Malaika Arora:’ಸೆಕ್ಸ್ ಸಿಂಬಲ್’ ಎಂದು ಕರೆಯುವ ಬಗ್ಗೆ ಮೌನ ಮುರಿದ ಮಲೈಕಾ: ಹಾಗೆ ಕರೆದರೆ ಬೇಸರವಿಲ್ಲ ಎಂದ ನಟಿ

Malaika Arora :ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾರನ್ನು ‘ಸೆಕ್ಸ್ ಸಿಂಬಲ್'(Sex Symbol) ಎಂದೇ ಕರೆಯಲಾಗುತ್ತೆ. ಈ ಕುರಿತು ಇದುವರೆಗು ಮಲೈಕಾ(Malaika Arora) ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೀಗ ಮಲೈಕಾ ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಸೆಕ್ಸ್ ಸಿಂಬಲ್’ ಎಂದು ಕರೆಯುವುದು ತನಗೆ ಸಂತೋಷ ಎಂದು ಹೇಳಿದ್ದಾರೆ.

 

ಹೌದು, ಸದಾ ಹಾಟ್ ಮತ್ತು ಮಾದಕ ನೋಟದಿಂದನೇ ಸುದ್ದಿಯಲ್ಲಿರುವ ಮಲೈಕಾ ಅವರನ್ನು ಸೆಕ್ಸ್ ಸಿಂಬಲ್ ಎಂದರೆ ಕರೆಯಲಾಗುತ್ತಿತ್ತು. ಈ ಬಗ್ಗೆ ಮಲೈಕಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದರಿಂದ ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಬಹಿರಂಗ ಪಡಿಸಿರುವ ಅವರು ‘ಸೆಕ್ಸ್ ಸಿಂಬಲ್’ ಎಂದು ಕರೆಯುವುದು ನನಗೆ ಖುಷಿ ಕೊಡುತ್ತೆ ಎಂದು ಹೇಳಿದ್ದಾರೆ.

ಅಂದಹಾಗೆ ಯಾವುದೇ ಕಾರ್ಯಕ್ರಮವಿರಲಿ, ಜಿಮ್ ಗೆ ಹೋಗಲಿ, ಮನೆಯಿಂದ ಆಚೆ ಹೆಜ್ಜೆ ಇಟ್ಟರೆ ಸಾಕು ಅವರು ಹಾಕುವ ಬಟ್ಟೆಗಳು ಯಾವತ್ತಿಗೂ ತುಂಡು ತುಂಡು. ಈ ಕಾರಣಕ್ಕಾಗಿಯೇ ಮಲೈಕಾ ಅವರನ್ನು ಸೆಕ್ಸ್ ಸಿಂಬಲ್ ಗೆ ಹೋಲಿಸಿ ಟ್ರೋಲ್ ಮಾಡಲಾಗುತ್ತದೆ. ಈ ನಡೆ ಅವರಿಗೆ ಯಾವುದೇ ಕಾರಣಕ್ಕೂ ಬೇಸರ ತರಿಸಿಲ್ಲವಂತೆ. ಅವರೇ ಸಂದರ್ಶನದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

‘ನಾನು ಸೆಕ್ಸ್ ಸಿಂಬಲ್ ಎಂದು ಕರೆಯುವುದನ್ನು ಇಷ್ಟಪಡುತ್ತೇನೆ. ಸೆಕ್ಸ್ ಸಿಂಬಲ್ ಆಗಿರುವ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ಪ್ಲೇನ್ ಜೇನ್ (ಸುಂದರವಾಗಿಲ್ಲ) ಎಂದು ಕರೆಸಿಕೊಳ್ಳುವುದಕ್ಕಿಂತ ನನಗೆ ‘ಸೆಕ್ಸ್ ಸಿಂಬಲ್’ ಎಂದು ಕರೆಸಿಕೊಳ್ಳುವುದೇ ಖುಷಿ. ಇದರಿಂದ ನಾನು ತುಂಬಾ ಸಂತೋಷವಾಗಿದ್ದೇನೆ ಮತ್ತು ಆ ಟ್ಯಾಗ್ (ಸೆಕ್ಸ್ ಸಿಂಬಲ್) ಅನ್ನು ಇಷ್ಟಪಡುತ್ತೇನೆ’ ಎಂದು ಹೇಳಿದರು.

ನಾನು ಧರಿಸುವ ಬಟ್ಟೆಗಳ ಬಗ್ಗೆ ನನಗೆ ಯಾವುದೇ ತಕರಾರು ಇಲ್ಲ. ನನ್ನನ್ನು ಸೆಕ್ಸ್ ಸಿಂಬಲ್ ಅಂತ ಕರೆದರೂ ಕೋಪ ಬರುವುದಿಲ್ಲ. ಒಂದು ರೀತಿಯಲ್ಲಿ ನಾನು ಅದನ್ನು ಪಾಸಿಟಿವ್ ಆಗಿಯೇ ತಗೆದುಕೊಳ್ಳುತ್ತೇನೆ. ಇಂಡಸ್ಟ್ರಿಯಲ್ಲಿ ನಾನು ಮೂವತ್ತು ವರ್ಷಗಳಿಂದ ಇದ್ದೇನೆ ಅಂದರೆ, ಅದು ಕೇವಲ ಸೌಂದರ್ಯದಿಂದ ಮಾತ್ರವಲ್ಲ ಎಂದು ಹೇಳುವ ಮೂಲಕ ಕಾಸ್ಟ್ಯೂಮ್‍ ಬಗೆಗಿನ ತಕರಾರಿಗೆ ತೆರೆ ಎಳೆದಿದ್ದಾರೆ.

Leave A Reply

Your email address will not be published.