M S Dhoni Girlfriend : ಅಪಘಾತದಲ್ಲಿ ಮೃತಪಟ್ಟ MS Dhoni ಗೆಳತಿ ಫೋಟೋ ನೋಡಿದ್ದೀರಾ?

M S Dhoni Girlfriend : ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ಕ್ಯಾಪ್ಟನ್ ಕೂಲ್ ಅಂತಾನೆ ಫೇಮಸ್. ವಿಶ್ವ ಕ್ರಿಕೆಟ್ ಕಂಡ ಅಪ್ರತಿಮ ಆಟಗಾರ ಮಾತ್ರವಲ್ಲ ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿಯೂ ಶಾಂತ ಚಿತ್ತತೆಯಿಂದ ಗಮನ ಸೆಳೆದ ಟೀಮ್ ಇಂಡಿಯಾ ಸೋಲಬೇಕಿದ್ದ ಅದೆಷ್ಟೋ ಪಂದ್ಯಗಳನ್ನು ಗೆದ್ದುಕೊಟ್ಟು ಸಾರ್ವಕಾಲಿಕ ಶ್ರೇಷ್ಠ ಫಿನಿಷರ್ ಎಂದೇ ಖ್ಯಾತಿ ಪಡೆದ ನಾಯಕ. ಇದೀಗ, ಧೋನಿಯ(Mahendra Singh Dhoni) ಜೀವನದ ( Life)ಕುರಿತ ರೋಚಕ ಮಾಹಿತಿಯೊಂದು ಹೊರಬಿದ್ದಿದೆ.

 

ಭಾರತವು ಧೋನಿ (MS Dhoni)ನಾಯಕತ್ವದಲ್ಲಿ ಐಸಿಸಿ ವಿಶ್ವ ಟಿ20 (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಪ್ರಶಸ್ತಿಗಳನ್ನು ಗೆದ್ದಿದೆ. ಇದರ ಜೊತೆಗೆ, 2009ರಲ್ಲಿ ಇವರ ನಾಯಕತ್ವದ ಅವಧಿಯಲ್ಲಿ ಭಾರತ(India) ಮೊದಲ ಬಾರಿಗೆ ಟೆಸ್ಟ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರು. ಜುಲೈ 4, 2010ರಂದು ಧೋನಿಯು ಡೆಹ್ರಾಡೂನ್ನ ವಿಶ್ರಾಂತಿ ರೆಸಾರ್ಟ್ನಲ್ಲಿ ಸಾಕ್ಷಿ ರಾವತ್ (Sakshi Dhoni)ಅವರ ಕೈ ಹಿಡಿದು ಮದುವೆಯಾಗಿದ್ದರು. ಧೋನಿಯ ಜೀವನದ ಒಂದು ಭಾಗದ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ ಎಂದರು ತಪ್ಪಾಗಲಾರದು.

2011ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದಿದ್ದು ಮಾತ್ರವಲ್ಲ, ಸಾಕ್ಷಿಯವರು ಧೋನಿ ಜೀವನದಲ್ಲಿ ಪತ್ನಿಯಾಗಿ ಪ್ರವೇಶಿಸಿದಾಗಿನಿಂದ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಉತ್ತುಂಗಕ್ಕೇರಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಅವರೊಂದಿಗೆ ಖುಷಿಯಾಗಿದ್ದಾರೆ. ಆದರೆ, ಸಾಕ್ಷಿಯನ್ನು ಮದುವೆಯಾಗುವ ಮೊದಲು ಮಹಿಗೆ ಗರ್ಲ್ ಫ್ರೆಂಡ್ ಇದ್ದರು ಅನ್ನೋದು ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.

ಧೋನಿಯ ಜೀವನದಲ್ಲಿ ಒಬ್ಬಳು ಹುಡುಗಿ ಎಂಟ್ರಿ ಕೊಟ್ಟಿದ್ದು, ಇಬ್ಬರೂ ಕೂಡ ಪರಸ್ಪರ ಪ್ರೀತಿಸುತ್ತಿದ್ದರಂತೆ( Love). ಆದರೆ ವಿಧಿ ಲಿಖಿತವನ್ನು ಯಾರಿಗೂ ಅಳಿಸಲು ಸಾಧ್ಯವಿಲ್ಲ. ವಿಧಿಯಾಟದಿಂದ ಧೋನಿ ಮತ್ತು ಯುವತಿ ಬೇರೆಯಾಗಿದ್ದರಂತೆ. ಧೋನಿ ವೈಯಕ್ತಿಕ ಜೀವನದ (Personal Life) ಕುರಿತಾಗಿ, ‘ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ’ ಎಂಬ ಸಿನಿಮಾ ತೆರೆಗೆ ಬಂದಿದ್ದು ‘ಎಂಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ’ ಎಂಬ ಸಿನಿಮಾದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಧೋನಿ ಗೆಳತಿಯ (M S Dhoni Girlfriend) ಹೆಸರು ಪ್ರಿಯಾಂಕಾ ಝಾ(Priyanka Jha). ಧೋನಿ ಅವರನ್ನು ಪ್ರಿಯಾಂಕಾ ಝಾ ತುಂಬಾ ಪ್ರೀತಿಸುತ್ತಿದ್ದರಂತೆ. ಅಷ್ಟೇ ಅಲ್ಲದೆ, ಆಕೆಯನ್ನೇ ಮದುವೆಯಾಗಲು ಕೂಡ ಬಯಸಿದ್ದರು. ಆದರೆ, ವಿಧಿಲಿಖಿತವೇ ಬೇರೆಯಿತ್ತು ಎಂದು ಯಾರೂ ತಾನೇ ಊಹಿಸಲು ಸಾಧ್ಯ!!. ಹೌದು!!ದುರದೃಷ್ಟವಶಾತ್ ಪ್ರಿಯಾಂಕಾ ಕಾರು ಅಪಘಾತದಲ್ಲಿ( Car Accident) ಅಸುನೀಗಿದರಂತೆ. ಧೋನಿ ತನ್ನ ಗೆಳತಿಯೊಂದಿಗೆ ಇರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹಲವು ಬಾರಿ ವೈರಲ್( Late Girlfriend Photo Viral)ಆಗಿದ್ದು, ಅದರಲ್ಲಿ ಇಬ್ಬರೂ ಒಟ್ಟಿಗೆ ಕುಳಿತಿರುವುದು ಕಂಡುಬಂದಿದೆ. ಆದರೆ, ದೇವರ ಆಟ ಬಲ್ಲವರಾರು ಎಂಬಂತೇ ಪ್ರಿಯಾಂಕ ಬಾರದ ಲೋಕಕ್ಕೆ (death case) ಪಯಣ ಆರಂಭ ಮಾಡಿದರು. ಈ ನಡುವೆ ಪ್ರಿಯಾಂಕಾ ಝಾ ಸಾವನ್ನಪ್ಪಿದ್ದಾರೆ ಎಂದು ಧೋನಿಗೆ ಗೊತ್ತಾಗುತ್ತಿದ್ದಂತೆ ಆ ಸತ್ಯವನ್ನು ಒಪ್ಪಿಕೊಳ್ಳಲು ತುಂಬಾ ಒದ್ದಾಡಿಬಿಟ್ಟರಂತೆ.

ಈ ವೇಳೆ, ಧೋನಿ ಕ್ರಿಕೆಟ್ ಎಂಬ ಮಾಂತ್ರಿಕ ಲೋಕಕ್ಕೆ ಗುಡ್ ಬೈ ಹೇಳುತ್ತಾರೆ ಅಂತಾನೇ ಹೆಚ್ಚಿನವರು ಅಂದುಕೊಂಡಿದ್ದರು. ಎಲ್ಲರ ಊಹೆಯನ್ನು ತಲೆ ಕೆಳಗಾಗುವಂತೆ ಮಾಡಿದ ಮಹಿ, ತನ್ನ ವೈಯಕ್ತಿಕ ಜೀವನದ ಏಳು ಬೀಳುಗಳ ನೋವಿನ ನಡುವೆಯೂ ಕ್ರಿಕೆಟ್ ನಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡು ಯಶಸ್ಸನ್ನು ಪಡೆದು ಖ್ಯಾತಿ ಪಡೆದು ಅನೇಕ ಕಠಿಣ ಪರಿಸ್ಥಿತಿಯಲ್ಲಿಯೂ ಭಾರತ ತಂಡ ಗೆಲ್ಲುವಂತೆ ತಂಡದ ನಾಯಕನಾಗಿ ಮುನ್ನಡೆಸಿದ ಪ್ರಖ್ಯಾತಿ ಹೊಂದಿದ್ದಾರೆ. ಅದೆಷ್ಟೇ ಅಡೆ ತಡೆ ಎದುರಾದರು ಕೂಡ ಧೋನಿ ತಾಳ್ಮೆಯಿಂದ ಇಂದಿಗೂ ತನ್ನ ವೈಯುಕ್ತಿಕ ಜೀವನದಲ್ಲಿ ಖುಷಿಯಿಂದ ಜೀವಿಸುತ್ತಾ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಿದ್ದು ಗಮನಾರ್ಹ ಸಂಗತಿ.

ಇದನ್ನೂ ಓದಿ: Addanda Cariappa : ‘ಟಿಪ್ಪು ನಿಜ ಕನಸುಗಳು’ ನಾಟಕ ರಚನಗೆ ಸಿದ್ದರಾಮಯ್ಯನೇ ಪ್ರೇರಣೆ, ಪೋಷಕ: ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ

Leave A Reply

Your email address will not be published.