Garlic side effects : ಈ ಸಮಸ್ಯೆ ಹೊಂದಿರುವವರು ತಪ್ಪಿಯೂ ಸೇವಿಸಬೇಡಿ ಬೆಳ್ಳುಳ್ಳಿ!
Garlic side effects : ಬೆಳ್ಳುಳ್ಳಿಯು ಪೋಷಕಾಂಶಗಳಿಂದ ಕೂಡಿದೆ. ಇದರಲ್ಲಿ, ಮ್ಯಾಂಗನೀಸ್, ಸೆಲೆನಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಬೆಳ್ಳುಳ್ಳಿ ಸೇವನೆಯು(Garlic side effects) ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ಆರೋಗ್ಯ ಪರಿಸ್ಥಿತಿಗಳಲ್ಲಿ, ಇದರ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಕೆಲವು ಕಾಯಿಲೆಗಳ ಮೇಲೆ ತುಂಬಾ ಕೆಟ್ಟ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಈ ಕಾರಣದಿಂದಾಗಿ, ಸಮಸ್ಯೆ ಮತ್ತೆ ಹೆಚ್ಚಾಗಬಹುದು. ಬೆಳ್ಳುಳ್ಳಿ ದೈಹಿಕ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಇದನ್ನು ಅತಿಯಾಗಿ ಸೇವಿಸುವುದು ಮತ್ತು ಕೆಲವು ಸಂದರ್ಭಗಳಲ್ಲಿ ತಿನ್ನುವುದು ಹಾನಿಕಾರಕವೆಂದು ಹೇಳಲಾಗುತ್ತದೆ. ಹಾಗಿದ್ರೆ ಬನ್ನಿ ಯಾವ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಬೆಳ್ಳುಳ್ಳಿ ಸೇವನೆಯನ್ನು ತಪ್ಪಿಸಬೇಕು ಎಂಬುದನ್ನು ತಿಳಿಯೋಣ.
ಮಧುಮೇಹ :
ಮಧುಮೇಹ ಹೊಂದಿರುವ ಜನರು ಬೆಳ್ಳುಳ್ಳಿಯನ್ನು ಮಿತಿಯಲ್ಲಿ ಸೇವಿಸಬೇಕು, ಏಕೆಂದರೆ ನಿರ್ಲಕ್ಷ್ಯವಹಿಸಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಕಡಿಮೆಯಾಗಬಹುದು, ಇದರಿಂದಾಗಿ ದೌರ್ಬಲ್ಯ ಅಥವಾ ತಲೆತಿರುಗುವಿಕೆ ಸಮಸ್ಯೆ ಉಂಟಾಗುತ್ತದೆ.
ಯಕೃತ್ತು, ಕರುಳು ಮತ್ತು ಹೊಟ್ಟೆಯ ಅಸ್ವಸ್ಥತೆಗಳು :
ಯಕೃತ್ತು, ಕರುಳು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವ ಜನರು ಬೆಳ್ಳುಳ್ಳಿಯನ್ನು ತಿನ್ನುವುದನ್ನು ತ್ಯಜಿಸಬೇಕು. ಏಕೆಂದರೆ ಕರುಳಿನಲ್ಲಿ ಗಾಯಗಳು ಮತ್ತು ಗುಳ್ಳೆಗಳು ಉಂಟಾದಾಗ ಬೆಳ್ಳುಳ್ಳಿ ನೋವನ್ನು ಹೆಚ್ಚಿಸುತ್ತದೆ. ಯಕೃತ್ತಿನ ರೋಗಿಗಳು ಬೆಳ್ಳುಳ್ಳಿಯೊಂದಿಗೆ ಪ್ರತಿಕ್ರಿಯಿಸುವ ಕೆಲವು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ.
ಆಪರೇಷನ್ ಮಾಡಿಸಿಕೊಂಡವರು :
ಇತ್ತೀಚೆಗೆ ಆಪರೇಷನ್ ಮಾಡಿಸಿಕೊಂಡವರಿಗೆ ಬೆಳ್ಳುಳ್ಳಿ ಅಪಾಯಕಾರಿ ಎಂದು ಸಾಬೀತಾಗಿದೆ. ವಾಸ್ತವವಾಗಿ ಈ ಆಹಾರವು ನೈಸರ್ಗಿಕ ರಕ್ತವನ್ನು ತೆಳುಗೊಳಿಸಲು ಕಾರ್ಯನಿರ್ವಹಿಸುತ್ತದೆ. ರಕ್ತವು ತೆಳುವಾದ್ರೆ ಗಾಯ ಗುಣವಾಗಲು ಸಮಯ ತೆಗೆದುಕೊಳ್ಳಬಹುದು.