Honda : ಹೊಸ ಹೋಂಡಾ ಆಕ್ಟೀವಾ 125 H-Smart ನ ವಿವರಗಳು ಇಲ್ಲಿದೆ!

Honda activa 125 H-smart : ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು (EV) ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಜನಪ್ರಿಯತೆಯನ್ನು ಪಡೆಯುತ್ತಿದೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್(Electric Scooters) ಹಾಗೂ ಬೈಕ್ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದು, ಜನರ ನಿರೀಕ್ಷೆ ತಕ್ಕಂತೆ ವಿಭಿನ್ನ ವಿಶೇಷತೆ ಮೂಲಕ ವಾಹನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಡುತ್ತಿವೆ. ಇದೀಗ, ವಾಹನ ಪ್ರಿಯರಿಗೆ ಸಿಹಿ ಸುದ್ದಿಯೊಂದು ಎದುರು ನೋಡುತ್ತಿದೆ.

ಜನ ಮನದಲ್ಲಿ ವಿಶೇಷ ಸ್ಥಾನ ಪಡೆದಿರುವ ಹೋಂಡಾ ಆಕ್ಟೀವಾ(Honda Activa) ಸ್ಕೂಟರ್ ವಿಭಾಗದಲ್ಲಿ ಸ್ಥಾನದಲ್ಲಿ ಮುಂಚೂಣಿ ಸಾಧಿಸಿರುವ ಸ್ಕೂಟರ್ ಅನೇಕ ವಿಶೇಷತೆಯನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ತನ್ನ ಹವಾ ಸೃಷ್ಟಿ ಮಾಡಲು ಅಣಿಯಾಗಿದೆ. ಆಕ್ಟಿವಾದ(Honda Activa 125 H-Smart) ಆವೃತ್ತಿಯನ್ನು ಪರಿಚಯಿಸಿದ್ದು, ಇದು ಸ್ಮಾರ್ಟ್ ಕೀ ಸಿಸ್ಟಮ್( Smart Key System) ವಿಶೇಷತೆಯನ್ನು ಒಳಗೊಂಡಿದೆ. ಈ ವಾಹನ ಸವಾರರು ಭೌತಿಕ ಕೀಯನ್ನು ಬಳಕೆ ಮಾಡದೆಯೇ ಸ್ಕೂಟರ್ (Scooter)ಅನ್ನು ಲಾಕ್ ಮತ್ತು ಅನ್ಲಾಕ್ ಮಾಡಲು ಅವಕಾಶ ಕಲ್ಪಿಸುತ್ತದೆ. ಈ ಹೊಸ ವೈಶಿಷ್ಟ್ಯದಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಇದನ್ನು ಮನಗಂಡ ಹೋಂಡಾ ಈ ತಂತ್ರಜ್ಞಾನವನ್ನು 125cc ರೂಪಾಂತರಕ್ಕೂ ಪರಿಚಯಿಸಲು ಮುಂದಾಗಿದೆ.

ಹೋಂಡಾ ಆಕ್ಟಿವಾ ಡಿಜಿಟಲ್ ಕ್ಲಸ್ಟರ್ ಮತ್ತು ಬ್ಲೂಟೂತ್ ಸಂಪರ್ಕದ ಜೊತೆಗೆ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬ ವಿಚಾರ ಎಲ್ಲೆಡೆ ಕೇಳಿ ಬರುತ್ತಿದೆ. ಇದರ ನಡುವೆ, ಆಕ್ಟೀವಾ 125 ಮಾದರಿಯನ್ನು ಇನ್ನೂ ಹೊಸ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲು ಸಿದ್ಧತೆ ಮಾಡಲಾಗುತ್ತಿದೆ. ವಿತರಕರ ಮೂಲಗಳ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡುವ ಪೋಸ್ಟರ್ ಚಿತ್ರಗಳು ಬಿಡುಗಡೆಯಾಗಿದೆ. Activa 125 H-Smart ಆವೃತ್ತಿಯ ಹೊಸ ಚಿತ್ರಗಳು ವೈರಲ್ ಆಗಿದ್ದು ಇದನ್ನು Smartiva ಎಂದು ಕರೆಯಲಾಗಿದೆ.

ಸ್ಮಾರ್ಟ್ ಫೈಂಡ್, ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಸ್ಟಾರ್ಟ್ ಮತ್ತು ಸ್ಮಾರ್ಟ್ ಸೇಫ್‌ನಂತಹ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸುವ ಹೊಸ ಸ್ಮಾರ್ಟ್ ಕೀಯ ಲಭ್ಯತೆಯು ಇದರಲ್ಲಿ ಮುಖ್ಯ ವಿಶೇಷತೆಯಾಗಿದೆ. ಸ್ಮಾರ್ಟ್ ಕೀಯಲ್ಲಿರುವ ಆನ್ಸರ್ ಬ್ಯಾಕ್ ವ್ಯವಸ್ಥೆಯು ವಾಹನವನ್ನು ಸುಲಭವಾಗಿ ಕಂಡುಹಿಡಿಯಲು ನೆರವಾಗುತ್ತದೆ. ಆನ್ಸರ್ ಬ್ಯಾಕ್ ಬಟನ್ ಒತ್ತಿದಾಗ ಎಲ್ಲಾ ನಾಲ್ಕು ಟರ್ನ್ ಇಂಡಿಕೇಟರ್‌ಗಳು ಫ್ಲ್ಯಾಷ್ ಆಗುತ್ತವೆ. ದೊಡ್ಡ ಪಾರ್ಕಿಂಗ್ ಪ್ರದೇಶದಲ್ಲಿ ಸ್ಕೂಟರ್ ಅನ್ನು ಪತ್ತೆಹಚ್ಚುವಲ್ಲಿ ಈ ವಿಶೇಷತೆ ನೆರವಾಗುತ್ತದೆ.

ಮ್ಯಾಪ್ ಮಾಡಲಾದ ಸ್ಮಾರ್ಟ್ ಇಸಿಯು ಮತ್ತು ಸ್ಮಾರ್ಟ್ ಕೀ ನಡುವೆ ಎಲೆಕ್ಟ್ರಾನಿಕ್ ಹೊಂದಾಣಿಕೆ (ID) ಮೂಲಕ ರಕ್ಷಣಾ ಸಾಧನದ ರೀತಿ ಕಾರ್ಯ ನಿರ್ವಹಿಸುತ್ತದೆ. ಇದರಿಂದಾಗಿ ವಾಹನ ಕಳ್ಳತನವಾಗಬಹುದು ಎಂಬ ಭೀತಿ ಇರುವುದಿಲ್ಲ. ಸ್ಮಾರ್ಟ್ ಕೀಯು ಇಮೊಬಿಲೈಸರ್ ವ್ಯವಸ್ಥೆಯನ್ನು ಒಳಗೊಂಡಿದ್ದು, ಇದು ನೋಂದಾಯಿಸದ ಕೀಯೊಂದಿಗೆ ಎಂಜಿನ್ ಅನ್ನು ಪ್ರಾರಂಭವಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಸ್ಮಾರ್ಟ್ ಕೀಗೆ ಸುರಕ್ಷಿತ ಸಂಪರ್ಕವಿಲ್ಲದೆ ಇಮೊಬಿಲೈಸರ್ ಸಿಸ್ಟಮ್ ಸಕ್ರಿಯವಾಗುವುದಿಲ್ಲ ಎಂಬ ಬಗ್ಗೆ ಕಂಪನಿ ಮಾಹಿತಿ ನೀಡಿದೆ.

ಭೌತಿಕ ಕೀಯನ್ನು ಬಳಸದೆಯೇ ವಾಹನವನ್ನು ಲಾಕ್(Lock) ಮಾಡಲು ಮತ್ತು ಅನ್ಲಾಕ್ (Unlock)ಮಾಡಲು ಸ್ಮಾರ್ಟ್ ಕೀ(Smart Key) ಸಹಕರಿಸುತ್ತದೆ. ಫಿಸಿಕಲ್ ಕೀ ಬಳಸದೆ ವಾಹನವನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಸ್ಮಾರ್ಟ್ ಕೀ ಬಳಕೆ ಮಾಡುವ ವಿಶೇಷತೆ ಜೊತೆಗೆ ಒಂದು ವೇಳೆ ಇದನ್ನು ಸಕ್ರಿಯಗೊಳಿಸಿದ 20 ಸೆಕೆಂಡುಗಳಲ್ಲಿ ಸಿಸ್ಟಮ್ ಯಾವುದೇ ಚಟುವಟಿಕೆಯನ್ನು ಗುರುತಿಸಲು ಆಗದೇ ಇದ್ದಲ್ಲಿ ಸ್ವಯಂಚಾಲಿತವಾಗಿ ಆಫ್ ಆಗಲು ಹೋಂಡಾ, ಹೊಸ ಸ್ಕೂಟರ್ ಅನ್ನು ಸಂಯೋಜನೆ ಮಾಡಲಾಗಿದೆ. ಸ್ಮಾರ್ಟ್ ಕೀ ಸ್ಕೂಟರ್‌ನ 2 ಮೀಟರ್‌ಗಳ ಒಳಗಿದ್ದಲ್ಲಿ, ಸವಾರನು ಲಾಕ್ ಮೋಡ್‌ನಲ್ಲಿರುವ ನಾಬ್ ಅನ್ನು ಇಗ್ನಿಷನ್ ಸ್ಥಾನಕ್ಕೆ ತಿರುಗಿಸುವ ಹಾಗೂ ಕೀಯನ್ನು ತೆಗೆಯದೆ ಸ್ಟಾರ್ಟ್ ಬಟನ್ ಒತ್ತುವ ಮೂಲಕ ಸರಾಗವಾಗಿ ಮುಂದೆ ಸಾಗಬಹುದು.

ಇದನ್ನೂ ಓದಿ: Bride to Serve water : ಮದುವೆ ಖರ್ಚು ಹೆಚ್ಚಾಗುತ್ತೆ ಎಂದು ಕೇವಲ ನೀರು ಕೊಟ್ಟು ಉಪಚರಿಸಿದ ವಧು!!!

Leave A Reply

Your email address will not be published.