Best Selling Car : ಅತಿ ಹೆಚ್ಚು ಭರ್ಜರಿ ಸೇಲ್ ಕಂಡ ಕಾರುಗಳಿವು! ಫ್ರೆಬ್ರವರಿ ರಿಪೋರ್ಟ್ ಇಲ್ಲಿದೆ!

Best Selling Car : ಹೊಸ ವರ್ಷದಲ್ಲಿ ಆಟೊಮೊಬೈಲ್ (Automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, 2023ರ ಅಂಕಿ ಅಂಶ ಪ್ರಕಾರ ಕಾರು (Car) ಉದ್ಯಮದ ಮಾರುಕಟ್ಟೆಯಲ್ಲಿ (Market ) ಭಾರತದಲ್ಲಿ( India)ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಪೈಕಿ ಮಾರುತಿ ಸುಜುಕಿ(Maruti Suzuki) ಅಗ್ರಗಣ್ಯ (Top Position)ಸ್ಥಾನದಲ್ಲಿದ್ದು, ಇದರ 6 ಮಾದರಿ ಕಾರುಗಳು ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ಫೆಬ್ರವರಿ 2023ರಲ್ಲಿ(February 2023) ಅತಿಹೆಚ್ಚು ಮಾರಾಟವಾಗಿರುವ ಟಾಪ್ 10 ಕಾರುಗಳು (Best Selling Car) ಯಾವುದು ಎಂದು ನಿಮಗೆ ತಿಳಿದಿದೆಯೇ?

ಮಾರುತಿ ಸುಜುಕಿ, ಹೋಂಡಾ, ಹ್ಯುಂಡೈ, ಮಹೀಂದ್ರಾ ಮತ್ತು ಟಾಟಾ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಾದರಿಗಳ ಅಪ್ಡೇಟ್ ನೀಡಲು ತಯಾರಿ ನಡೆಸುತ್ತಿದೆ. ಹಾಗಿದ್ರೆ, ದೇಶದಲ್ಲಿ ಅತಿಹೆಚ್ಚು ಮಾರಾಟವಾದ 10 ಕಾರುಗಳು ಯಾವುದು? ಎಂಬ ಮಾಹಿತಿ ನಿಮಗಾಗಿ.

ಭಾರತದಲ್ಲಿ ಕಾರುಗಳ ಮಾರಾಟ(Car Sales) ಗಣನೀಯವಾಗಿ ಏರಿಕೆಯಾಗುತ್ತಿದೆ. ಸದ್ಯ, ಫೆಬ್ರುವರಿ ತಿಂಗಳ ವಾಹನ ಮಾರಾಟಗಳ ವಿವರ (Wholesale Car Sales Report) ಪ್ರಕಟವಾಗಿದ್ದು, ವರ್ಷವಾರು ಲೆಕ್ಕದ ಅನುಸಾರ, ಶೇ. 10.41ರಷ್ಟು ಹೆಚ್ಚು ವಾಹನಗಳು ಮಾರಾಟವಾಗಿರುವುದು ವರದಿಯಾಗಿದೆ. 2023ರ ಫೆಬ್ರುವರಿ ತಿಂಗಳಲ್ಲಿ ಭಾರತದಲ್ಲಿ (2023 February Data)3.34 ಲಕ್ಷದಷ್ಟು ಕಾರುಗಳು ಮಾರಾಟವಾಗಿದೆ.

ಅತಿಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು(Best Selling Cars):
ಮಾರುತಿ ಸುಜುಕಿ ಬಲೆನೊ(Maruti Suzuki Baleno) 18,592 ಯುನಿಟ್ಗಳನ್ನು (ಶೇ.48ಷ್ಟು ವಾರ್ಷಿಕ ಬೆಳವಣಿಗೆ) ಮಾರಾಟವಾಗಿದೆ. ಈ ಕಾರಿನ ಬೆಲೆ ಗಮನಿಸಿದರೆ, ಸುಮಾರು 6.5 ಲಕ್ಷ ರೂ.ದಿಂದ ಆರಂಭವಾಗುತ್ತದೆ. ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift)ಕಳೆದ ವರ್ಷ 18,412 ಯುನಿಟ್ಗಳನ್ನು ಮಾರಾಟ ಮಾಡಿದ್ದು, ಈ ವರ್ಷ 19,202 ಯುನಿಟ್ಗಳನ್ನು ಮಾರಾಟ ಮಾಡಿದೆ.

ಮಾರುತಿ ಸುಜುಕಿ ಆಲ್ಟೊ (Maruti Suzuki Alto)ಫೆಬ್ರವರಿ 2022ರಲ್ಲಿ 11,551 ಯುನಿಟ್ಗಳು ಮಾರಾಟ ಮಾಡಿದ್ದು, ಈ ಫೆಬ್ರವರಿಯಲ್ಲಿ 18,114 ಯುನಿಟ್ಗಳನ್ನು ಮಾರಾಟ ಮಾಡಿ ಶೇ.57ರಷ್ಟು ಅರ್ಥಿಕವಾಗಿ ಬೆಳವಣಿಗೆಯಾಗಿದೆ. ಮಾರುತಿ ಸುಜುಕಿ ವ್ಯಾಗನ್ ಆರ್ (Maruti Suzuki WagonR )ಫೆಬ್ರವರಿ 2023ರಲ್ಲಿ 16,889 ಯುನಿಟ್ಗಳನ್ನು ಮಾರಾಟ ಮಾಡಿದ್ದು, ಕಳೆದ ಫೆಬ್ರವರಿಯಲ್ಲಿ 14,669 ಯುನಿಟ್ಗಳನ್ನೂ ಮಾರಾಟ ಮಾಡಿದೆ. ಹೀಗಾಗಿ, ಮಾರಾಟದಲ್ಲಿ ಶೇ.15ರಷ್ಟು ವಾರ್ಷಿಕ ಬೆಳವಣಿಗೆ ಕಂಡುಬಂದಿದೆ.

ಮಾರುತಿ ಸುಜುಕಿ ಡಿಜೈರ್(Maruti Suzuki Dzire) ಈ ಫೆಬ್ರವರಿಯಲ್ಲಿ 16,798 ಯುನಿಟ್ಗಳನ್ನು ಮಾರಾಟ ಮಾಡಿದ್ದು, ಆದರೆ ಕಳೆದ ವರ್ಷದ ಫೆಬ್ರವರಿ 2022ರಲ್ಲಿ ಮಾರಾಟವಾದ 17,438 ಯುನಿಟ್ ಗಳು ಮಾರಾಟವಾಗಿದ್ದು, ಶೇ.4ರಷ್ಟು ಕುಸಿತ ಕಂಡಿದೆ.ಮಾರುತಿ ಸುಜುಕಿ ಬ್ರೆಝಾ(Maruti Suzuki Brezza) 15,787 ಯುನಿಟ್ಗಳನ್ನು ಶೇ.71ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದ್ದು, ಫೆಬ್ರವರಿ 2022ರಲ್ಲಿ ಕೇವಲ 9,256 ಯುನಿಟ್ಗಳು ಮಾರಾಟವಾಗಿದೆ. ಟಾಟಾ ನೆಕ್ಸಾನ್ (Tata Nexon) 13,914 ಯುನಿಟ್ಗಳನ್ನು (ಶೇ.14ರಷ್ಟು ವಾರ್ಷಿಕ ಬೆಳವಣಿಗೆ) ಮಾರಾಟ ಮಾಡಿದೆ.

ಟಾಟಾ ಪಂಚ್(Tata Punch)ಫೆಬ್ರವರಿ 2022ರಲ್ಲಿ ಒಟ್ಟು 9,592 ಯುನಿಟ್ಗಳು ಮಾರಾಟವಾಗಿದ್ದು, ಈ ವರ್ಷ 11,169 ಯುನಿಟ್ಗಳನ್ನು (ಶೇ.16ರಷ್ಟು ಕುಸಿತ) ಮಾರಾಟವಾಗಿದೆ. ಮಾರುತಿ ಸುಜುಕಿ ಇಕೋ(Maruti Suzuki Eeco) ಫೆಬ್ರವರಿ 2022ರಲ್ಲಿ ಇದು ಒಟ್ಟು 9,190 ಯುನಿಟ್ಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷ 11,352 ಯುನಿಟ್ಗಳನ್ನು ಶೇ.24ರಷ್ಟು ವಾರ್ಷಿಕ ಬೆಳವಣಿಗೆ ಕಂಡು ಮಾರಾಟ ಮಾಡಿದೆ. ಕಳೆದ ವರ್ಷ ಫೆಬ್ರವರಿ 2022ರಲ್ಲಿ ಹ್ಯುಂಡೈ ಕ್ರೆಟಾ( Hyundai Creta)9,606 ಯುನಿಟ್ಗಳು ಮಾರಾಟವಾಗಿದ್ದು, ಈ ವರ್ಷ ಶೇ.8ರಷ್ಟು ವಾರ್ಷಿಕ ಬೆಳವಣಿಗೆ ಆಗಿದ್ದು, 10,421 ಯುನಿಟ್ಗಳನ್ನು ಮಾರಾಟ ಮಾಡಿದೆ.

ಇದನ್ನೂ ಓದಿ: Rashmika Mandanna : ಕಿರಿಕ್ ಬೆಡಗಿಯ ಹೊಸ ಕಿರಿಕ್! ಸಾಮಿ ಸಾಮಿ ಸ್ಟೆಪ್ ಹಾಕಲ್ಲ ಅಂದಳು ಬೆಡಗಿ!

Leave A Reply

Your email address will not be published.