Kawasaki : ಕವಾಸಕಿ ಬಿಡುಗಡೆ ಮಾಡಿದೆ 2 ಮಾದರಿಯ ಬೈಕ್ ಬಿಡುಗಡೆ! ಬೆಲೆ,ವಿಶೇಷತೆ ಇಲ್ಲಿದೆ!

kawasaki : ರಸ್ತೆಯಲ್ಲಿ ಸೂಪರ್‌ಬೈಕ್‌ಗಳು ಹೋಗುತ್ತಿದ್ದರೆ ಎಲ್ಲಾರ ಕಣ್ಣು ಅದರ ಮೇಲೆ ಇರುತ್ತದೆ. ಇಂತಹ ಬೈಕ್‌ಗಳು ರಸ್ತೆಯಲ್ಲಿ ಅಪರೂಪ. ಆದರೆ ನಗರ ಪ್ರದೇಶಗಳಲ್ಲಿ ಸೂಪರ್‌ಬೈಕ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರಲ್ಲಿ ಬೈಕ್ ರೈಡ್ ಶೋ ಅಲ್ಲಲ್ಲಿ ನಾವು ನೋಡಬಹುದು. ಇದೀಗ ಕವಾಸಕಿ (kawasaki) ಅಂತಿಮವಾಗಿ ತನ್ನ ಪ್ರಮುಖ ಮಾದರಿಗಳಾದ ನಿಂಜಾ Z H2 ಮತ್ತು Z H2 SE ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

 

ಪ್ರಮುಖವಾಗಿ 2023 ಕವಾಸಕಿ ನಿಂಜಾ Z H2 ಮತ್ತು Z H2 SE ಹಲವಾರು ವೈಶಿಷ್ಟ್ಯಗಳೊಂದಿಗೆ ಬರಲಿದ್ದು, ಇವುಗಳಲ್ಲಿ ಪೂರ್ಣ-LED ಲೈಟಿಂಗ್, ರೈಡಿಂಗ್ ಮೋಡ್‌ಗಳು, ಪವರ್ ಮೋಡ್‌ಗಳು, ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ TFT ಡಿಸ್ಪ್ಲೇ ಸೇರಿವೆ.

ನಿಂಜಾ Z H2 ಸಿಂಗಲ್ ಸೈಡ್-ಸ್ಲಂಗ್ ಎಕ್ಸಾಸ್ಟ್, ಸ್ಪ್ಲಿಟ್ ಸೀಟ್ ಮತ್ತು ಚಿನ್ ಫೇರಿಂಗ್ ಅನ್ನು ಒಳಗೊಂಡಿದೆ.

ಅದಲ್ಲದೆ 2023 Z H2 ಮತ್ತು Z H2 SE ಎರಡೂ 998cc 4-ಸಿಲಿಂಡರ್ ಸೂಪರ್‌ಚಾರ್ಜ್ಡ್ ಮೋಟರ್‌ನಿಂದ ಶಕ್ತಿಯನ್ನು ಪಡೆದುಕೊಳ್ಳುತ್ತವೆ.

ನಿಂಜಾ Z H2 ಮತ್ತು Z H2 SE ಇದರ ಬೆಲೆಯು ಎಕ್ಸ್ ಶೋ ರೂಂ ನಲ್ಲಿ 23.02 ಲಕ್ಷದಿಂದ ಪ್ರಾರಂಭವಾಗಲಿದ್ದು 27.22 ಲಕ್ಷದವರೆಗೆ ವರೆಗೆ ಇದೆ. ಇನ್ನು ಈ ಎರಡೂ ಮಾದರಿಗಳನ್ನು ಒಂದೇ ಬಣ್ಣದ ಆಯ್ಕೆಯಲ್ಲಿ ನೀಡಲಾಗುತ್ತದೆ. ಸದ್ಯ ಕವಾಸಕಿ ಮಾರುಕಟ್ಟೆಯಲ್ಲಿ ತನ್ನ ಹವಾ ಎಬ್ಬಿಸಲು ಬರಲಿದೆ.

Leave A Reply

Your email address will not be published.