Home News Snake vs Lizard : ಹಲ್ಲಿಯೊಂದು ಮರಿಯ ರಕ್ಷಣೆಗಾಗಿ ಸರ್ಪದೊಡನೆ ಸೆಣಸೋ ವಿಡಿಯೋ ಈಗ ವೈರಲ್!...

Snake vs Lizard : ಹಲ್ಲಿಯೊಂದು ಮರಿಯ ರಕ್ಷಣೆಗಾಗಿ ಸರ್ಪದೊಡನೆ ಸೆಣಸೋ ವಿಡಿಯೋ ಈಗ ವೈರಲ್! ತಾಯಿಗಿಂತ ದೊಡ್ಡ ಯೋಧರಿಲ್ಲ ಎನ್ನುತ್ತೆ ಈ ಭಯಾನಕ ದೃಶ್ಯ!

Snake vs Lizard

Hindu neighbor gifts plot of land

Hindu neighbour gifts land to Muslim journalist

Snake vs Lizard :ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುವ ಲೆಕ್ಕವಿಲ್ಲದಷ್ಟು ವೀಡಿಯೋಗಳು ಕೆಲವೊಮ್ಮೆ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತವೆ, ಕೆಲವೊಮ್ಮೆ ಕೆಲವು ವಿಡಿಯೋಗಳು ಆಶ್ಚರ್ಯವನ್ನುಂಟು ಮಾಡಿದರೆ, ಇನ್ನು ಕೆವಲು ಯೋಚಿಸುವಂತೆ ಮಾಡುತ್ತವೆ, ಕೆಲವು ನಮ್ಮನ್ನು ಬೆರಗುಗೊಳಿಸಿದರೆ, ಮತ್ತೆ ಕೆಲವು ದುಃಖವನ್ನು ತರಿಸುತ್ತವೆ. ಹೀಗೆ ಪ್ರತಿದಿನ ಅಂತರ್ಜಾಲದಲ್ಲಿ ಲೆಕ್ಕವಿಲ್ಲದಷ್ಟು ವೀಡಿಯೋಗಳು ಶೇರ್ ಆಗುತ್ತಿದ್ದರೂ ಕೆಲವು ವಿಡಿಯೋಗಳು ಮಾತ್ರ ನಮ್ಮ ಗಮನ ಸೆಳೆಯುತ್ತವೆ. ಅಂತಹ ವಿಡಿಯೋಗಳಲ್ಲಿ ಇದೀಗ ನಾವು ಹೇಳ ಹೊರಟಿರುವ ವಿಡಿಯೋ ಕೂಡ ಒಂದು.

ಹೌದು, ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ವೈರಲ್ ವೀಡಿಯೋದಲ್ಲಿ, ಹಲ್ಲಿ(Lizard) ಯೊಂದು ತನ್ನ ಮರಿಯ ರಕ್ಷಣೆಗಾಗಿ ಹಾವಿನ ಜೊತೆ (Snake vs Lizard) ಹೋರಾಡುವ ದೃಶ್ಯವನ್ನು ನೀವು ಕಾಣಬಹುದು. ವೀಡಿಯೊದಲ್ಲಿ, ಹಾವು(Snake) ಮರಿ ಹಲ್ಲಿಯನ್ನು ಭೇಟೆಯಾಡಿ, ಅದನ್ನು ಬಿಗಿಯಾಗಿ ಸುತ್ತುತ್ತದೆ. ಈ ಮಧ್ಯೆ, ಗೋಡೆಯಲ್ಲಿ ಸಿಕ್ಕಿಬಿದ್ದ ತಾಯಿ ಹಲ್ಲಿ ತನ್ನ ಮರಿಯನ್ನು ರಕ್ಷಿಸಲು ಹಾವಿನ ವಿರುದ್ಧ ಹೋರಾಡುತ್ತದೆ.

ಹಲ್ಲಿ ಯಾವುದೇ ಭಯವಿಲ್ಲದೆ ಹಾವನ್ನು ಕಚ್ಚುತ್ತದೆ. ಆದರೆ ದುರದೃಷ್ಟವಶಾತ್ ಕೊನೆಗೆ ಎಳೆಯ ಹಲ್ಲಿ ಹಾವಿಗೆ ಬಲಿಯಾದಂತಿದೆ. ವೀಡಿಯೊ ನೋಡಲು ತುಂಬಾ ಭಯಾನಕ ಮತ್ತು ನೋವಿನಿಂದ ಕೂಡಿದೆ. ಆದರೆ ಇದರಿಂದ ಪ್ರಕೃತಿಯ ನಿಯಮ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಹಸಿವಿಗೆ ಯಾವುದೇ ಭಾವನೆಗಳಿಲ್ಲದೆ ಎಂದು ವಿಡಿಯೋ ನೋಡಿದ್ರೆ ಅರ್ಥವಾಗುತ್ತದೆ. ಅಲ್ಲದೆ, ತಾಯಿಯ ದೈರ್ಯ ಎಂತಹುದು ಅಂತ ತಿಳಿಸುತ್ತದೆ.

ಅಂದಹಾಗೆ ಜೀವನವೇ ಒಂದು ಹೋರಾಟ, ಇಲ್ಲಿ ಎದುರಾಳಿಯ ಜೊತೆ ಎದೆಗೊಟ್ಟು ನಿಂತು ಹೋರಾಡಿದವರು ಗೆಲ್ಲುತ್ತಾರೆ. ಅಲ್ಲದೆ, ಬಲಶಾಲಿಗಳು ದುರ್ಬಲರನ್ನು ಬೇಟೆಯಾಡುತ್ತಾರೆ, ಪರಾಕ್ರಮಿಗಳು ಬದುಕುತ್ತಾರೆ ಎಂಬುದು ಸಾಬೀತಾಗಿದೆ. ಇದು ಪ್ರಕೃತಿಯ ನಿಯಮಗಳನ್ನು ಅವಲಂಬಿಸಿರುತ್ತದೆ. ಪ್ರಾಣಿಗಳಿಗೂ ಇದು ಕೂಡ ಅನ್ವಯಿಸುತ್ತದೆ ಎಂಬುದನ್ನು ಈ ವಿಡಿಯೋ ಸಾಭೀತುಪಡಿಸುತ್ತದೆ.

https://www.instagram.com/reel/CpvR-FQIm_F/?igshid=YmMyMTA2M2Y=