Indian Railway: ರೈಲ್ವೇ ಪ್ರಯಾಣಿಕರೇ ಗಮನಿಸಿ, ನೀವು ಕೂಡ ಉಚಿತವಾಗಿ ಈ ಸೇವೆ ಪಡೆಯಬಹುದು

Indian Railway: ಭಾರತದಲ್ಲಿ ಲಕ್ಷಾಂತರ ಪ್ರಯಾಣಿಕರು(Railway Passengers) ರೈಲ್ವೇ ಮೂಲಕ ಪ್ರಯಾಣಿಸುವುದು ಗೊತ್ತಿರುವ ವಿಚಾರವೇ! ನೀವೇನಾದರೂ ರೈಲ್ವೇ ಪ್ರಯಾಣಿಕರಾದರೆ ನಿಮಗೊಂದು ಸಿಹಿ ಸುದ್ದಿಯಿದೆ.

ಭಾರತೀಯ ರೈಲ್ವೆ( Indian Railway)ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ರೈಲ್ವೆ ಪ್ರಯಾಣಿಕರು ಹಬ್ಬದ ಸಂಭ್ರಮದಲ್ಲಿ ಹೆಚ್ಚು ಓಡಾಟ ನಡೆಸುವಾಗ ಜನದಟ್ಟಣೆ ಹೆಚ್ಚಿದ್ದಾಗ ಜನರಿಗೆ ಸಮಸ್ಯೆ ಉಂಟಾಗದಂತೆ ಹೆಚ್ಚುವರಿ ರೈಲ್ವೇ ವ್ಯವಸ್ಥೆ ಕಲ್ಪಿಸುವುದು ಇದೆ. ಇದೀಗ ರೈಲ್ವೇಯಿಂದ ಯಾತ್ರಾರ್ಥಿಗಳಿಗೆ ಹಲವು ಉಚಿತ ಸೇವೆಗಳನ್ನು (Railway Free Service)ನೀಡಲಾಗುತ್ತಿದ್ದು, ಪ್ರಯಾಣಿಕರು ರೈಲ್ವೆ ಒದಗಿಸುವ ಈ ಉಚಿತ ಸೇವೆಗಳ ಲಾಭವನ್ನು ಪಡೆಯಬಹುದಾಗಿದೆ.

ರೈಲ್ವೆಯಿಂದ ಪ್ರಯಾಣಿಕರಿಗೆ ಉಚಿತ ವೈಫೈ ಸೇವೆಯನ್ನು(Indian Railways WiFi) ನೀಡಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಉಚಿತ ವೈಫೈ ಬಳಕೆ ಮಾಡಬಹುದಾಗಿದೆ.ಇನ್ನೂ ಮುಂದೆ ಪ್ರಯಾಣಿಕರು ರೈಲ್ವೇ ಸ್ಟೇಷನ್ ಗೆ ಹೋದಾಗ ಉಚಿತ ವೈಫೈ ( Railway Free WiFi) ಬಳಕೆ ಮಾಡಲು ಅವಕಾಶವಿದ್ದು,ಪ್ರಯಾಣಿಕರು ತಮ್ಮ ಮೊಬೈಲ್‌ ಗೆ (Mobile)ಉಚಿತ ವೈಫೈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಭಾರತವು ತನ್ನ ಸಾರ್ವಜನಿಕರಿಗೆ ರೈಲ್ವೆ ನಿಲ್ದಾಣಗಳಲ್ಲಿ( train) ವಿಶ್ವದ ಅತಿದೊಡ್ಡ ಮತ್ತು ವೇಗದ ಸಾರ್ವಜನಿಕ ಇಂಟರ್ನೆಟ್ ಪೂರೈಕೆದಾರರಾಗುವ ಯೋಜನೆಯಲ್ಲಿದೆ. ದೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 5000 ನಿಲ್ದಾಣಗಳಿದ್ದು, ಈ ಪ್ರದೇಶಗಳು ಕಾಶ್ಮೀರ ಕಣಿವೆಯಲ್ಲಿ 15 ನಿಲ್ದಾಣಗಳನ್ನು ಹೊಂದಿರುವ ಎಲ್ಲಾ ಈಶಾನ್ಯ ರಾಜ್ಯಗಳನ್ನು ಒಳಗೊಂಡಿದೆ. ಇದು ದೇಶದ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಆಡ್-ಆನ್ ಆಗುವ ಲಕ್ಷಣ ಹೊಂದಿದ್ದು, ಹಲವಾರು ರೈಲು ನಿಲ್ದಾಣಗಳಲ್ಲಿ ಅಕ್ಸೆಸ್ ಪಡೆಯಬಹುದಾದ ವೈ-ಫೈ ಇಂಟರ್ನೆಟ್( WiFi Internet Facility )ಸೌಲಭ್ಯಗಳನ್ನು ಯೋಜನೆಯನ್ನು ಒಳಗೊಂಡಿದೆ.

ಭಾರತೀಯ ರೈಲ್ವೆಯು ಭಾರತದ 6100 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಉಚಿತ ವೈಫೈ( Free WiFi) ಸೇವೆಯನ್ನು ನೀಡಲು ಆರಂಭಿಸಿದ್ದು, ಮೊದಲು ಈ ಸೇವೆಯನ್ನು 2016 ರಲ್ಲಿ ಮುಂಬೈ ರೈಲು ನಿಲ್ದಾಣದಲ್ಲಿ ಆರಂಭಿಸಲಾಗಿದೆ. ಗ್ರಾಮೀಣ ಭಾರತದಲ್ಲಿ ಹೆಚ್ಚು ಡೇಟಾವನ್ನು ಬಳಕೆ ಮಾಡುವ ಹಿನ್ನೆಲೆ, ವೈಫೈ ಸೌಲಭ್ಯವು ಗ್ರಾಮೀಣ ಜನರು ಉಚಿತವಾಗಿ ಇಂಟರ್ನೆಟ್ ಅಕ್ಸೆಸ್ ಪಡೆಯಲು ಅವಕಾಶ ಕಲ್ಪಿಸುತ್ತದೆ.

Leave A Reply

Your email address will not be published.