಳೆ ಎಸಿ ಇದೆಯಾ? ಅದನ್ನು ಕೊಟ್ಟು ಈ ಹೊಸ ಎಸಿ ನಿಮ್ಮದಾಗಿಸಿ!

Leave A Reply

Your email address will not be published.