Kissing : ಕಣ್ಣು ಮುಚ್ಚಿ ಕಿಸ್ ಮಾಡಿದರೆ ವಿಜ್ಞಾನ ಪ್ರಕಾರ ಈ ಅರ್ಥ ನೀಡುತ್ತೆ!!
Kissing : ಯಾರೇ ಆಗಲಿ ಪ್ರೀತಿಗೆ ಬಿದ್ದ ಬಳಿಕ ಚುಂಬಿಸುವುದು ಸಹಜ. ಚುಂಬನವು ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ಅತ್ಯುತ್ತಮ ಮಾರ್ಗ ಎಂದು ಹೇಳಲಾಗುತ್ತದೆ. ಆದರೆ ಚುಂಬನದ ಸಮಯದಲ್ಲಿ ಕಣ್ಣುಗಳು ಮುಚ್ಚುವುದನ್ನು ನೀವು ಎಲ್ಲಾದರೂ ಗಮನಿಸಿರಬಹುದು. ಈ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀರಾ? ಯಾಕೆಂದರೆ ಚುಂಬನವು (kissing) ವಿಭಿನ್ನ ಅರ್ಥಗಳನ್ನು ತಿಳಿಸುತ್ತವೆ.
ವಾಸ್ತವವಾಗಿ, ಕಿಸ್ ನೀಡುವಾಗ ಕಣ್ಣುಗಳು ಮುಚ್ಚುವುದರ ಹಿಂದೆಯೂ ಕೂಡ ವೈಜ್ಞಾನಿಕ ಕಾರಣವಿದೆ.
ಲಂಡನ್ ವಿಶ್ವವಿದ್ಯಾನಿಲಯದ ರಾಯಲ್ ಹಾಲೋವೇ ಅವರು ನಡೆಸಿದ ಸಂಶೋಧನೆಯಲ್ಲಿ ಪ್ರೀತಿ ಪಾತ್ರರಿಗೆ ಚುಂಬಿಸುವಾಗ ‘ಸ್ಪರ್ಶ ಸಂವೇದನೆ’ಯಿಂದಾಗಿ ಕಣ್ಣುಗಳು ಮುಚ್ಚುತ್ತವೆ ಎಂದು ತಿಳಿದುಬಂದಿದೆ.
ಅದಲ್ಲದೆ ಕಣ್ಣು ಮುಚ್ಚಿ ಚುಂಬಿಸುವುದರಿಂದ ಎದುರಿನ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ತೋರಿಸುತ್ತದೆ.
ಸಂಗಾತಿಗಳು ಪರಸ್ಪರ ಸನಿಹಕ್ಕೆ ಬಂದಾಗ ಮನಸ್ಸಿನಲ್ಲಿ ಒಂದು ರೀತಿಯ ಭಾವನೆ ಜಾಗೃತಗೊಳ್ಳುತ್ತದೆ. ಇದನ್ನು ‘ಸ್ಪರ್ಶ ಸಂವೇದನೆ’ ಎನ್ನಲಾಗುವುದು ಎಂದು ಮನಃ ಶಾಸ್ತ್ರಜ್ಞರಾದ ಸಾಂಡ್ರಾ ಮರ್ಫಿ ಮತ್ತು ಪೊಲ್ಲಿ ಡಾಲ್ಟನ್ ವಿವರಿಸಿದ್ದಾರೆ.
ಅಧ್ಯಯನವೊಂದರ ಪ್ರಕಾರ, ಕಿಸ್ ಮಾಡುವಾಗ ಎಂದರೆ ಚುಂಬಿಸುವಾಗ ಪರಸ್ಪರರು ಸಂಪೂರ್ಣವಾಗಿ ಇಡೀ ಪ್ರಪಂಚ ಮರೆತು ಆ ಕ್ಷಣವನ್ನು ಆನಂದಿಸುವುದುದಾಗಿದೆ .
ಚುಂಬಿಸುವ ಈ ಸಮಯವು ತಮ್ಮನ್ನು ತಾವು ಸಂಪೂರ್ಣವಾಗಿ ತಮ್ಮ ಪಾಲುದಾರರಿಗೆ ಮೀಸಲಿಡುವುದು ಎಂಬುದನ್ನು ಖಾತರಿ ಪಡಿಸುತ್ತದೆ. ಹಾಗಾಗಿಯೇ ಪ್ರೀತಿಪಾತ್ರರು ಚುಂಬಿಸುವಾಗ ಕಣ್ಣುಗಳು ತನ್ನಿಂದ ತಾನೇ ಮುಚ್ಚುತ್ತವೆ. ಕಣ್ಣುಗಳು ತೆರೆದಿದ್ದಾಗ ಹೊರಗಿನ ವಿಷಯಗಳತ್ತ ಗಮನವು ಹೋಗುತ್ತದೆ ಎಂಬುವುದು ಕೂಡ ಒಂದು ಕಾರಣ ಆಗಿದೆ.
ಇದರ ಹೊರತು, ಸಂಗಾತಿಯ ನಡುವಿನ ಪ್ರೇಮ ಸಂಬಂಧ ಮತ್ತು ಉತ್ಸಾಹದ ಆಳದ ಮಟ್ಟ ಈ ಚುಂಬನದ ಮೂಲಕ ಅಳೆಯಬಹುದು. ಅಷ್ಟು ಮಾತ್ರವಲ್ಲದೆ ಚುಂಬನದಿಂದ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.