REC Limited recruitment : ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ ಉದ್ಯೋಗ : ಅರ್ಜಿ ಸಲ್ಲಿಸಲು ಕೊನೆ ದಿನ : ಏ.15

REC Limited recruitment : ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ (REC Limited recruitment) ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆ : ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್ (REC Limited)
ಹುದ್ದೆಗಳು : ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳು
ಹುದ್ದೆಗಳು, ಹುದ್ದೆಗಳ ಸಂಖ್ಯೆ, ಸಂಬಳ:
ಜನರಲ್ ಮ್ಯಾನೇಜರ್ (ಎಂಜಿನಿಯರಿಂಗ್) 2 ₹ 1,20,000- 2,80,000
ಮ್ಯಾನೇಜರ್ (ಎಂಜಿನಿಯರಿಂಗ್) 2 ₹ 80,000- 2,20,000
ಉಪ ವ್ಯವಸ್ಥಾಪಕರು (ಎಂಜಿನಿಯರಿಂಗ್) 2 ₹ 70,000- 2,00,000
ಸಹಾಯಕ ವ್ಯವಸ್ಥಾಪಕ (ಎಂಜಿನಿಯರಿಂಗ್) 2 ₹ 60,000- 1,80,000
ಆಫೀಸರ್​ (ಎಂಜಿನಿಯರಿಂಗ್) 53 ₹ 50,000- ₹ 1,60,00
ಅಧಿಕಾರಿ (ಎಫ್&ಎ) 34 ₹ 50,000- ₹ 1,60,00
ಇತರೆ ಹುದ್ದೆಗಳು 30 ಹುದ್ದೆಗೆ ಅನುಸಾರ ವೇತನ ನಿಗದಿ

ವಿದ್ಯಾರ್ಹತೆ:
ಆಫೀಸರ್ ಫೈನಾನ್ಸ್ ಮತ್ತು ಅಕೌಂಟ್ಸ್ ಹುದ್ದೆಗೆ ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆನ್ಸಿ / ಕಾಸ್ಟ್ ಅಂಡ್ ಮ್ಯಾನೇಜ್‌ಮೆಂಟ್ ಅಕೌಂಟೆನ್ಸಿ ರಬೇಕು. ಉಳಿದ ಎಲ್ಲಾ ಹುದ್ದೆಗಳಿಗೆ, ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ (ಪವರ್)/ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ ಪವರ್ ಇಂಜಿನಿಯರಿಂಗ್‌ ನಲ್ಲಿ ಬಿ.ಟೆಕ್ ಮಾಡಿರಬೇಕು.

ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ
ಸಂದರ್ಶನ
*ಶೇ.85ರಷ್ಟು ಅಂಕಗಳಿಗೆ ಪರೀಕ್ಷೆ ಬರೆಯಬೇಕಾಗುತ್ತೆ, ಉಳಿದ ಶೇ.15ರಷ್ಟು ಅಂಕಗಳಿಗೆ ಸಂದರ್ಶನ ನಡೆಸಲಾಗುತ್ತೆ.

ಮೀಸಲಾತಿ:
SC/ST, OBC ಮೀಸಲಾತಿ ಅನ್ವಯಿಸುತ್ತದೆ. ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅನ್ವಯಿಸುವ ಎಲ್ಲಾ ಮೀಸಲಾತಿ ನಿಯಮಗನ್ನು ಈ ನೇಮಕಾತಿಯಲ್ಲಿ ಪಾಲಿಸಲಾಗುತ್ತದೆ.

ನಿಯಮಗಳು:
*ಭಾರತೀಯ ನಾಗರೀಕರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
*ಸರ್ಕಾರದ ಮಾನ್ಯತೆ ಹೊಂದಿರುವ ಶಿಕ್ಷಣ ಸಂಸ್ಥೆಯಿಂದ ಮಾತ್ರ ಪದವಿ ಪೂರ್ಣಗೊಳಿಸಿರಬೇಕು.
*ಸರ್ಕಾರಿ ನಿಯಮಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 15-03-2023
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 15-04-2023

ಅಧಿಕೃತ ವೆಬ್‌ಸೈಟ್ https://recindia.nic.in.

Leave A Reply

Your email address will not be published.