Two Wheeler Bluetooth Connectivity : ಭಾರತದಲ್ಲಿ ಬ್ಯೂಟೂತ್ ಕನೆಕ್ಟಿವಿಟಿ ಹೊಂದಿರುವ ವಾಹನಗಳು ಇವು! ಎಷ್ಟೊಂದು ಕಡಿಮೆ ಬೆಲೆಯಲ್ಲಿ ಗೊತ್ತಾ?
Bluetooth Bike : ಜನರ ಅಗತ್ಯತೆಗಳಿಗೆ ತಕ್ಕಂತೆ ತಂತ್ರಜ್ಞಾನ (Technology) ಬೆಳವಣಿಗೆ ಹೊಂದುತ್ತಿದೆ. ಸದ್ಯ ಜೀವನ ಶೈಲಿ ಬದಲಾಗುತ್ತಿದ್ದಂತೆ, ಜನರ ಬೇಡಿಕೆಗಳು ಸಹ ಬದಲಾಗುವುದು ಸಹಜ. ಇನ್ನು ವಾಹನ ವಿಷಯಕ್ಕೆ ಬಂದರೆ ದೇಶೀಯ ಮಾರುಕಟ್ಟೆಯಲ್ಲಿ ‘ಬ್ಲೂಟೂತ್ ಕನೆಕ್ಟಿವಿಟಿ’ ಹೊಂದಿರುವ ದ್ವಿಚಕ್ರ ವಾಹನಗಳನ್ನು ಎಲ್ಲರೂ ಲೈಕ್ ಮಾಡುತ್ತಾರೆ. ಈ ವೈಶಿಷ್ಟ್ಯ ಪಡೆದಿರುವ ಬೈಕ್, ಸ್ಕೂಟರ್ ಗಳಲ್ಲಿ ಕಾಲ್, ಎಸ್‌ಎಂಎಸ್, ವಾಟ್ಸಪ್ ಅಲರ್ಟ್ ಸೇರಿದಂತೆ ಇನ್ನಿತರೇ ಮಾಹಿತಿಗಳು ಸವಾರರಿಗೆ ಸಿಗುತ್ತದೆ. ಇದೀಗ ನಿಮ್ಮ ಬಜೆಟ್ ಬೆಲೆಯಲ್ಲಿ ಬ್ಲೂಟೂತ್ ಕನೆಕ್ಟಿವಿಟಿ (Bluetooth Bike) ಇರುವ ದ್ವಿಚಕ್ರ ವಾಹನಗಳನ್ನು ಇಲ್ಲಿ ತಿಳಿಸಲಾಗಿದೆ.
ಹೀರೋ ಸ್ಪ್ಲೆಂಡರ್ ಪ್ಲಸ್ XTEC:
ಪ್ರಸ್ತುತ ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್, ಇತ್ತೀಚೆಗೆ ಆಕರ್ಷಕ ವೈಶಿಷ್ಟ್ಯದೊಂದಿಗೆ ಅದರಲ್ಲೂ ಬ್ಲೂಟೂತ್ ಸಂಪರ್ಕಿತ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಯ್ಕೆಯೊಂದಿಗೆ ನೂತನ ಸ್ಪ್ಲೆಂಡರ್ ಪ್ಲಸ್ XTEC ಬೈಕ್ ನ್ನು ರೂ.76,346 ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಇದು, ಲೊ ಫ್ಯುಯೆಲ್ ಇಂಡಿಕೇಷನ್, ರಿಯಲ್ ಟೈಮ್ ಮೈಲೇಜ್ ಸೇರಿದಂತೆ ವಿವಿಧ ಮಾಹಿತಿಯನ್ನು ಸವಾರರಿಗೆ ಒದಗಿಸುತ್ತದೆ.
ಹೀರೋ ಸ್ಪ್ಲೆಂಡರ್ ಪ್ಲಸ್ XTEC ಎಂಜಿನ್ ಕಾರ್ಯಕ್ಷಮತೆ:
ಇದು 97.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8000 rpmನಲ್ಲಿ 7.92 bhp ಗರಿಷ್ಠ ಪವರ್ ಹಾಗೂ 6000 rpmನಲ್ಲಿ 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. 75- 81km/l ಮೈಲೇಜ್ ನೀಡುತ್ತದೆ.
ಯಮಹಾ ಫ್ಯಾಸಿನೊ ಸ್ಕೂಟರ್:
ದೇಶೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯ ‘ಫ್ಯಾಸಿನೊ 125’ ಸ್ಕೂಟರ್ ಎರಡು ರೂಪಾಂತರಗಳಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ ಡ್ರಮ್ ಹಾಗೂ ಡಿಸ್ಕ್. ಆದರೆ, ಈ ಸ್ಕೂಟರ್ ನ ಡಿಸ್ಕ್ ರೂಪಾಂತರ ಮಾತ್ರ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ರೂ.88,230 (ಎಕ್ಸ್ ಶೋರೂಂ) ಬೆಲೆಯಲ್ಲಿಗ್ರಾಹಕರಿಗೆ ಸಿಗಲಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಕಾಲ್ ಅಲರ್ಟ್, ಎಸ್‌ಎಂಎಸ್, ಇ-ಮೇಲ್, ಫೋನ್ ಬ್ಯಾಟರಿ ಸೇರಿದಂತೆ ಇನ್ನಿತರೆ ಉಪಯುಕ್ತ ಮಾಹಿತಿಯನ್ನು ನೋಡಬಹುದು.
ಯಮಹಾ ಫ್ಯಾಸಿನೊ ಸ್ಕೂಟರ್ ಕಾರ್ಯಕ್ಷಮತೆ:
ಇದು 125 ಸಿಸಿ ಎಂಜಿನ್ ಹೊಂದಿದ್ದು, 8.2 PS ಗರಿಷ್ಠ ಪವರ್ ಹಾಗೂ 10.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 68.75 kmpl ಮೈಲೇಜ್ ನೀಡಲಿದೆ. 99 kg ತೂಕವಿರುವ ಈ ಸ್ಕೂಟರ್, 5.2 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ. ಐದು ರೂಪಾಂತರಗಳು ಹಾಗೂ 16 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.
Ntorq 125 ರೇಸ್ ಎಡಿಷನ್ :
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾರುವ ‘ಟಿವಿಎಸ್’ ಕಂಪನಿಯ Ntorq 125 ರೇಸ್ ಎಡಿಷನ್, ರೂ.92,891 ದರದಲ್ಲಿ ಖರೀದಿಗೆ ದೊರೆಯಲಿದೆ. ಇದರ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಇನ್-ಕಮಿಂಗ್ ಕಾಲ್, ಎಸ್‌ಎಂಎಸ್, ಮಿಸ್ಡ್ ಕಾಲ್ ಸೇರಿದಂತೆ ವಿವಿಧ ಮಾಹಿತಿಯನ್ನು ತೋರಿಸುತ್ತದೆ.
Ntorq 125 ರೇಸ್ ಎಡಿಷನ್ ಕಾರ್ಯಕ್ಷಮತೆ :
ಇದು 124.8 ಸಿಸಿ ಎಂಜಿನ್ ಹೊಂದಿದ್ದು, 9.25 bhp ಗರಿಷ್ಠ ಪವರ್ ಹಾಗೂ 10.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 40 kmpl ಮೈಲೇಜ್ ನೀಡುತ್ತದೆ.
ರೈಡ್ ಕನೆಕ್ಟ್ ಎಡಿಷನ್ ಸ್ಕೂಟರ್:
ಯಮಹಾ ಫ್ಯಾಸಿನೊ 125ರಂತೆಯೇ ಸುಜುಕಿಯ ಎಂಟ್ರಿ ಲೆವೆಲ್ ಸ್ಕೂಟರ್ ‘ಆಕ್ಸೆಸ್ 125’ ಆಗಿದ್ದು, ಮೂರು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಸ್ಟ್ಯಾಂಡರ್ಡ್, ಸ್ಪೆಷಲ್ ಎಡಿಷನ್ ಮತ್ತು ರೈಡ್ ಕನೆಕ್ಟ್ ಎಡಿಷನ್. ಆದರೆ, ಇವುಗಳಲ್ಲಿ ರೈಡ್ ಕನೆಕ್ಟ್ ಎಡಿಷನ್ ಸ್ಕೂಟರ್ ಮಾತ್ರ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದ್ದು, ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ ಕಾಲರ್ ಐಡಿ, ಫೋನ್ ಬ್ಯಾಟರಿ ಸೇರಿದಂತೆ ಹೆಚ್ಚಿನ ವಿವರವನ್ನು ತಿಳಿಸುತ್ತದೆ . ಇದು ರೂ.85,500 ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.
ಒಟ್ಟಾರೆ, ಈ ದ್ವಿಚಕ್ರ ವಾಹನಗಳು ಉತ್ತಮ ಇಂಧನ ದಕ್ಷತೆಯನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಆಯ್ಕೆಯೊಂದಿಗೆ ಹೆಚ್ಚು ಆಕರ್ಷಕವಾಗಿದ್ದು, ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುವ ಭರವಸೆ ಇದೆ .