Virat Kohli : ವಿರಾಟ್ ತಿನ್ನೋ ಅಕ್ಕಿ ಬೆಲೆ ಕೇಳಿದ್ರೆ ನಿಜಕ್ಕೂ ಆಶ್ಚರ್ಯಪಡ್ತೀರ!
Virat Kohli : ಕ್ರಿಕೆಟ್ ಪಂದ್ಯದಲ್ಲಿ(cricket tournament) ಅತ್ಯಂತ ಸಂಭಾವನೆ ಪಡೆದ ವಿರಾಟ್ ಕೊಹ್ಲಿ(Virat Kohli) ತನ್ನ ಫಿಟ್ನೆಸ್(fitness) ಬಗ್ಗೆ ಜಾಗರೂಕತೆಯನ್ನು(carefull) ವಹಿಸುತ್ತಿದ್ದಾರೆ. ಹೇಗೆ ಎಂದರೆ ಆಹಾರದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್‌ಗಳನ್ನು (carbohydrate) ಸೇವಿಸುವುದಿಲ್ಲ. ಯಾಕೆಂದರೆ ದೇಹದ ಕೊಬ್ಬನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಿರಾಟ್ ಕೊಹ್ಲಿ ತನ್ನ ದೇಹಕ್ಕೆ ಬೇಕಾದ ಪದಾರ್ಥಗಳ ಹಿಟ್ಟಿನ ಬ್ರೆಡ್ ಮಾತ್ರ ತಿನ್ನುತ್ತಾರೆ. ವಿರಾಟ್ ಕೊಹ್ಲಿ ಮೊಸರು (curd), ಹಾಲಿನ (milk) ಉತ್ಪನ್ನಗಳು ಅಥವಾ ಗೋಧಿ ಹಿಟ್ಟಿನ (wheat) ಚಪಾತಿಗಳನ್ನು ತಿನ್ನುವುದಿಲ್ಲ. ತನ್ನ ಫಿಟ್ನೆಸ್ ಬಗ್ಗೆ ಹೆಚ್ಚಿನ ಕೇರ್ ಅನ್ನು ತೆಗೆದುಕೊಳ್ಳುತ್ತಿದ್ದಾರೆ.
ಕೊಹ್ಲಿ ಸಾಮಾನ್ಯ ಅನ್ನದ (rice) ಬದಲು ಸ್ಪೇಷಲ್ ಅನ್ನ (special rice) ತಿನ್ನುತ್ತಾರೆ. ಈ ಅಕ್ಕಿಯನ್ನು ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಗ್ಲುಟನ್(gluten) ಮುಕ್ತ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಕಡಿಮೆ ಇರುವ ಈ ಅಕ್ಕಿ ಸಾಮಾನ್ಯ ರುಚಿಯನ್ನು ಸಹ ಹೊಂದಿದೆ. ಈ ಅಕ್ಕಿಯ ಬೆಲೆ ಕೆಜಿಗೆ 400 ರಿಂದ 500 ಇದೆ ಅಂತೆ ಹಾಗಾಗಿ ವಿರಾಟ್ ಕೊಹ್ಲಿ ತನ್ನ ದೇಹದ ಫಿಟ್ನೆಸ್ ಬಗ್ಗೆ ಹೆಚ್ಚಿನ ಜಾಗರೂಕರಾಗಿರುತ್ತಾರೆ.
34ನೇ ವಯಸ್ಸಿನಲ್ಲಿಯೂ ಕೊಹ್ಲಿ ಸಖತ್ ಫಿಟ್ ಆಂಡ್ ಫೈನ್ (fit and fine)ಆಗಿದ್ದಾರೆ ಹಾಗಾಗಿ ಫಿಟ್‌ನೆಸ್‌ಗಾಗಿ ಹಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ಸಂದರ್ಶನದ (program) ಮಾತುಕತೆಯಲ್ಲಿ ವಿರಾಟ್ ಹೇಳಿದ್ದರು. ನಾನು ಡೈರಿ ಉತ್ಪನ್ನಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಅಲ್ಲದೆ ಗೋಧಿಯಿಂದ ಮಾಡಿದ ಬ್ರೆಡ್ (bread) ತಿನ್ನುವುದಿಲ್ಲ ಎಂದು ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಹಾಗೆಯೇ ಹೆಚ್ಚಿನ ಸಿಹಿಯನ್ನು ತಿನ್ನುವುದನ್ನು ನಿಲ್ಲಿಸಿದ್ದೇನೆ. ಇದರಿಂದಾಗಿ ಹೆಚ್ಚು ಫಿಟ್ ಆಗಿರಲು ಸಹಾಯಕವಾಗಿದೆ ಎಂದು ತಮ್ಮ ಫಿಟ್ನೆಸ್ ಬಗ್ಗೆ ಸಂದರ್ಶನ ಒಂದರಲ್ಲಿ ಮಾಹಿತಿ ನೀಡಿದ್ದಾರೆ.
ನಾನು ಏನು ತಿನ್ನಬೇಕೆಂದು ನನಗೆ ತಿಳಿದಿದೆ. ನಾನು ಇರುವ ವಯಸ್ಸಿನಲ್ಲಿ ಡಯೆಟ್(diet) ಪ್ರಮುಖ ಪಾತ್ರ ವಹಿಸುತ್ತದೆ. ಇದು ನನ್ನ ತಂಡಕ್ಕೆ ಹೆಚ್ಚಿನ ಗೆಲುವು ಅಥವಾ ಪ್ರತಿಶತ ನೀಡಲು ನನಗೆ ಸಹಾಯ ಮಾಡುತ್ತದೆ’. ಹಾಗೆಯೇ ಕೊಹ್ಲಿ ಬೆಳಗಿನ ಉಪಾಹಾರದ ಕುರಿತು ಮಾತನಾಡಿದವರು ಮೂರು ಮೊಟ್ಟೆಯ ಬಿಳಿಭಾಗ ಮತ್ತು ಒಂದು ಸಂಪೂರ್ಣ ಮೊಟ್ಟೆಯ ಆಮ್ಲೆಟ್‌ನಿಂದ ತನ್ನ ದಿನ ನಿತ್ಯ ಪ್ರಾರಂಭವಾಗುತ್ತದೆ. ಜೊತೆಗೆ ಬೇಯಿಸಿದ ಚಿಕನ್ (chicken), ಹಿಸುಕಿದ ಆಲೂಗಡ್ಡೆ, ಪಾಲಕ ಮತ್ತು ತರಕಾರಿಗಳನ್ನು (vegetable) ತಮ್ಮ ಊಟದಲ್ಲಿ ಸೇವಿಸುತ್ತೇನೆ ಎಂದು ಹೇಳಿದ್ದರು.