Mosquito Bite Complaint : ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿದೆ ಎಂದು ದೂರು ಕೊಟ್ಟ ಪತಿರಾಯ! ಪೊಲೀಸರು ಮಾಡಿದ್ದೇನು ಗೊತ್ತೇ?

Uttar pradesh Police: ಕೆಲವೊಮ್ಮೆ ಕೆಲ ವಿಚಾರಗಳನ್ನು ಕೇಳಿದಾಗ ಹೀಗೂ ಉಂಟೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಆರಕ್ಷಕರು(Police) ಎಂದರೇ ಕೇವಲ ತಪ್ಪಿತಸ್ಥರ ಹೆಡೆ ಮುರಿ ಕಟ್ಟುದನ್ನು ನೋಡಿರುತ್ತೇವೆ. ಆದರೆ, ನಿಮ್ಮ ರಕ್ಷಣೆಗೆ (Safety)ನಾವೂ ಸದಾ ಬದ್ದ ಎಂಬ ಮಾತಿನಂತೆ ನಡೆದುಕೊಂಡ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

 

ಅಸಾದ್ ಖಾನ್ ಎಂಬಾತ ರಾಜ್​ ಮೊಹಲ್ಲಾ ನಿವಾಸಿಯಾಗಿದ್ದು, ಆತನ ಪತ್ನಿ ತುಂಬು ಗರ್ಭಿಣಿಯಾಗಿದ್ದು(Pregnent )ಹೆರಿಗೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಚಂದೌಸಿಯಲ್ಲಿರುವ ಹರಿಪ್ರಕಾಶ್​ ನರ್ಸಿಂಗ್​ ಹೋಮ್​​ಗೆ(Nursing Home) ದಾಖಲು ಮಾಡಿದ್ದರಂತೆ. ಆಕೆಗೆ ಅಲ್ಲಿ ಹೆಣ್ಣು ಮಗು (Child) ಹುಟ್ಟಿದೆ. ಆದರೆ ನರ್ಸಿಂಗ್ ಹೋಮ್ ನಲ್ಲಿ ತುಂಬಾ ಸೊಳ್ಳೆಯ ಕಾಟವಿತ್ತಂತೆ. ಆದರೆ, ಪತ್ನಿ ಸೊಳ್ಳೆಯ ಕಡಿತದಿಂದ ಒದ್ದಾಡುತ್ತಾ ಇದ್ದದ್ದನ್ನು ಕಂಡ ಪತಿ ಮಾಡಿದ ಮಾಸ್ಟರ್​ ಪ್ಲ್ಯಾನ್​​(Intresting Fact) ಕೇಳಿದರೆ ಶಹಭಾಶ್ ಹೇಳಲೇಬೇಕು. ಅಷ್ಟಕ್ಕೂ ಪತಿ ಮಾಡಿದ್ದಾದರೂ ಏನು?

ಅಸಾದ್ ಖಾನ್ ತನ್ನ ಪತ್ನಿಯನ್ನು ಹೆರಿಗೆಗಾಗಿ ನರ್ಸಿಂಗ್​ಹೋಮ್​​ಗೆ ದಾಖಲಾಗಿದ್ದು, ತನ್ನ ಪತ್ನಿಗೆ ಸೊಳ್ಳೆಗಳು ಕಚ್ಚುತ್ತಿವೆ ಎಂದು ಟ್ವೀಟ್ ಮಾಡಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಅಸಾದ್ ಖಾನ್ ” ತನ್ನ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹರಿಪ್ರಕಾಶ್​ ನರ್ಸಿಂಗ್​ ಹೋಂನಲ್ಲಿ ನನ್ನ ಪತ್ನಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಇಲ್ಲಿ ಸೊಳ್ಳೆಯ ಕಾಟ ಹೆಚ್ಚಿದ್ದು, ದಯವಿಟ್ಟು ನನಗೆ ಸೊಳ್ಳೆಬತ್ತಿ ಕೊಟ್ಟು ಉಪಕಾರ ಮಾಡಿದ್ದಾರೆ ” ಎಂದು ಉತ್ತರ ಪ್ರದೇಶದ ಪೊಲೀಸ್ (Uttar pradesh Police) ಮತ್ತು ಸಂಭಾಲ್ ನಗರದ ಪೊಲೀಸರನ್ನು ಟ್ಯಾಗ್ ಮಾಡಿ, ಟ್ವೀಟ್ (Tweet) ಮಾಡಿದ್ದಾರೆ.

ಅಸಾದ್ ಖಾನ್ ಟ್ವೀಟ್ ಮಾಡಿದ ಬಳಿಕ ಕೆಲವೇ ನಿಮಿಷಗಳಲ್ಲಿ ಉತ್ತರ ಪ್ರದೇಶ ಪೊಲೀಸರು ಸೊಳ್ಳೆ ಬತ್ತಿಯನ್ನು ಆಸ್ಪತ್ರೆಗೆ ತಂದುಕೊಟ್ಟು ಅಸಾದ್ ಖಾನ್​ಗೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಯುಪಿ ಪೊಲೀಸರು ಟ್ವೀಟ್ ಮಾಡಿದ್ದಾರೆ. ” ಮಾಫಿಯಾವನ್ನು ಬಗ್ಗುಬಡಿಯುವುದರಿಂದ ಹಿಡಿದು, ಸೊಳ್ಳೆಗಳಿಂದ ಪರಿಹಾರ ನೀಡುವುದರವರೆಗೆ ಎಲ್ಲದಕ್ಕೂ ಸಿದ್ಧ’ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೀಗ, ಅಸಾದ್ ಖಾನ್​ ಕೂಡ ಟ್ವೀಟ್(Tweet) ಮಾಡಿ ಉತ್ತರ ಪ್ರದೇಶದ(Uttar Pradesh) ಪೊಲೀಸರಿಗೆ(Police) ಧನ್ಯವಾದ ತಿಳಿಸಿದ್ದಾರೆ. ಏನೇ ಆಗಲಿ ಮಡದಿಯ ಕಾಳಜಿ ಮಾಡುವ ಸಲುವಾಗಿ ಪತಿರಾಯ ಮಾಡಿದ ಘನಕಾರ್ಯ ನೋಡಿ, ಇನ್ನೂ ಮುಂದೆ ಉಳಿದವರು ಇದೆ ಹಾದಿಯನ್ನು ಮುಂದುವರೆಸಿದರು ಅಚ್ಚರಿಯಿಲ್ಲ.

Leave A Reply

Your email address will not be published.