Mangalore : ಮಗಳ ಮದುವೆಗೆ ಚಿನ್ನಾಭರಣ ಖರೀದಿಗೆ ಹೋದ ವ್ಯಕ್ತಿಯ ಲಕ್ಷಗಟ್ಟಲೇ ಹಣ ಎಗರಿಸಿದ ಕಳ್ಳ !

Uppinangady : ಉಪ್ಪಿನಂಗಡಿ (Uppinangady) ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಪೆದಮಲೆ ಸರಳೀಕಟ್ಟೆ ರಸ್ತೆಯಲ್ಲಿ ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದ ವ್ಯಕ್ತಿಯಿಂದ 10 ಲಕ್ಷ ರೂಪಾಯಿ ಹಣವನ್ನು (Money Theft) ಲಪಟಾಯಿಸಿದ ಘಟನೆ ನಡೆದಿದೆ.
ಉಪ್ಪಿನಂಗಡಿಯಲ್ಲಿ ಮಗಳ ಮದುವೆಗೆ ಚಿನ್ನಾಭರಣ ಖರೀದಿ ಮಾಡಲೆಂದು ದ್ವಿಚಕ್ರ ವಾಹನದಲ್ಲಿ ಹತ್ತು ಲಕ್ಷ ರು. ನಗದು ಹಣ ಒಯ್ಯುತ್ತಿದ್ದ ಸಂದರ್ಭ ಅನಾಮಿಕ ಯುವಕನೋರ್ವ ಹಣದ ಕಂತನ್ನು ಕಿತ್ತುಕೊಂಡು ಒಯ್ದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ಪೆದಮಲೆ ಸರಳೀಕಟ್ಟೆ ರಸ್ತೆಯಲ್ಲಿ ನಡೆದಿದೆ.

 

ಇಳಂತಿಲ ಗ್ರಾಮದ ಕಾಯರ್ಪಾಡಿ ಮನೆ ನಿವಾಸಿ ಮಹಮ್ಮದ್ ಕೆ. (60) ಎಂಬ ವ್ಯಕ್ತಿ ತನ್ನ ಮಗಳ ಮದುವೆಗಾಗಿ(Marriage) ಸಂಗ್ರಹಿಸಿಟ್ಟಿದ್ದ ಹತ್ತು ಲಕ್ಷ ರೂಪಾಯಿ ಹಣವನ್ನು ಸೋಮವಾರ ಚಿನ್ನಾಭರಣ (Gold Purchase)ಖರೀದಿ ಮಾಡುವ ನಿಟ್ಟಿನಲ್ಲಿ ಚೀಲವೊಂದರಲ್ಲಿ ಹಾಕಿ ಸ್ಕೂಟರ್ ನ(Scooter) ಸೀಟಿನಡಿ ಇರಿಸಿ ತನ್ನ ಪತ್ನಿಯೊಂದಿಗೆ(Wife) ಉಪ್ಪಿನಂಗಡಿಯ ಚಿನ್ನಾಭರಣ ಮಳಿಗೆಗೆ ಹೋಗಿದ್ದಾರೆ.ಈ ಸಂದರ್ಭ ಸಂಬಂಧಿಕರೊಬ್ಬರು ನಿಧನರಾದ(Death news) ಸುದ್ದಿಯನ್ನು ಕೇಳಿ ಸರಳೀಕಟ್ಟೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಸ್ಕೂಟರ್ ನಿಂದ ಪತ್ನಿ ಆಯತಪ್ಪಿಬಿದ್ದಿದ್ದು, ಗಾಯಗೊಂಡ ಪತ್ನಿಯನ್ನು ಮಹಮ್ಮದ್ ಉಪ್ಪಿನಂಗಡಿಯ ಆಸ್ಪತ್ರೆಗೆ(Hospital) ಕರೆತಂದು ಚಿಕಿತ್ಸೆ ನೀಡಿದ್ದಾರೆ.

ಪತ್ನಿಗೆ ಚಿಕಿತ್ಸೆ ನೀಡಿದ ನಂತರ ಪತ್ನಿಯನ್ನು ಮನೆಯಲ್ಲಿ ಬಿಟ್ಟು ಸ್ಕೂಟರ್ ಬಿದ್ದ ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭ ತನ್ನಲ್ಲಿದ್ದ ಹಣದ ಕಟ್ಟನ್ನು ಸ್ಕೂಟರ್ ಸೀಟಿನಡಿ ಇಡುವ ವೇಳೆ ಸಂದರ್ಭದಲ್ಲಿ ಅಪರಿಚಿತ ಯುವಕನೊಬ್ಬ ಹಣದ ಕಟ್ಟನ್ನು ಬಲವಂತವಾಗಿ ಹಿಡಿದು ಎಳೆದುಕೊಂಡು ಹೋಗಿ ಪರಾರಿಯಾಗಿದ್ದಾನೆ. ಈ ಕುರಿತು ಸಂತ್ರಸ್ತ ವ್ಯಕ್ತಿ ಪೋಲಿಸರಿಗೆ ದೂರು ನೀಡಿದ್ದು, ಸದ್ಯ ಈ ಪ್ರಕರಣದ ಕುರಿತು ಉಪ್ಪಿನಂಗಡಿ ಎಸೈ ರಾಜೇಶ್ ಕೆ.ವಿ. ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.