Artificial Intelligence : AI ತಂತ್ರಜ್ಞಾನದಿಂದ ಗತಕಾಲದ ಫೋಟೋಗಳ ಸೃಷ್ಟಿ! ನೆಹರೂ, ಗಾಂಧಿ ಸೇರಿ ಹಲವು ವಿದೇಶಿಗರು ಕ್ಲಿಕ್ಕಿಸಿದ ಸೆಲ್ಫಿಗಳೀಗ ವೈರಲ್!

Share the Article

Artificial Intelligence : ಈಗಂತೂ ಬರೀ ತಂತ್ರಜ್ಞಾನದ್ದೆ (Technology) ಹವಾ. ಅದರಲ್ಲೂ ಎಲ್ಲೆಡೆ ಊಹೆಗೂ ನಿಲುಕದ ಈ ಕೃತಕ ಬುದ್ಧಿಮತ್ತೆ (ಎಐ) ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial Intelligence) ಬಗ್ಗೆನೆ ಮಾತು. ಈ AI ಒಂದಿದ್ಧರೆ ಸಾಕು ಅನೇಕ ಕಡೆಗಳಲ್ಲಿ ಒಂದು ಮಾತಿನಿಂದಲೇ ಕೆಲವು ಕೆಲಸಗಳು ಆಗಿಬಿಡ್ತವೆ. ಕೆಲವು ವಾರಗಳ ಹಿಂದೆ ಎಐ ಸಹಾಯದಿಂದ ರಚಿಸಿದ ಭಾರತದ ರಾಜ್ಯಗಳ ವಿವಾಹ ಜೋಡಿಗಳ ಚಿತ್ರಗಳು ಇಂಟರ್ನೆಟ್ ನಲ್ಲಿ ದೊಡ್ಡ ಅಲೆಯನ್ನೆ ಸೃಷ್ಟಿಮಾಡಿದ್ದನ್ನು ನಾವು ನೋಡಿದ್ದೇವು. ಆದರೀಗ ಇದೇ ತಂತ್ರಜ್ಞಾನ ಬಳಸಿ ಗತಕಾಲದ, ಮಹಾನ್ ನಾಯಕರ ಸೆಲ್ಫಿ ಫೋಟೋಗಳನ್ನು ಸೃಷ್ಟಿಸಲಾಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.

ಹೌದು, ಇದೀಗ AI ತಂತ್ರಜ್ಞಾನ ಬಳಸಿ ಮಹಾತ್ಮಾ ಗಾಂಧಿ, ಡಾ.ಬಿಆರ್ ಅಂಬೇಡ್ಕರ್, ಮದರ್ ತೆರೆಸಾ ಸೇರಿದಂತೆ ಹಲವು ದಿಗ್ಗಜರ ಸೆಲ್ಫಿ ಫೋಟೋ ಸೃಷ್ಟಿಸಲಾಗಿದೆ. ತಂತ್ರಜ್ಞಾನದ ಸೆಲ್ಫಿ ಫೋಟೋಗೆ ಭಾರಿ ಮೆಚ್ಚುಗೆ ಜೊತೆ ಅಚ್ಚರಿಯೂ ವ್ಯಕ್ತವಾಗಿದೆ. ಜ್ಯೋ ಜಾನ್ ಮುಲ್ಲೂರು ಅವರು ಆರ್ಟಿಫಿಶೀಲಿಯಲ್ ಇಂಟೆಲಿಜೆನ್ಸ್ ಮೂಲಕ ಸೃಷ್ಟಿಸಿದ ಈ ಫೋಟೋಗಳನ್ನು ಯಾವ ರೀತಿ ಪರಿಶೀಲಿಸಿದರೂ ನಕಲಿ ಎಂದು ಹೇಳಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ನೈಜತವನ್ನು ತರಲಾಗಿದೆ.

ಅಂದಹಾಗೆ ಜ್ಯೋ ಜಾನ್ ಅವರು ತಾವು ಸೃಷ್ಟಿಸಿದ ಈ ಅಚ್ಚರಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಡ್ರೈವ್ ಪರಿಶೀಲಿಸುತ್ತಿರುವಾಗ ನನಗೆ ಗೆಳೆಯರು ಹಲವು ವರ್ಷಗಳ ಹಿಂದೆ ಕಳುಹಿಸಿದ ಸೆಲ್ಫಿ ಫೋಟೋಗಳು ಸಿಕ್ಕಿತು. ಇದರಿಂದ ಪ್ರೇರಿತನಾಗಿ ನಾನೀಗ ಅರ್ಟಿಫಿಶೀಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಬಳಿಕ ಗತಕಾಲದ ಹಲವು ದಿಗ್ಗಜರ ಸೆಲ್ಫಿ ಫೋಟೋಗಳನ್ನು ಸೃಷ್ಟಿಸಿದ್ದೇನೆ ಎಂದು ಜಾನ್ ಮುಲ್ಲೂರ್ ಹೇಳಿಕೊಂಡಿದ್ದಾರೆ.

ಅಂದಹಾಗೆ ಜಾನ್ ಮುಲ್ಲರ್ ಮೂರು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ನಮ್ಮ ಗಾಂಧಿಜೀ, ಮದರ್ ತೆರೆಸಾ, ನೆಹರೂ ಹಾಗೂ ಅಂಬೇಡ್ಕರ್ ಅವರು ಜನರೊಂದಿಗೆ ಸೆಲ್ಫಿ ಹಾಗೂ ಮಾಮುಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಹಲವರು ವಿದೇಶಿ ನಾಯಕರ ಫೋಟೋಗಳಿದ್ದು, ಪೋಸ್ಟ ಸೋವಿಯತ್ ಯೂನಿಯನ್ ನಾಯಕ ಜೊಸೆಫ್ ಸ್ಟಾಲಿನ್, ಅಮೆರಿಕ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್, ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್, ಜಮೈಕಾ ಗಾಯಕ ಬಾಂಬ್ ಮರ್ಲೆ, ಮಾರ್ಕಿಸ್ಟ್ ನಾಯಕ ಚೆ ಗುವೆರಾ ಸೇರಿದಂತೆ ಹಲವು ನಾಯಕರ ಸೆಲ್ಫಿ ಫೋಟೋಗಳನ್ನು AI ತಂತ್ರಜ್ಞಾನದ ಮೂಲಕ ಸೃಷ್ಟಿಸಿ ಪೋಸ್ಟ್ ಮಾಡಲಾಗಿದೆ.

ಇನ್ನು ಮುಲ್ಲೂರು ಫೋಟೋ ಪೋಸ್ಟ್ ಮಾಡಿದ ಬೆನ್ನಲ್ಲೇ ಹಲವರು ಅಚ್ಚರಿ, ಆತಂಕ ಎರಡನ್ನೂ ವ್ಯಕ್ತಪಡಿಸಿದ್ದಾರೆ. ಆರ್ಟಿಫಿಶೀಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಈ ಸಾಧನೆ ಮಾಡಿರುವುದು ಅಚ್ಚರಿಯಾಗಿದೆ. ಆದರೆ ಇದರ ಜೊತೆಗೆ ಆತಂಕವೂ ಎದುರಾಗುತ್ತಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇಷ್ಟು ನೈಜತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದನ್ನು ಸೃಷ್ಟಿಸಿದ್ದರೆ ಇನ್ನು ರಿಯಲ್ ಆಗಿ ತೆಗೆಯೋ ಫೋಟೋ, ವಿಡಿಯೋಗಳ ಕತೆ ಏನು? ಯಾವುದನ್ನೂ ದಾಖಲೆಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ ಇದರಲ್ಲಿ ನಕಲಿ ಯಾವುದು ಅಸಲಿ ಯಾವುದು ಅನ್ನೋದು ಪತ್ತೆ ಹಚ್ಚಲು ಸಾಧ್ಯವಿಲ್ಲ ಬಿಡಿ ಎಂದು ಹಲವರು ಬಗೆಬಗೆಯಾಗಿ ಕಮೆಂಟಿಸುತ್ತಿದ್ದಾರೆ.

ಇದನ್ನೂ ಓದಿ: Patna: ಪಾಟ್ನಾ ರೈಲು ನಿಲ್ದಾಣದಲ್ಲಿ ಪ್ರಸಾರವಾದ `ಬ್ಲೂ ಫಿಲ್ಮ್’ ನನ್ನದೇ ಎಂದಳು ಈ ಖ್ಯಾತ ‘ಪೋರ್ನ್ ಸ್ಟಾರ್’

Leave A Reply