Airtel Recharge Plans : ಏರ್‌ಟೆಲ್‌ ಬಿಡುಗಡೆಗೊಳಿಸಿತು ಮತ್ತೊಂದು ಸೂಪರ್‌ ಪ್ಲ್ಯಾನ್‌ ! ಭರ್ಜರಿ ಡೇಟಾ ನಿಮಗಾಗಿ ಗ್ರಾಹಕರೇ!

Airtel Recharge Plans : ಜಿಯೋ (jio ) ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ (telecom company) ಹೊರಹೊಮ್ಮಿದ ನಂತರ ಇತ್ತ ಏರ್‌ಟೆಲ್ (Airtel) ಕೂಡ ವಿಭಿನ್ನ ಪ್ರಯೋಜನಗಳ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಇದೀಗ ಬೆಂಗಳೂರು (bengaluru) ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿರುವ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ‘ಏರ್‌ಟೆಲ್’ ಆಗಿದೆ. ಇದರ ಜೊತೆಗೆ ಇದೀಗ ಗ್ರಾಹಕರಿಗೆ ಹಲವು ಉತ್ತಮ ರೀಚಾರ್ಜ್ (recharge) ಯೋಜನೆಯನ್ನು ಬಿಡುಗಡೆ ಮಾಡುತ್ತಿದೆ (Airtel Recharge Plans). ಸದ್ಯ ಏರ್‌ಟೆಲ್‌ ಮತ್ತೆ ಹೊಸ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ (postpaid recharge plans) ಪರಿಚಯಿಸಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

499ರೂ. ರೀಚಾರ್ಜ್ ಪ್ಲ್ಯಾನ್‌ : ಈ ರೀಚಾರ್ಜ್ ಪ್ಲ್ಯಾನ್‌ ನಲ್ಲಿ 75GB ಡೇಟಾ ಲಭ್ಯವಾಗಲಿದೆ. ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಲಭ್ಯ. ಅಲ್ಲದೆ, ಹೆಚ್ಚುವರಿಯಾಗಿ ಅಮೆಜಾನ್‌ ಪ್ರೈಮ್‌ ಆಕ್ಸಸ್‌, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಕೂಡ ಇದೆ.

599ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ : ಈ ಯೋಜನೆಯಲ್ಲಿ ಬಳಕೆದಾರರು 75GB ಡೇಟಾವನ್ನು ಪಡೆಯಲಿದ್ದು, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್ ಸಿಗುತ್ತದೆ. ಹಾಗೆಯೇ ಹೆಚ್ಚುವರಿ ಯಾಗಿ ಅಮೆಜಾನ್‌ ಪ್ರೈಮ್‌ ಆಕ್ಸಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಮತ್ತು ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇರಲಿದೆ.

999ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ : ಇದರಲ್ಲಿ ಒಟ್ಟು 100 GB ಡೇಟಾ ಪ್ರಯೋಜನ ದೊರೆಯುತ್ತದೆ. ಅನಿಯಮಿತ ಕರೆ, 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿ ಯಾಗಿ ಅಮೆಜಾನ್‌ ಪ್ರೈಮ್‌ ಪ್ರವೇಶ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಸೌಲಭ್ಯಗಳು ಲಭ್ಯವಾಗಲಿವೆ.

1199ರೂ. ರೀಚಾರ್ಜ್ ಪ್ಲ್ಯಾನ್ : ಒಟ್ಟು 150 GB ಡೇಟಾ ಪ್ರಯೋಜನದ ಜೊತೆಗೆ ಅನಿಯಮಿತ ವಾಯಿಸ್‌ ಕರೆ, 100 ಎಸ್‌ಎಮ್‌ಎಸ್‌ ಪ್ರಯೋಜನ ಇದರಲ್ಲಿ ಲಭ್ಯವಾಗಲಿದೆ. ಹೆಚ್ಚುವರಿ ಯಾಗಿ ನೆಟ್‌ಫ್ಲಿಕ್ಸ್‌ ಬೇಸಿಕ್ ಅನ್ಲಿಮಿಟೆಡ್ ಪ್ರವೇಶ, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಲಭ್ಯವಾಗಲಿವೆ.

1499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್ : 200 GB ಡೇಟಾ ಸೌಲಭ್ಯ. ಅನಿಯಮಿತ ಕರೆ, 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿ ಯಾಗಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಪ್ರವೇಶ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್, ವಿಂಕ್ ಮ್ಯೂಸಿಕ್ ಪ್ರಯೋಜನಗಳು ಪಡೆಯಬಹುದು.

Leave A Reply

Your email address will not be published.