Home Education School Meals and Ragimalt: ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ! ದೊರೆಯಲಿದೆ ಬಿಸಿಯೂಟದ ಜೊತೆಗೆ...

School Meals and Ragimalt: ಸರಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ! ದೊರೆಯಲಿದೆ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್!

School Meals and Ragimalt

Hindu neighbor gifts plot of land

Hindu neighbour gifts land to Muslim journalist

School Meals and Ragimalt: ಸರ್ಕಾರವು (government) ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ (government school) ವಿದ್ಯಾಭ್ಯಾಸ ಮಾಡುವಂತೆ ಪ್ರೇರೆಪಿಸಲು ಹಲವಾರು ಯೋಜನೆಗಳನ್ನು ತಂದಿದೆ. ಸರ್ಕಾರಿ ಶಾಲೆಗಳಿಂದ ಅನೇಕ ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ದೊರೆತಿದೆ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವಂತೆ ಪ್ರೋತ್ಸಾಹಿಸಲು ಉತ್ತಮ ಶಿಕ್ಷಣದ ಜೊತೆಗೆ ಸಮವಸ್ತ್ರ (school uniform), ಪಠ್ಯಪುಸ್ತಕ, ಹಾಲು (milk), ಮಧ್ಯಾಹ್ನದ ಬಿಸಿಊಟ ಎಲ್ಲವನ್ನೂ ಉಚಿತವಾಗಿಯೇ ನೀಡುತ್ತಿದೆ. ಇದೀಗ ಮಕ್ಕಳು ಇನ್ನಷ್ಟು ಪೌಷ್ಟಿಕತೆಯಿಂದ ಇರಬೇಕು ಎನ್ನುವ ಉದ್ದೇಶದಿಂದ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನದ ಜೊತೆಗೆ ಇನ್ಮುಂದೆ ರಾಗಿ ಮಾಲ್ಟ್ (School Meals and Ragimalt) ಸಿಗಲಿದೆ.

ಹೌದು, ಆಂಧ್ರಪ್ರದೇಶದಲ್ಲಿ (andrapradesh) ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್ ಕೂಡ ಸಿಗಲಿದೆ. ಈಗಾಗಲೇ ಆಂಧ್ರದಲ್ಲಿ ವಿದ್ಯಾರ್ಥಿಗಳಿಗೆ ಬೇಯಿಸಿದ ಮೊಟ್ಟೆ (egg), ಬೆಲ್ಲದಿಂದ ಮಾಡಿದ ಕಡ್ಲೆ ಮಿಠಾಯಿ ಸೇರಿದಂತೆ ಒಟ್ಟು 15 ರೀತಿಯ ಖಾದ್ಯಗಳನ್ನು ನೀಡಲಾಗುತ್ತಿದೆ. ಇನ್ನುಮುಂದೆ ಮಧ್ಯಾಹ್ನದ ಭೋಜನದ ಜೊತೆಗೆ ರಾಗಿ ಮಾಲ್ಟ್ ಕೂಡ ಸಿಗಲಿದೆ.

‘ಜಗನಣ್ಣ ಗೋರು ಮುದ್ದಾ ಯೋಜನೆ’ಯ ಅನ್ವಯ 44,392 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 37.6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಇದೀಗ ನೀಡುತ್ತಿರುವ ಆಹಾರದ ಜೊತೆಗೆ ಸುಮಾರು 86 ಕೋಟಿ ರೂ. ವೆಚ್ಚದಲ್ಲಿ ರಾಗಿ ಮಾಲ್ಟ್ ಕೂಡ ನೀಡಲಾಗುವುದು ಎಂದು ಆಂಧ್ರ ಮುಖ್ಯಮಂತ್ರಿ ವೈ.ಎಸ್‌.ಜಗನ್ಮೋಹನ್‌ ರೆಡ್ಡಿ ಘೋಷಣೆ ಮಾಡಿದ್ದಾರೆ.

“ ರಾಗಿ ಮಾಲ್ಟ್ ಮಕ್ಕಳ ಬೆಳವಣಿಗೆಗೆ ಪೂರಕವಾದ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಒದಗಿಸುತ್ತದೆ. ಮೆನುವಿಗೆ ರಾಗಿ ಮಾಲ್ಟ್ ಸೇರಿಸುವುದರಿಂದ ವಾರ್ಷಿಕ ವೆಚ್ಚ 1,824 ಕೋಟಿ ರೂ.ಗಳಿಂದ 1,910 ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ. ಈ ಹೆಚ್ಚುವರಿ 86 ಕೋಟಿ ರೂ. ವೆಚ್ಚದಲ್ಲಿ 42 ಕೋಟಿ ರೂ.ಗಳನ್ನು ಸತ್ಯಸಾಯಿ ಸೆಂಟ್ರಲ್‌ ಟ್ರಸ್ಟ್‌ ನೀಡುತ್ತದೆ’ ಎಂದು ಸಿಎಂ ಜಗನ್‌ ತಿಳಿಸಿದ್ದಾರೆ.