ಶುಭಕಾರ್ಯದ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಮಾವಿನ ಸೊಪ್ಪಿನ ತೋರಣವನ್ನು ಕಟ್ಟಲಾಗುತ್ತದೆ, ಕಾರಣ ಏನು ಗೊತ್ತಾ?
Mango leaf: ಹಿಂದುಗಳ ಪಾಲಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಹಿಡಿದು ಪ್ರತಿದಿನ ಒಂದು ರೀತಿ ಹಬ್ಬವೇ. ವರ್ಷದಲ್ಲಿ ಅದು ಎಷ್ಟೋ ಸಾಲು ಸಾಲು ಹಬ್ಬಗಳನ್ನು ಆಚರಿಸುತ್ತಾರೆ. ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷತೆಯಿದೆ. ಹಬ್ಬದ ಹಿಂದೆ ತನ್ನದೇ ಅದ ಪುರಾಣ ಕಥೆಗಳು ಇವೇ. ಹಬ್ಬ (festival) ಬಂದರೆ ಸಾಕು ಮನೆ ಮನೆಯಲ್ಲಿ ಸಂಭ್ರಮ. ಯಾವುದೇ ಹಬ್ಬ ಅಥವಾ ಶುಭಕಾರ್ಯ ಇರಲಿ ತೋರಣ ಮಾತ್ರ ಸಾಮಾನ್ಯವಾಗಿದೆ. ಮನೆಗೆ ತೋರಣ ಕಟ್ಟಿದ ನಂತರ ಮಾಡುವ ಕಾರ್ಯಕ್ಕೆ ಕಳೆ ಬರುವುದು. ಹಾಗಾದರೆ ಶುಭ ಕಾರ್ಯದ ದಿನ ಮಾವಿನ ಸೊಪ್ಪಿನ (Mango leaf) ತೋರಣ ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ.
ಪ್ರಮುಖವಾಗಿ ಒಂದು ಅಂಶವೆಂದರೆ ಮಾವಿನ ತಳಿರು ತೋರಣ ಬಳಕೆ ತುಂಬಾ ವರುಷಗಳಿಂದ ಇದೆ. ಯಾವುದೇ ಹಬ್ಬ ಹರಿದಿನ ಸಭೆ ಸಮಾರಂಭ ಹೀಗೆ ಏನೇ ಧಾರ್ಮಿಕ ಕಾರ್ಯಕ್ರಮಗಳಾದರೆ ಅಲ್ಲಿ ಮಾವಿನ ತೋರಣ ಇದ್ದೇ ಇರುತ್ತದೆ ಬೇಕೆ ಬೇಕು. ಇನ್ನೂ ಅದು ಊರ ಹೆಬ್ಬಾಗಿಲೇ ಆಗಿರಬಹುದು, ದೇವಸ್ಥಾನದ ಮುಖ್ಯಾದ್ವಾರವಾಗಿರಬಹುದು. ಮನೆಯ ಮುಂಬಾಗಿಲಾಗಿರಬಹುದು, ದೇವರ ಕೋಣೆಯಿಂದ ಹಿಡಿದು ಧಾರ್ಮಿಕ ಮಂಟಪದವರೆಗೆ ಬೇಕೆ ಬೇಕು. ಇಲ್ಲವೇ ತೆರೆದ ಚಪ್ಪರಗಳಾಗಿರಬಹುದು ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಮಾವಿನ ತಳಿರು ತೋರಣ ಕಣ್ಣಿಗೆ ಎದ್ದು ಕಾಣುತ್ತಿರುತ್ತದೆ.
ಮಾವು ಎನ್ನುವುದು ಶುಭದ ಸಂಕೇತ. ಮಾವಿನ ಎಲೆಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಮನೆ ಬಾಗಿಲಿಗೆ ತೋರಣ ಕಟ್ಟುವುದು ದೇವಾನುದೇವತೆಗಳನ್ನು ಸ್ವಾಗತಿಸುವುದು ಎಂದು ಅರ್ಥ. ದೇವರ ಮನೆಯ ಬಾಗಿಲ ಹೊಸ್ತಿಲಲ್ಲಿ ಶ್ರೀ ನರಸಿಂಹಸ್ವಾಮಿ ಸ್ಥಿತನಾಗಿ ಇರುತ್ತಾನೆ ಎನ್ನುವ ನಂಬಿಕೆ ಇದೆ. ದೇವನುದೇವತೆಗಳು ಮನೆಯ ಮುಖ್ಯದ್ವಾರದಿಂದ ಬಾಗಿಲನ್ನು ಪ್ರವೇಶ ಮಾಡುವುದು.
ಇದೇ ಕಾರಣಕ್ಕೆ ದೇವರ ಪೂಜೆಯಾ ವೇಳೆ ಮಾವಿನ ಎಲೆಗೆ ಅಷ್ಟು ಪ್ರಾಮುಖ್ಯತೆ ಇದೆ.
ಅಲ್ಲದೆ, ಮಾವಿನ ತೋರಣವನ್ನು ಬಾಗಿಲಿಗೆ ಕಟ್ಟುವುದರ ಹಿಂದೆಯೂ ಹತ್ತಾರು ಕಥೆಗಳು ಇವೇ. ಕೆಟ್ಟ ದೃಷ್ಟಿಯಿಂದ ರಕ್ಷಣೆ ಮಾಡಿಕೊಳ್ಳುವುದಕ್ಕೆ ಮಾವಿನ ತೋರಣವನ್ನು ಕಟ್ಟುವುದು. ಮನೆಯಲ್ಲಿ ತೋರಣ ಕಟ್ಟಿದರೆ ಸಕಲ ಸೌಭಾಗ್ಯವು ಕೂಡ ಒಲಿದು ಬರುತ್ತದೆ. ಇನ್ನು ಮಾವಿನ ಎಲೆಯೇ ತೋರಣಕ್ಕೆ ಏಕೆ ಬೇಕೆಂದರೆ, ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಗಾಲದ ಡೈಆಕ್ಸೈಡನ್ನು ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.
ಮಾವಿನ ಎಲೆ ಉಳಿದೆಲ್ಲಾ ಎಲೆಗಳಿಗಿಂತ ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ. ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳಸುತ್ತೇವೆ. ಇನ್ನು ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ.
ಮನೆಯ ವಾತವಾರಣ ಶುಭ್ರವಾಗಿದ್ದು ಆ ವ್ಯಕ್ತಿಯ ಮನಸ್ಸು ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ. ಇದು ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ ಇರುವಂತೆ ಮಾಡಿ, ಅವುಗಳು ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ. ಈ ಎಲ್ಲಾ ಕಾರಣದಿಂದ ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಿಗೆ ಮಾವಿನ ಸೊಪ್ಪಿನ ತೋರಣವನ್ನು ಕಟ್ಟಲಾಗುತ್ತದೆ.
ಇದನ್ನೂ ಓದಿ: Hanging Death Penalty : ನೇಣುಬಿಗಿದು ಮರಣದಂಡನೆ ವಿಧಿಸುವ ಕುರಿತು ಸುಪ್ರೀಂಕೋರ್ಟ್ ಹೇಳಿದ್ದೇನು?