Addanda Cariappa : ‘ಟಿಪ್ಪು ನಿಜ ಕನಸುಗಳು’ ನಾಟಕ ರಚನಗೆ ಸಿದ್ದರಾಮಯ್ಯನೇ ಪ್ರೇರಣೆ, ಪೋಷಕ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

Addanda Cariappa : ರಾಜ್ಯದಲ್ಲಿ ಟಿಪ್ಪು(Tipu) ವಿಚಾರ ಕುರಿತ ಚರ್ಚೆಗಳು ಅತಿರೇಕದ ಸ್ವರೂಪಜಳನ್ನು ಪಡೆದುಕೊಂಡಿದೆ. ಬಿಜೆಪಿ(BJP) ಟಿಪ್ಪುವನ್ನೇ ತನ್ನ ಪ್ರಚಾರದ ಬಂಡವಾಳವನ್ನಾಗಿಸಿದೆ. ಈ ನಡುವೆ ರಂಗಾಯಣ(Rangayana) ದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ(Addanda Karyappa) ನವರು ರಚಿಸಿ, ನಿರ್ದೇಶಿಸಿ, ಪ್ರದರ್ಶಿಸುತ್ತಿರುವ ನಾಟಕ ‘ಟಿಪ್ಪು ನಿಜ ಕನಸುಗಳು'(Tipu Nija Kanasugalu) ಭಾರೀ ವಿರೋಧವನ್ನು ಎದುರಿಸುತ್ತಿದೆ. ವಿರೋಧದ ನಡುವೆಯೇ ಹಲವಾರು ಪ್ರದರ್ಶನ ಕಂಡು ಅನೇಕರ ಮೆಚ್ಚುಗೆ, ನಿಂದನೆಗೂ ಪಾತ್ರವಾಗಿದೆ. ಆದರೆ ಸದ್ಯ ಅಡ್ಡಂಡ ಕಾರ್ಯಪ್ಪನವರು (Addanda Cariappa)’ ಈ ನಾಟಕ ರಚಿಸಲು ನನಗೆ ಸಿದ್ದರಾಮಯ್ಯನವರೇ ಪ್ರೇರಣೆ’ ಎಂದು ಹೇಳಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಟಿಪ್ಪು ನಿಜ ಕನಸುಗಳು ನಾಟಕ​ 50ನೇ ಪ್ರದರ್ಶನದ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ ‘ಟಿಪ್ಪು ನಿಜ ಕನಸುಗಳು ನಾಟಕ ಬರೆಯಲು ಸಿದ್ದರಾಮಯ್ಯ ಅವರೇ ಕಾರಣ. ಇದರ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಅವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಣೆ ಮಡಿದ್ದರಿಂದ ನಾನು ಈ ಪುಸ್ತಕ ಬರೆಯಬೇಕಾಯಿತು. ಟಿಪ್ಪು ಅನೇಕ ಚಾಮುಂಡಿ ದೇವಾಲಯಗಳನ್ನು ಧ್ವಂಸಗೊಳಿಸಿದ್ದಾನೆ. ಟಿಪ್ಪು ಕಂಡರೆ ಸಿದ್ದರಾಮಯ್ಯ ಅವರಿಗೆ ಭಯವಿದ್ದರಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು’ ಎಂದು ವ್ಯಂಗ್ಯವಾಡಿದ್ದಾರೆ.

’25 ವರ್ಷದ ಹಿಂದೆ ಕಾರ್ನಾಡ್​(Girsh Karnad) ರವರು ಟಿಪ್ಪು ಕನಸುಗಳು ನಾಟಕ ಮಾಡಿದಾಗ ಇವರೆಲ್ಲ ಸಂಭ್ರಮಿಸಿದರು. ಆದರೆ ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಅನುದಾನ ಕೇಳಿದೆ, ಇದಕ್ಕಾಗಿ ಅವರಿಗೆ ಅನೇಕ ಪತ್ರ ಬರೆದೆ, ಅವರಿಗೆ ನಾಟಕ ವಿಶೇಷ ಅನ್ನಿಸಲೇ ಇಲ್ಲ. ಆದರೆ ಇವೆಲ್ಲದ ನಡುವೆ ನಾನು ನಾಟಕ ಬರೆದೇ ತೀರಿದೆ. ನನ್ನ ಪುಸ್ತಕ 12 ಮುದ್ರಣ ಕಂಡಿದೆ, 45,000 ಜನ ನಾಟಕ ನೋಡಿದ್ದಾರೆ. ಆದರೆ ಇಂದು ನಾಟಕ ಪ್ರದರ್ಶನ ವೇಳೆ ಪ್ರೇಕ್ಷಕರಿಗಿಂತಲೂ ಹೆಚ್ಚು ಪೊಲೀಸರೇ ಇರುತ್ತಾರೆ. ಕೋಲಾರದಲ್ಲೂ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಆಯಿತು. ಸಿದ್ದರಾಮಯ್ಯ ಅಲ್ಲಿ ಚುನಾವಣಾ ಕಣಕ್ಕಿಳಿಯುವ ಕಾರಣಕ್ಕಾಗಿ ಫುಲ್ ಸೆಕ್ಯೂರಿಟಿ ಕೊಟ್ಟಿದ್ದರು’ ಎಂದು ಕುಟುಕಿದ್ದಾರೆ.

ಭದ್ರತೆಗಾಗಿ ನನಗೂ ನಾಲ್ವರು ಪೊಲೀಸರನ್ನು ನೀಡಿದ್ದರು. ಒಂದು ನಾಟಕವನ್ನು ಇಷ್ಟೊಂದು ಪೊಲೀಸ್‌ ಬಂದೋಬಸ್ತು ಮೂಲಕ ಪ್ರದರ್ಶನ ಮಾಡಬೇಕಾದ ಪರಿಸ್ಥಿತಿ ಬಂದಿದ್ದು ಇದೇ ಮೊದಲು ಅನಿಸುತ್ತದೆ. ಇದು ವಿಪರ್ಯಾಸ. ಕೋಲಾರದಲ್ಲಿ 500 ಜನ ನಾಟಕ ನೋಡುವವರಿದ್ದರೆ ಭದ್ರತೆಗೆ 1500 ಪೊಲೀಸರಿದ್ದರು. ಇಷ್ಟೆಲ್ಲಾ ವಿರೋಧದ ನಡುವೆಯೂ ನಾಟಕ ರಾಜ್ಯಾದ್ಯಂತ ಸುಮಾರು 20 ಜಿಲ್ಲೆಗಳಲ್ಲಿ ಭರ್ತಿ ಪ್ರದರ್ಶನ ಕಂಡಿದೆ ಎಂದರು.

ಅಲ್ಲದೆ ಸದ್ಯ ರಾಜ್ಯದಲ್ಲಿ ಭಾರೀ ಚರ್ಚೆಗೆ ಒಳಗಾಗುತ್ತಿರೋ ಉರಿ ಗೌಡ ಹಾಗೂ ನಂಜೇಗೌಡ ವಿಚಾರದ ಬಗ್ಗೆ ಮಾತನಾಡಿದ ಅವರು ಟಿಪ್ಪು ಕೊಂದ ಉರಿಗೌಡ ಮತ್ತು ನಂಜೇಗೌಡ ಇತಿಹಾಸ ಸತ್ಯ ಎಂದು ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು. “2006ರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಬಿಡುಗಡೆಗೊಂಡ ಪುಸ್ತಕದಲ್ಲಿ ಟಿಪ್ಪು ಕೊಂದ ಉರಿಗೌಡ ಮತ್ತು ದೊಡ್ಡ ನಂಜೇಗೌಡರ ಹೆಸರು ಉಲ್ಲೇಖವಾಗಿದೆ. ಇದರ ಬಗ್ಗೆ ಅಂದು ಏನೂ ಮಾತನಾಡದ ಕುಮಾರಸ್ವಾಮಿ ಇಂದು ಏಕೆ ಇದು ಸುಳ್ಳು ಇತಿಹಾಸ ಎಂದು ಹೇಳುತ್ತಿದ್ದಾರೆ?” ಎಂದು ಪ್ರಶ್ನಿಸಿದರು.

ಇತಿಹಾಸಕಾರ ನಂಜರಾಜ್‌ ಅರಸ್‌(Nanjeraj Aras) ಅವರ ವಾಗ್ದಾಳಿ ನಡೆಸಿದ ಅವರು “ರಾಜವಂಶಸ್ಥೆ ಪ್ರಮೋದಾ ದೇವಿ(Pramoda Devi) ನಂಜರಾಜ್ ಅರಸರನ್ನು ತಮ್ಮ ಗೇಟಿನ ಬಳಿಯೂ ಬಿಟ್ಟುಕೊಳ್ಳುವುದಿಲ್ಲ. ಅದಕ್ಕಾಗಿ ಅವರು ಟಿಪ್ಪು ಸುಲ್ತಾನ್‌ ಪರ ಮಾತನಾಡುತ್ತಾರೆ. ಒಕ್ಕಲಿಗರನ್ನು ಗುತ್ತಿಗೆ ಪಡೆದಿರುವಂತೆ ಮಾತನಾಡುತ್ತಿರುವವರು ತಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಟಿಪ್ಪು ಹುಲಿ ಬಾಯಿ ತೆಗೆಯುತ್ತಿರುವ ಚಿತ್ರ ತೋರಿಸಲಾಗಿದೆ. ಯಾರಾದರೂ ಆ ರೀತಿ ಹುಲಿ ಕೊಲ್ಲಲು ಸಾಧ್ಯವೇ? ಇದು ಸಾಧ್ಯ ಎಂದು ನಂಬುವವರು ಉರಿಗೌಡ ಮತ್ತು ನಂಜೇಗೌಡ ಇತಿಹಾದ ವ್ಯಕ್ತಿಯಲ್ಲಎಂದು ಹೇಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ಇನ್ನು ಕಾರ್ಯಕ್ರಮದ ನಡುವೆಯೇ ರಂಗಾಯಣದಲ್ಲಿ ನಿರ್ದೇಶಕರು- ಉಪನಿರ್ದೇಶಕಿ ಜಟಾಪಟಿ ಉಂಟಾಯಿತು. ಅಧಿಕಾರಿಗಳು ನನ್ನ ಮೇಲೆ ಚಾಡಿ ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದರು. ನಿತ್ಯವೂ ಅದೇ ಕೆಲಸ ಮಾಡುತ್ತಿದ್ದರು. ಅವರಿಗೆ ಹಿಂದಿನ ಸರ್ಕಾರವೂ ಬೇಕು, ಮುಂದಿನ ಸರ್ಕಾರವೂ ಬೇಕು. ಅವರಿಗೆ ನನ್ನನ್ನು ಸಹಿಸಲು ಆಗಲಿಲ್ಲ. ಭಾಷಣದುದ್ದಕ್ಕೂ ನೇರವಾಗಿಯೇ ನಿರ್ಮಲಾ ಮಠಪತಿ ಹೆಸರು ಪ್ರಸ್ತಾಪಿಸಿಯೇ ವಾಗ್ದಾಳಿ ಮಾಡಿದರು. ಇದಕ್ಕೆ ಭಾಷಣದ ನಡುವೆಯೇ ಉಪನಿರ್ದೇಶಕಿ ನಿರ್ಮಲಾ ಮಠಪತಿ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್, ಅಧಿಕಾರಿಗಳಿಗೆ ಯಾವುದೇ ಐಡಿಯಾಲಜಿ ಇರಲ್ಲ. ಸುಮ್ಮನೆ ನಮ್ಮನ್ನು ದೂಷಿಸಬೇಡಿ ಎಂದು ಕೂಗಿದ್ದಾರೆ.

ಇದನ್ನೂ ಓದಿ: Uri- Nanje Gowda: ಉರಿ-ನಂಜೇಗೌಡರ ವಿಚಾರಕ್ಕೆ ರೋಚಕ ಟ್ವಿಸ್ಟ್ : ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

 

Leave A Reply

Your email address will not be published.