SBI Money : ಎಸ್‌ಬಿಐ ಗ್ರಾಹಕರೇ ನಿಮ್ಮ ಖಾತೆಯಿಂದ ರೂ.206 ಹಣ ಕಟ್ ಆಗಿದೆಯಾ? ಯಾಕೆಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
SBI Money :ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐನ (State Bank Of India) ಮನೆ ಬಾಗಿಲಿನ ಸೇವೆಯ ಮೂಲಕ ಮನೆಯ ಸೌಕರ್ಯದಿಂದ ಸುಲಭವಾಗಿ ಹಾಗೂ ಸರಳವಾಗಿ ಹಣವನ್ನ ಹಿಂಪಡೆಯಲು ಅವಕಾಶ ಕಲ್ಪಿಸಿದೆ. ಎಸ್ ಬಿಐ ತನ್ನ ಗ್ರಾಹಕರಿಗೆ ಅನೇಕ ಆನ್ ಲೈನ್ (Online)ಸೇವೆಗಳನ್ನು ಪರಿಚಯಿಸಿದ್ದು, ಆ ಮೂಲಕ ಬ್ಯಾಂಕಿಗೆ ಭೇಟಿ ನೀಡಲೇಬೇಕಾದ ಅನಿವಾರ್ಯತೆಯನ್ನು ತಪ್ಪಿಸಿದೆ.
ರಾಷ್ಟ್ರೀಯ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಗಾಗ ತಮ್ಮ ಗ್ರಾಹಕರ ಖಾತೆಗಳಿಂದ ಹಣವನ್ನು ಕಡಿತ ಮಾಡುತ್ತಿರುತ್ತದೆ. ಆದರೆ ಬ್ಯಾಂಕ್ ಹೀಗೆ ಹಣ( SBI Money) ಕಡಿತ ಮಾಡಲು ಕಾರಣವೇನು ಗೊತ್ತಾ? ಈ ಕುರಿತ ಮಾಹಿತಿ ನಿಮಗಾಗಿ.
ಸ್ಟೇಟ್ ಬ್ಯಾಂಕ್ ತನ್ನ ಹಲವು ಖಾತೆದಾರರ ಖಾತೆಯಿಂದ 147 ರಿಂದ 295 ರೂಪಾಯಿ ಕಡಿತ ಮಾಡಿದ್ದು, ಚಿನ್ನ (Gold), ಕಾಂಬೋ ಅಥವಾ ಮೈ ಕಾರ್ಡ್ , ಡೆಬಿಟ್/ಎಟಿಎಂ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರಿಂದ ಭಿನ್ನ ಶುಲ್ಕಗಳನ್ನು ವಿಧಿಸುವ ಮೂಲಕ ಖಾತೆಗಳಿಂದ ಹಣವನ್ನು ಕಡಿತ ಮಾಡಲಾಗುತ್ತದೆ.
ಯುವ ಡೆಬಿಟ್ ಕಾರ್ಡ್ (Debit Card), ಗೋಲ್ಡ್ ಡೆಬಿಟ್ ಕಾರ್ಡ್, ಕಾಂಬೊ ಡೆಬಿಟ್ ಕಾರ್ಡ್, ಅಥವಾ ಮೈ ಕಾರ್ಡ್ ಡೆಬಿಟ್/ಎಟಿಎಂ ಕಾರ್ಡ್ (ATM Card) ಅನ್ನು ಒಳಗೊಂಡಂತೆ ಡೆಬಿಟ್/ಎಟಿಎಂ ಕಾರ್ಡ್‌ಗಳಲ್ಲಿ ಯಾವುದಾದರೂ ಒಂದನ್ನು ಬಳಕೆ ಮಾಡುವ ಗ್ರಾಹಕರಿಂದ ಎಸ್‌ಬಿಐ ವಾರ್ಷಿಕ ನಿರ್ವಹಣೆ ಶುಲ್ಕವಾಗಿ ರೂ. 175 ವಿಧಿಸಲಾಗುತ್ತದೆ. ಇದೇ ವೇಳೆಯಲ್ಲಿ ಈ ಕಡಿತದ ಮೇಲೆ 18% GST ಕೂಡ ಅನ್ವಯವಾಗುತ್ತದೆ. ಹೀಗಾಗಿ, ಮೊತ್ತಕ್ಕೆ ರೂ.31.5 (ರೂ. 175 ರಲ್ಲಿ 18%) GST ಅನ್ನು ಸೇರಿಸಲಾಗಿದ್ದು, ಹೀಗಾಗಿ, ರೂ.175 + ರೂ.31.5 ರೊಂದಿಗೆ ಸುಮಾರು 206.5 ರೂ.ಗಳನ್ನೂ ಕಡಿತ ಮಾಡಲಾಗುತ್ತದೆ.