Deck cards: ಇಸ್ಪೀಟಿನ ಕಾರ್ಡ್​ಗಳಲ್ಲಿ ಒಬ್ಬ ರಾಜನಿಗೆ ಮೀಸೆ ಇಲ್ಲ ; ಯಾಕೆ ಗೊತ್ತಾ?

Deck cards: ನಾಲ್ಕೈದು ಜನ ಸೇರಿ ಆಗುವ ಆಟ ಇಸ್ಪೀಟ್ (deck cards) . ಇಸ್ವಿಟ್ ನಿಂದ ಆಡುವ ಆಟಗಳ ಪಟ್ಟಿಯೇ ಇದೆ. ತುಂಬಾ ಜನ ಕಾರ್ಡ್ಸ್ ಆಡುತ್ತಾರೆ. ಯಾವ ಆಟ ಆಡಿದರೂ ಅದರಲ್ಲಿ ರಾಜ ಅಥವಾ ಕಿಂಗ್ ಕಾರ್ಡ್ ಅನ್ನು ಮುಖ್ಯ ಕಾರ್ಡ್ ಆಗಿ ಪರಿಗಣಿಸುತ್ತಾರೆ. ಎಲ್ಲ ಕಾರ್ಡ್ ಗಳಲ್ಲಿ ಕಿಂಗ್ ಕಾರ್ಡ್‌ ಗೆ (king card) ಪವರ್ ಇರುತ್ತದೆ. ಈ ಕಾರ್ಡ್ ಗೆ ಕೆಲವು ವಿಶೇಷತೆಗಳು ಸಹ ಇರುತ್ತವೆ. ಇಸ್ವಿಟ್ ಕಾರ್ಡ್ ನಲ್ಲಿ ಕ್ಲಬ್ ಸ್ಟೇಡ್, ಹಾರ್ಟ್, ಡೈಮಂಡ್ ಎಂದು ನಾಲ್ಕು ವಿಧಗಳು ಇರುತ್ತವೆ. ಆದರೆ ನಿಮಗೆ ಗೊತ್ತಾ (Interesting Fact) ? ಇಸ್ಪೀಟಿನ ಕಾರ್ಡ್​ಗಳಲ್ಲಿ ಒಬ್ಬ ರಾಜನಿಗೆ ಮೀಸೆ ಇರೋದಿಲ್ಲ. ಯಾಕೆ? ಇಲ್ಲಿದೆ ಮಾಹಿತಿ.

 

ಕಾರ್ಡ್‌ಗಳಲ್ಲಿ ರಾಣಿ (queen), ರಾಜ (king), ಜ್ಯಾಕ್ ಮತ್ತು ಏಸ್ ಕಾರ್ಡ್‌ಗಳು ಸೇರಿವೆ. ಅದರ ಕೆಳಗೆ 10,9,8 ನಂತಹ 2 ಜೋಡಿ ಕಾರ್ಡ್‌ಗಳಿವೆ. ಇದು ವಿವಿಧ ಸೂಟ್‌ಗಳು ಮತ್ತು ಚಿಹ್ನೆಗಳ ಒಟ್ಟು 52 ಕಾರ್ಡ್‌ಗಳನ್ನು ಒಳಗೊಂಡಿದೆ, ಇದನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಎಲ್ಲಾ ನಾಲ್ಕು ಸೂಟ್‌ಗಳಲ್ಲಿ ನಾಲ್ಕು ವಿಭಿನ್ನ ರಾಜರಿದ್ದಾರೆ. ಆದರೆ, ಈ ರಾಜರಲ್ಲಿ ಒಬ್ಬನಿಗೆ ಮೀಸೆ ಇಲ್ಲ. ಇದರಲ್ಲಿ ಕೆಂಪು ಎಲೆ ಅಥವಾ ಬಾದಂ ರಾಜನಿಗೆ ಮೀಸೆ ಇಲ್ಲ. ಯಾಕೆ? ಡಿಸೈನ್ ಮಾಡುವಾಗ ಅದನ್ನು ಪ್ರಿಂಟ್ ಮಾಡಲು ಡಿಸೈನರ್ ಮರೆತಿದ್ದು, ಅಂದಿನಿಂದ ಟ್ರೆಂಡ್ ನಲ್ಲಿದೆ ಎನ್ನಲಾಗಿದೆ.

ಇನ್ನೂ ಕೆಲವು ಕಾರಣಗಳಿವೆ ಎನ್ನಲಾಗಿದೆ. ಈ ಕಾರ್ಡ್‌ಗಳನ್ನು ಫ್ರೆಂಚರು ತಯಾರಿಸಿದ್ದಾರೆ ಎಂದೂ ಹೇಳಲಾಗುತ್ತದೆ. ಜನಪ್ರಿಯ ಐತಿಹಾಸಿಕ ರಾಜಮನೆತನದ ವ್ಯಕ್ತಿಗಳನ್ನು ಪ್ರತಿ ಬಣ್ಣದ ರಾಜರಾಗಿ ಮಾಡಲಾಗಿದೆ. ಡೇವಿಡ್, ಚಾರ್ಲ್ಸ್, ಜೂಲಿಯಸ್ ಸೀಸರ್ ಮತ್ತು ಅಲೆಕ್ಸಾಂಡರ್ ದಿ ಗ್ರೇಟ್ ಎಂಬ ನಾಲ್ಕು ವಿಧದ ಇಸ್ಪೀಟೆಲೆಗಳ ರಾಜರುಗಳಿವೆ. ಹಾರ್ಟ್ಸ್ ಅಥವಾ ಬಾದಾಮಿ ರಾಜ ಫ್ರೆಂಚ್ ರಾಜ ಚಾರ್ಲ್ಮ್ಯಾಗ್ನೆ (ಚಾರ್ಲ್ಸ್), ಅವರು ತುಂಬಾ ಸುಂದರ ಮತ್ತು ಪ್ರಸಿದ್ಧರಾಗಿದ್ದರು. ಹಾಗಾಗಿ ಅವರಿಗೆ ಮೀಸೆ ಇರಲಿಲ್ಲ.

Leave A Reply

Your email address will not be published.