75 Lakh Lottery : ಸಾಲ ಮಾಡಿ ಖರೀದಿಸಿದ ಲಾಟರಿ ಟಿಕೆಟ್! ಭರ್ಜರಿ ಜಾಕ್ ಪಾಟ್ ಗಿಟ್ಟಿಸಿದ ಕೂಲಿಕಾರ!

Share the Article

75 lakh Lottery : ಅದೃಷ್ಟ ಲಕ್ಷ್ಮಿ ಕೈ ಹಿಡಿದಾಗ ಎಲ್ಲವನ್ನು ಗೆದ್ದ ಸಂಭ್ರಮ ಮನೆ ಮಾಡಿರುತ್ತೆ. ಜ್ಯಾಕ್ ಪಾಟ್ ಅನ್ನೋ ಹಾಗೆ ಕೇರಳದ ಆಟೋ ಚಾಲಕ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದು ಗೊತ್ತಿರುವ ವಿಚಾರ. ಒಮ್ಮೆ ಅದೃಷ್ಟ ಕೈ ಹಿಡಿದರೆ ಯಾವುದೇ ಸಮಸ್ಯೆ ಎದುರಾಗದು. ಹೈ ಫೈ ಜೀವನ ಕಾರು ಐಷಾರಾಮಿ(Luxury Life) ಜೀವನದ್ದೇ ಕಾರುಬಾರು ಅನ್ನೋದು ಹೆಚ್ಚಿನವರ ಅನಿಸಿಕೆ. ಆದರೆ, ಕೇರಳದಲ್ಲಿ(Kerala) ಬಂಪರ್ ಲಾಟರಿ ಹೊಡೆದು ಕೋಟಿ ಗೆದ್ದ ಕೇರಳದ ಅನೂಪ್ ಎಂಬ ಯುವಕನ ಪಾಡು ಹೇಗಾಗಿದೆ ಎಂದು ಕೇಳಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಇದೇ ರೀತಿ, ಸಾಲ( Loan)ಸೂಲ ಮಾಡಿ ಮೊದಲ ಬಾರಿಗೆ ಟಿಕೇಟ್ ಖರೀದಿ ಮಾಡಿದ ಕೂಲಿಕಾರನಿಗೆ ಅದೃಷ್ಟ(Luck) ದೇವತೆ ಕೈ ಹಿಡಿದ ಘಟನೆ ನಡೆದಿದೆ.

ಜ್ಯಾಕ್ ಪಾಟ್ ಎಂಬಂತೆ ಅದೃಷ್ಟ ಒಲಿಯೋದು ಅಂದರೆ ಇದೇ ಇರಬಹುದೇನೋ!! ಹೌದು!!ಬಾಬುಲಾಲ್ (55) ಎಂಬ ಕೂಲಿಕಾರನ ಕೈ ಹಿಡಿದ ಅದೃಷ್ಟ ಒಲಿದು ಬಂದ ರೀತಿಯೇ ವಿಸ್ಮಯ. ಬಾಬುಲಾಲ್ ಕೈಯಲ್ಲಿ ಹಣವಿಲ್ಲವೆಂದು ಲಾಟರಿ ಟಿಕೆಟ್ (Lottery Ticket) ಕೊಂಡುಕೊಳ್ಳಲು ಹಿಂದೆ ಮುಂದೆ ಆಲೋಚನೆ ಮಾಡಿದ್ದಾನೆ. ಮಹಿಳೆಯೊಬ್ಬರು(Women) ಕನಿಯಾಪುರಂನಲ್ಲಿರುವ ಧನಮ್ ಏಜೆನ್ಸಿಯಿಂದ ಮಾರಾಟಕ್ಕೆ ಟಿಕೆಟ್ ಖರೀದಿಸಿದ್ದಾರೆ. ಆ ಬಳಿಕ ನಿನ್ನೆ ಬೆಳಗ್ಗೆ ಯೂನಿಯನ್ ಕಚೇರಿಗೆ ಲಾಟರಿ(Lottery) ಮಾರಾಟ ಮಾಡಲು ಮುಂದಾಗಿದ್ದು ತಾನು ಕೊಂಡುಕೊಂಡ ಲಾಟರಿಯಲ್ಲಿ ಕೆಲವೇ ಕೆಲವು ಲಾಟರಿ ಮಾತ್ರ ಮಾರಾಟವಾದ ಹಿನ್ನೆಲೆ ಕೂಲಿಕಾರನ (Worker)ಬಳಿ ಲಾಟರಿ ಖರೀದಿ ಮಾಡುವಂತೆ ಮನವಿ ಮಾಡಿದ್ದಾಳೆ. ಹಣವಿಲ್ಲದೆ ಹೇಗಪ್ಪಾ ಲಾಟರಿ ಖರೀದಿ ಮಾಡೋದು ಎಂದು ಚಿಂತಿಸಿ ಮಹಿಳೆ ಹಣ ಮತ್ತೆ ಕೊಟ್ಟರೆ ಆಯಿತು ಎಂದು ಹೇಳಿ ಎರಡು ಲಾಟರಿ ಟಿಕೆಟ್ ನೀಡಿದ್ದಾಳೆ.

ಇದೀಗ ಆ ಲಾಟರಿಯಲ್ಲಿ ಕೂಲಿಕಾರನಿಗೆ ಒಂದು ಟಿಕೆಟ್ ಗೆ ಮೊದಲ ಬಹುಮಾನ(First Prize) ಅರಸಿಕೊಂಡು ಬಂದಿದೆ. ಹೀಗಾಗಿ, ಅದೃಷ್ಟ ಲಕ್ಷ್ಮಿ ಯಾವಾಗ ಹೇಗೆ ಕೈ ಹಿಡಿಯುತ್ತಾಳೆ ಎಂದು ಊಹಿಸಲು ಸಾಧ್ಯವಿಲ್ಲ ಎಂಬಂತೆ ಕೂಲಿಕಾರನಾದ ಬಾಬುಲಾಲ್ ಅವರಿಗೆ ಲಾಟರಿ ಮೊದಲ ಬಹುಮಾನವಾಗಿ ಬರೋಬ್ಬರಿ 75 ಲಕ್ಷ ರೂ(75 lakh Lottery)ಕೈ ಸೇರಿದೆ. ಸದ್ಯ ಬಾಬುಲಾಲ್ ಸಿಐಟಿಯು ಅಟ್ಟಿಂಕುಝಿ ಯೂನಿಯನ್‌ನ ಸದಸ್ಯರಾಗಿದ್ದು, ತನಜ್ ಸ್ತ್ರೀ ಶಕ್ತಿ ಲಾಟರಿಯಿಂದ ಪ್ರಥಮ ಬಹುಮಾನವಾಗಿ ದೊಡ್ಡ ಮೊತ್ತವನ್ನು ಪಡೆದಿದ್ದಾರೆ.

ಬಡತನದ ಬೇಗೆಯಲ್ಲಿ ಬೆಳೆದ ಬಾಬುಲಾಲ್ ಚಿಕ್ಕವಯಸ್ಸಿನಲ್ಲೇ ಹಮಾಲಿ ಕೆಲಸ ಮಾಡುವ ಮೂಲಕ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 5 ಸೆಂಟ್ಸ್ ಜಮೀನಿನಲ್ಲಿ ಚಿಕ್ಕಪ್ಪ, ಸಹೋದರರೊಂದಿಗೆ ಬಾಬುಲಾಲ್ ಅವರು ಜೊತೆಯಾಗಿ ಜೀವನ(Life) ನಡೆಸುತ್ತಿದ್ದಾರೆ. ಬಾಬುಲಾಲ್ ಪತ್ನಿ ಶೋಭಾನಾ ಮನೆ ಕೆಲಸ ಮಾಡಿ ಸಂಸಾರದ ಬಂಡಿ ಎಳೆದುಕೊಂಡು ಹೋಗಲು ನೆರವಾಗುತ್ತಿದ್ದಾರೆ. ಈ ದಂಪತಿಗೆ ಅರುಣ್ ಮತ್ತು ಅಜಯಲಾಲ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಇದೀಗ, ಬಾಬುಲಾಲ್ ಬಹುಮಾನದ ಟಿಕೆಟ್ ಸಂಖ್ಯೆ SE 989926 ಅನ್ನು ಕಜಕೂಟಂನಲ್ಲಿರುವ ಕೆನರಾ ಬ್ಯಾಂಕ್‌ಗೆ (Canara Bank)ಬಾಬುಲಾಲ್ ಹಸ್ತಾಂತರ ಮಾಡಿದ್ದಾರಂತೆ. ಇನ್ನೂ ಹಣ ಬಂತು ಎಂದು ಕಷ್ಟ ಹೇಳಿಕೊಂಡು ಇನ್ನೆಷ್ಟು ಮಂದಿ ಇವರ ಮನೆ ಮುಂದೆ ಕ್ಯೂ ನಿಲ್ಲುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Hyundai Verna : ಬಂದಿದೆ ಅಚ್ಚುಮೆಚ್ಚಿನ ವೆರ್ನಾ ಕಾರು ಮಾರುಕಟ್ಟೆಗೆ! ಭರ್ಜರಿ ಒಂಭತ್ತು ಬಣ್ಣಗಳಲ್ಲಿ ಲಭ್ಯ!

Leave A Reply