Oral Health : ಉಸಿರಿನ ದುರ್ನಾತದಿಂದ ಮುಜುಗರವಾಗುತ್ತಿದೆಯೇ? ಮುಖ್ಯ ಕಾರಣವೇನು? ಮನೆಮದ್ದುಗಳಿಂದ ಪರಿಹಾರ ಸಿಗುತ್ತಾ?

Oral Health: ಕೆಲವರು ಬಾಯಿ ತೆರೆದರೆ ಕೆಟ್ಟ ವಾಸನೆ ಬರುತ್ತದೆ. ಇದು ಅನೇಕರನ್ನು ಕಾಡುವ ಸಮಸ್ಯೆ. ಇದು ಅವರಿಗಷ್ಟೇ ಅಲ್ಲ, ಇತರರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಬಾಯಿ ತೆರೆದು ಮಾತನಾಡಲು ಸಹ ಅವರು ಹಿಂಜರಿಯುತ್ತಾರೆ. ಅಷ್ಟೇ ಅಲ್ಲ ಮುಜುಗರಕ್ಕೊಳಗಾಗುವುದು ಬೇಡವೆಂದು ಜನರ ಮಧ್ಯದಿಂದ ದೂರವಿರಲು ಬಯಸುತ್ತಾರೆ. ವಿಶ್ವದಲ್ಲಿ ಹಲವರಲ್ಲಿ ಕೆಲವರಿಗೆ ಈ
ಉಸಿರಿನ ದುರ್ನಾತದ ಸಮಸ್ಯೆ (Oral Health) ಇರುತ್ತದೆ. ಇದಕ್ಕೆ ಮುಖ್ಯ ಕಾರಣವೇನು? ಇದರ ಪರಿಹಾರಕ್ಕೆ ಮನೆಮದ್ದುಗಳೇನು? (Home remedies) ಎಂಬುದನ್ನು ತಿಳಿಯೋಣ‌.

 

ಉಸಿರಿನ ದುರ್ನಾತಕ್ಕೆ ಕಾರಣವೇನು?
ಆಹಾರ ಸೇವನೆಯ ಸಂದರ್ಭದಲ್ಲಿ ಹಲ್ಲು, ವಸಡಿನಲ್ಲಿ ಆಹಾರವು ಸಿಕ್ಕಿಕೊಳ್ಳುತ್ತದೆ. ಇದು ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಬಾಯಿ ವಾಸನೆ ಉಂಟಾಗುತ್ತದೆ. ಬಾಯಿಯೊಳಗೆ ಬ್ಯಾಕ್ಟೀರಿಯಾಗಳು ಹುಟ್ಟಿಕೊಂಡು ಉಸಿರಿನ ದುರ್ನಾತಕ್ಕೆ ಕಾರಣವಾಗುತ್ತವೆ. ಬಾಯಿ ವಾಸನೆಗೆ ಪ್ರಮುಖ ಕಾರಣ, ಬ್ರಷ್‌ (brush) ಮಾಡದೇ ಇರುವುದು, ತಪ್ಪಾದ ರೀತಿಯಲ್ಲಿ ಬ್ರಷ್ ಮಾಡುವುದು, ನಾಲಿಗೆಯನ್ನು ಸ್ವಚ್ಛ ಮಾಡದೇ ಇರುವುದು. ಅಲ್ಲದೆ, ಕೆಲವೊಮ್ಮೆ ಆಸಿಡ್‌ ರಿಫ್ಲಕ್ಸ್‌ ಕೂಡ ಬಾಯಿಯ ವಾಸನೆಗೆ ಕಾರಣವಾಗಬಹುದು. .

ಉಸಿರಿನ ದುರ್ನಾತ ನಿವಾರಣೆಗೆ ಮನೆಮದ್ದುಗಳೇನು?

ಬಾಯಿಯನ್ನು ಸ್ವಚ್ಛವಾಗಿಡುವುದು: ಪ್ರತಿದಿನ ಬ್ರಷ್ ಮಾಡಬೇಕು. ಸರಿಯಾದ ವಿಧಾನದಲ್ಲಿ ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡುವುದು.
ಗುಣಮಟ್ಟದ ಟೂತ್‌ಪೇಸ್ಟ್‌ (tooth paste) ಬಳಸಬೇಕು. ಹಾಗೇ ಬ್ರಷಿಂಗ್ ವೇಳೆ ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಮೌತ್‌ವಾಶ್‌ (mouth wash) ಬಳಸುವುದು. ಈ ಎಲ್ಲಾ ವಿಧಾನಗಳನ್ನು ಅನುಸರಿಸಿದರೆ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉಸಿರಿನ ದುರ್ನಾತ ದೂರ ಮಾಡಬಹುದು.

ಗ್ರೀನ್‌ ಟೀ: ಗ್ರೀನ್‌ ಟೀ (green tea) ಸೋಂಕುನಿವಾರಕ ಮತ್ತು ಡಿಯೋಡರೈಸಿಂಗ್ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಇದು ತಾತ್ಕಾಲಿಕವಾಗಿ ಉಸಿರಿಗೆ ತಾಜಾತನ ನೀಡುತ್ತದೆ. ಗ್ರೀನ್‌ ಟೀಯನ್ನು ರಾತ್ರಿ ಕುದಿಸಿ ಫ್ರಿಜ್‌ನಲ್ಲಿಡಿ. ಬೆಳಿಗ್ಗೆ ಅದಕ್ಕೆ ನೀರು ಸೇರಿಸಿ ಆಗಾಗ ಕುಡಿಯುತ್ತಿರಿ. ಇದರಿಂದ ದುರ್ವಾಸನೆಗೆ ಪರಿಹಾರ ಸಿಗುತ್ತದೆ. ನೀವು ಪುದಿನಾ ಸೊಪ್ಪಿನ ಟೀಯಿಂದಲೂ ಇದನ್ನು ಮಾಡಬಹುದು.

ವಿನೆಗರ್ (vinegar) : ವಿನೆಗರ್‌ನಲ್ಲಿ ನೈಸರ್ಗಿಕ ಆಸಿಟಿಕ್‌ ಆಮ್ಲವಿದೆ. ಇದರಿಂದಾಗಿ ಬ್ಯಾಕ್ಟೀರಿಯಾಗಳು ಹುಟ್ಟುವುದಿಲ್ಲ. ವಿನೆಗರ್‌ ಅನ್ನು ಮೌತ್‌ವಾಷ್‌ ರೀತಿ ಬಳಸುವುದರಿಂದ ಬಾಯಿಯ ಅಥವಾ ಉಸಿರಿನ ದುರ್ನಾತಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಲವಂಗ ಅಗಿಯುವುದು: ಲವಂಗ ಸೇವನೆಯು ಹಲ್ಲಿನ ಆರೋಗ್ಯಕ್ಕೆ ಉತ್ತಮ ಪರಿಹಾರ. ಹಲ್ಲುನೋವಿದ್ದಾಗ ಲವಂಗದ ಎಣ್ಣೆ ಹಲ್ಲಿನ ಮೇಲೆ ಲವಂಗದ ಎಣ್ಣೆ ಸವರುವುದರಿಂದ ನೋವಿಗೆ ಪರಿಹಾರವಾಗುತ್ತದೆ. ಹಾಗೆಯೇ ಬಾಯಿ ದುರ್ನಾತಕ್ಕೆ ದಿನದಲ್ಲಿ 2 ರಿಂದ 3 ಲವಂಗ ಅಗಿಯಿರಿ. ಇದರಿಂದ ಬಾಯಿಯ ವಾಸನೆಯನ್ನು ನಿಯಂತ್ರಿಸಬಹುದು.

ಆಪಲ್‌ ಸೀಡರ್‌ ವಿನೆಗರ್‌: ಬಾಯಿಯ ದುರ್ನಾತ ತಡೆಯಲು ಆಪಲ್‌ ಸೀಡರ್‌ ವಿನೆಗರ್‌ ಕೂಡ ಉತ್ತಮ ಮನೆಮದ್ದು. ಇದನ್ನು ನೀರಿನೊಂದಿಗೆ ಸೇರಿಸಿ, 30 ನಿಮಿಷಗಳ ಕಾಲ ಬಾಯಿ ಮುಕ್ಕಳಿಸಿ.
ಈ ರೀತಿ ಬಾಯಿಯ ವಾಸನೆಯನ್ನು ಹೋಗಲಾಡಿಸಿ.

ಬೇಕಿಂಗ್‌ ಸೋಡಾ (baking soda): ಬೇಕಿಂಗ್‌ ಸೋಡಾದಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಗುಣವಿದೆ. ಹಾಗಾಗಿ ಟೂತ್‌ಪೇಸ್ಟ್‌ಗಳಲ್ಲೂ ಬೇಕಿಂಗ್‌ ಸೋಡಾ ಬಳಸಲಾಗುತ್ತದೆ. ನಿಮ್ಮ ಬಾಯಿ ದುರ್ನಾತವಿದ್ದರೆ, ಒಂದು ಕಪ್‌ ಬಿಸಿನೀರಿನಲ್ಲಿ 2 ಚಮಚ ಬೇಕಿಂಗ್‌ ಸೋಡಾ ಸೇರಿಸಿ, ಅದರಿಂದ ಬಾಯಿ ಮುಕ್ಕಳಿಸಿ. ಈ ಮೇಲೆ ಹೇಳಿದ ರೀತಿಯಾಗಿ ಮಾಡಿದರೆ ಉಸಿರಿನ ದುರ್ನಾತ ಹೋಗಲಾಡಿಸಬಹುದು.

ಇದನ್ನೂ ಓದಿ: Arecanut Coffee Rate 21/03/2023 : ಇಂದಿನ ಅಡಿಕೆ, ಏಲಕ್ಕಿ, ಕಾಫಿ ಬೆಲೆ ಎಷ್ಟು?

Leave A Reply

Your email address will not be published.