Mahalakshmi- Ravindar : ಮಹಾಲಕ್ಷ್ಮಿ-ರವೀಂದರ್ ಮಧ್ಯೆ ಏನಿದು ಹೊಸ ಬಿರುಗಾಳಿ? ಯಾಕೆ ಈ ಮಾತನ್ನಾಡಿದ್ರು ಈ ಜೋಡಿ!

Mahalakshmi- Ravindar : ಕಿರುತೆರೆ ನಟಿ ಮಹಾಲಕ್ಷ್ಮಿ (Mahalaxmi) ತನ್ನ ಗಂಡನ ಜೊತೆ ಕಳೆದ ಅಮೂಲ್ಯ ಕ್ಷಣಗಳನ್ನು ಕೊಂಡಾಡುವುದರ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ (social media) ಇಬ್ಬರ ಫೋಟೋಗಳನ್ನು (photo) ಹಂಚಿಕೊಳ್ಳುತ್ತಾರೆ. ನಟಿ ಮಹಾಲಕ್ಷ್ಮಿ ತನ್ನ ಅಭಿಮಾನಿಗಳಲ್ಲಿ ತನ್ನ ಗಂಡನ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಈ ಸಲ ಪತಿ ರವೀಂದರ್ (Ravindhar) ಸಾಮಾಜಿಕ ಜಾಲತಾಣದಲ್ಲಿ ಪತ್ನಿ (wife)ಬಗ್ಗೆ ಏನು ಹೇಳಿದ್ದಾರೆ ಗೊತ್ತಾ!

 

ನನ್ನ ಮೂರ್ಖತನವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಆದರೆ ಪ್ರೀತಿ ಏನನ್ನಾದ್ರೂ ಬದಲಾಯಿಸಬಲ್ಲದು ಎಂದು ಸಾಬೀತುಪಡಿಸಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ (social media) ನಟಿ ಮಹಾಲಕ್ಷ್ಮಿ ಪತಿ (husband) ರವೀಂದರ್ ( Mahalakshmi- Ravindar) ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರವೀಂದರ್ ನನ್ನ ಪತ್ನಿ ಮಹಾಲಕ್ಷ್ಮಿ ನನ್ನ ಜೀವನದಲ್ಲಿ ಬಂದು ಬಾಳು ಬೆಳಗಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ (fans) ಮೂಲಕ ಬರೆದುಕೊಂಡಿದ್ದಾರೆ. ಲಿಬ್ರಾ ಪ್ರೊಡಕ್ಷನ್ ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Chandrashekharan) ಕಿರುತೆರೆ ನಟಿ ಮಹಾಲಕ್ಷ್ಮಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

ನಟಿ ಮಹಾಲಕ್ಷ್ಮಿ ಹಾಗೂ ರವೀಂದರ್ ಮದುವೆಯಾದಾಗಿನಿಂದಲೂ (marriage) ಈ ಜೋಡಿ (couple) ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗ್ತಾನೆ ಇರುತ್ತೆ.

ಮಹಾಲಕ್ಷ್ಮಿ ಈ ಹಿಂದೆ ಅನಿಲ್ (Anil) ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಸಚಿನ್ (Sachin) ಎಂಬ ಮಗನಿದ್ದಾನೆ. ನಂತರ ಇಬ್ಬರೂ ವಿಚ್ಛೇದನ (divorce) ಪಡೆದರು. ಮೊದಲ ಪತಿಯಿಂದ ದೂರವಾದ ಬಳಿಕ ನಟಿ ರವೀಂದರ್ ಜೊತೆ ಮದುವೆಯಾಗಿದ್ದಾರೆ.

ರವೀಂದರ್ ಕೂಡ ಈಗಾಗಲೇ ಎರಡನೇ ಮದುವೆಯಾಗಿ ತನ್ನ ಮೊದಲಿನ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆ ಆದಾಗಿನಿಂದಲೂ ಈ ಜೋಡಿ ನಿನಗೆ ನಾನು,‌ ನನಗೆ ನೀನು ಎಂಬಂತೆ ಪ್ರೀತಿಯೇ ಸರ್ವಸ್ವ ಎಂದು ಬದುಕುತ್ತಿದ್ದಾರೆ.

ಈ ಜೋಡಿಯು ಮದುವೆಯಾದಗಿನಿಂದಲೂ ತನ್ನ ಅಭಿಮಾನಿಗಳ ಜೊತೆಗೆ ತನ್ನ ವೈಯಕ್ತಿಕ (personal) ವಿಷಯವನ್ನು ಕೂಡ ಹಂಚಿಕೊಳ್ಳುತ್ತಿದ್ದರು. ಹೀಗಿರುವಾಗ ರವೀಂದರ್ ಅವರು ತನ್ನ ಪತ್ನಿ ಮಹಾಲಕ್ಷ್ಮಿ ಜೊತೆಗೆ ದೇವಸ್ಥಾನಕ್ಕೆ (temple) ಭೇಟಿ ನೀಡಿದ ಭಾವಚಿತ್ರವನ್ನು (photo) ಹಂಚಿಕೊಂಡಿದ್ದಾರೆ. ನೋವುಗಳಿಲ್ಲದ ಜೀವನವಿಲ್ಲ, ಹೊಸ ದಾರಿಯಿಲ್ಲದೆ ಜೀವನ ಸಾಗುವುದಿಲ್ಲ ಎಂದು ಸಂತಸದಿಂದ ಬರೆದುಕೊಂಡಿದ್ದಾರೆ. ಹಾಗೆಯೇ ನಾನು ನನ್ನ ಪತ್ನಿ ಮಹಾಲಕ್ಷ್ಮಿಗೆ ಎಂದಿಗೂ ಯಾವ ಸಮಯದಲ್ಲಿಯೂ ನೋವನ್ನು ಬಯಸದ ಹಾಗೆ ತನ್ನ ಪ್ರೀತಿಯನ್ನು ನೀಡಲು ಸಿದ್ದನಾಗುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ (social media) ಬರೆದುಕೊಂಡಿದ್ದಾರೆ.

Leave A Reply

Your email address will not be published.