Optical illusion Chanllenge : ಓದುಗರೇ ನಿಮ್ಮ ಕಣ್ಣಿಗೊಂದು ಸವಾಲು! ಈ ಚಿತ್ರದಲ್ಲಿರುವ ಗೂಬೆನಾ ಪತ್ತೆ ಹಚ್ಚಬಲ್ಲಿರಾ?

Share the Article

Optical illusion Chanllenge : ನಿಮ್ಮ ಕಣ್ಣುಗಳು ಎಷ್ಟು ಸೂಕ್ಷ್ಮ ಆಗಿವೆ ಮತ್ತು ನಿಮ್ಮ ಬುದ್ಧಿ ವಂತಿಕೆ ಯನ್ನು ಪರೀಕ್ಷಿಸಲು ಒಂದು ಸವಾಲು ಇಲ್ಲಿದೆ. ಆದರೆ ನಿಮ್ಮ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಬುದ್ಧಿವಂತಿಕೆ ನಿರ್ಧಾರ ಆಗಲಿದೆ. ಹಾಗೆಯೇ ಇಲ್ಲೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ (social media ) ವೈರಲ್ ಆಗಿದೆ.

ಇದೀಗ ನಿಮ್ಮ ದೃಷ್ಟಿ ಕೌಶಲ್ಯವನ್ನು ನಿರ್ಧರಿಸಲು ಈ ಸವಾಲನ್ನು ಸ್ವೀಕರಿಸಿ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮರವೊಂದರ ಕಾಂಡದ ಸ್ಪಷ್ಟ ಚಿತ್ರಣವನ್ನು ನೋಡಬಹುದು. ಕಾಂಡದ ಒಂದು ಭಾಗದಲ್ಲಿ ಒಂದು ಗೂಬೆ ಕುಳಿತಿದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಗೂಬೆಯ (Owl) ಬಣ್ಣ ಮತ್ತು ಮರದ ಕಾಂಡದ ಬಣ್ಣ ಒಂದೇ ರೀತಿ ಇದೆ.
ಒಂದನ್ನೊಂದು ಬೆರೆತು ಹೋಗಿದ್ದು, ಗೂಬೆಯು ಅಷ್ಟು ಸುಲಭವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಗೂಬೆ ಎಲ್ಲಿದೆ ಎಂದು ಪತ್ತೆ ಹಚ್ಚಬೇಕು (Optical illusion Chanllenge). ನಿಮ್ಮ ಸಮಯ ಈಗ ಶುರು.

10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿ ಗೂಬೆಯನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಗೂಬೆಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

ಕೆಲವೊಂದು ಸವಾಲು ನಮ್ಮ ಬುದ್ದಿವಂತಿಕೆ, ದೇಹಬಲಾಡ್ಯತೆ, ಆರೋಗ್ಯ ದ ಬಗೆಗಿನ ಮೌಲ್ಯ ಮಾಪನ ಮಾಡುತ್ತದೆ. ಇಂತಹ ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

Leave A Reply