Aadhaar Card-Voter ID ಜೋಡಣೆಗೆ ಬಂದಿದೆ ನೋಡಿ ಸರಕಾರದಿಂದ ಹೊಸ ಆದೇಶ! ಈ ಕೂಡಲೇ ತಿಳಿದುಕೊಂಡರೆ ಉತ್ತಮ

Aadhaar Card-Voter ID : ಚುನಾವಣಾ ಆಯೋಗದ ಪ್ರಕಾರ, ಮತದಾರರ ಪಟ್ಟಿಯಲ್ಲಿ ನಮೂದಿಸಿದ ಹೆಸರು ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತು ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದಾರಾ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದಾರೆಯೇ ಎಂಬ ಮಾಹಿತಿಯನ್ನು ತಿಳಿಯುವ ಉದ್ದೇಶದಿಂದ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು (Aadhaar Card-Voter ID)ಲಿಂಕ್ (Link ) ಮಾಡಲು ಈಗಾಗಲೇ ಸೂಚಿಸಲಾಗಿತ್ತು.

 

ಸದ್ಯ ಸರ್ಕಾರದ ವತಿಯಿಂದ ಮತದಾರರ ಗುರುತು ಚೀಟಿ ಮತ್ತು ಆಧಾರ್ ಜೋಡಣೆ ಮಾಡಲು ಕೊನೆಯ ದಿನಾಂಕ ಏಪ್ರಿಲ್ 1, 2023 ಆಗಿತ್ತು. ಆದರೆ, ಇದೀಗ ದಿನಾಂಕವನ್ನು ಮುಂದೂಡಿದ್ದು, ಸರ್ಕಾರವು ಮಾರ್ಚ್ 31, 2024 ಕ್ಕೆ ವಿಸ್ತರಿಸಿದೆ.

ಮತದಾರರು ಆಧಾರ್ ಸಂಖ್ಯೆಯನ್ನು ತೋರಿಸಲು ವಿಫಲವಾದರೆ, ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಲಾಗುವುದಿಲ್ಲ. ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಡಿಸೆಂಬರ್ 2021 ರಲ್ಲಿ ಚುನಾವಣಾ ಕಾನೂನು ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಆ ನಂತರ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಅನುಮತಿ ನೀಡಲಾಗಿತ್ತು.

ಮನೆಯಲ್ಲಿ ಕುಳಿತು ನೀವು ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ವಿಧಾನ :

ನೀವು https://nvsp.in/ ವೆಬ್‌ಸೈಟ್‌ಗೆ ಭೇಟಿ ನೀಡಿ, ಲಾಗಿನ್ ಮಾಡಿದ ಬಳಿಕ. ನೀವು ಹೊಸ ಬಳಕೆದಾರರಾಗಿ ನೋಂದಾಯಿಸಿಕೊಳ್ಳುವ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ಕ್ಲಿಕ್ ಮಾಡಿ. ನಂತರ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಮೊಬೈಲ್‌ಗೆ OTP ಬರುತ್ತದೆ. ಇದನ್ನು ನಮೂದಿಸಿದ ನಂತರ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಕೋರಿದ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು. ಅದನ್ನು ಸಲ್ಲಿಸಿದ ನಂತರ, ನಿಮ್ಮ ನೋಂದಣಿಯನ್ನು ಮಾಡಲಾಗುತ್ತದೆ. ಅಲ್ಲಿ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಿದ ನಂತರ, ಸ್ವಯಂಚಾಲಿತ ಸ್ವೀಕೃತಿ ಸಂಖ್ಯೆಯನ್ನು ರಚಿಸಲಾಗುತ್ತದೆ. ನಿಮ್ಮ ವೋಟರ್ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ಸ್ವೀಕೃತಿ ಸಂಖ್ಯೆಯನ್ನು ಬಳಸಬಹುದು.

ಸದ್ಯ ಈ ಹಿನ್ನೆಲೆಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯದ ಗೆಜೆಟ್ ಅಧಿಸೂಚನೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎನ್ನಲಾಗಿದೆ.

Leave A Reply

Your email address will not be published.