Uri Gowda Nanje Gowda Film: ಉರಿಗೌಡ ನಂಜೇಗೌಡ ಸಿನಿಮಾಕ್ಕೆ ಮುಹೂರ್ತ ಫಿಕ್ಸ್ ; ಖಳನಾಗಿ ಮೂಡಿ ಬರಲಿರುವ ಟಿಪ್ಪು ಸುಲ್ತಾನ್ !!!
Uri Gowda Nanje Gowda Film : ಟಿಪ್ಪು ಸುಲ್ತಾನನನ್ನು (Tippu Sultan) ಕೊಂದಿದ್ದರು ಎಂದು ನಂಬಿರುವ ಉರೀಗೌಡ, ನಂಜೇಗೌಡ ಕುರಿತು ಸಿನಿಮಾ ಸುದ್ದಿ ಹಳೆಯದು. ಆದರೆ.ಈ ಸಿನಿಮಾ ಬೇಗನೆ ಸೆಟ್ಟೇರುತ್ತಿದೆ. ಸಿನಿಮಾ ಮಾಡಲು ಸಚಿವ ನಿರ್ಮಾಪಕ ಮುನಿರತ್ನ ಮುಂದಾಗಿದ್ದರು. ಆದರೆ ಈಗ ನೋಡಿದರೆ ಸಿನಿಮಾ ಕೆಲಸಗಳು ಬಿರುಸಿನಿಂದ ಪ್ರಾರಂಭವಾಗುತ್ತಿವೆ. ಈಗಾಗಲೇ ಚಿತ್ರದ ಶೂಟಿಂಗ್‌ಗೆ ಮುಹೂರ್ತ( Uri Gowda Nanje Gowda Film )ನಿಗದಿ ಮಾಡಲಾಗಿದೆ. ಈ ಚಿತ್ರದ ವಿಶೇಷ ಏನೆಂದರೆ ಸಚಿವರಾಗಿರುವ ಮುನಿರತ್ನ ಅವರು ಈ ಚಿತ್ರವನ್ನು ಪ್ರೊಡ್ಯೂಸ್ ಮಾಡಿದರೆ ಇನ್ನೊಬ್ಬ ಸಚಿವರಾದ ಅಶ್ವತ್ಥ ನಾರಾಯಣ್ ಅವರು ಈ ಸಿನಿಮಾಗೆ ಚಿತ್ರಕತೆ ಬರೆಯಲಿದ್ದಾರೆ. ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆ ಅವರು ಅದೇಗೆ ಸಮಯ ಹೊಂದಿಸಿಕೊಂಡು ಚಿತ್ರಕ್ಕೆ ಚಿತ್ರಕಥೆ ಬರೆಯಲಿದ್ದಾರೆ ಎನ್ನುವುದೇ ಸೋಜಿಗದ ಸಂಗತಿ.
ಟಿಪ್ಪು ಕೊಂದಿದ್ದರು ಎಂದು ಹೇಳಲಾಗುತ್ತಿರುವ ಉರೀಗೌಡ, ನಂಜೇ ಗೌಡ ಕುರಿತು ಸಿನಿಮಾಕ್ಕೆ ಮೇ 18ಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆಯಲಿದೆ. ಈ
ಸಿನಿಮಾಕ್ಕೆ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಚಿತ್ರಕತೆ ಬರೆಯಲಿದ್ದಾರೆ. ವೃಷಬಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ತೋಟಗಾರಿಕಾ ಸಚಿವ ಮುನಿರತ್ನ ಇದರ ನಿರ್ಮಾಪಕರಾಗಿದ್ದಾರೆ. ಅಲ್ಲದೇ, ಆರ್ ಅಶೋಕ್ ಮತ್ತು ಸಿಟಿ ರವಿ ಚಿತ್ರವನ್ನು ಪ್ರೇಕ್ಷಕರಿಗೆ ಅರ್ಪಿಸಲಿದ್ದಾರೆ. ಒಟ್ಟಾರೆ ಬಿಜೆಪಿ ಪ್ರಾಯೋಜಿತ ಸಿನಿಮಾ ಥರ ಈ ಚಿತ್ರತಂಡದಲ್ಲಿ ಎಲ್ಲರೂ ಬಿಜೆಪಿ ನಾಯಕರುಗಳೇ ಇದ್ದಾರೆ.
ಸಿನಿಮಾದ ಮುಹೂರ್ತದ ಬಗ್ಗೆ ಸ್ವತಃ ಸಚಿವ ಮುನಿರತ್ನ ಅವರೇ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ನಾಮ ವೃಷಭಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಸಚಿವ ಶ್ರೀ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ – ಎಂದು ಸಚಿವ ಮುನಿರತ್ನ ಅವರು ತಮ್ಮಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ‘ಉರೀಗೌಡ, ನಂಜೇಗೌಡ’ ಚಾರಿತ್ರಿಕ ಸಿನಿಮಾಗೆ ಟೈಟಲ್ ನೋಂದಾಯಿಸಿದ್ದಾರೆ ಸಚಿವ ಮುನಿರತ್ನ. ಇದರ ಬಗ್ಗೆ ಜೆಡಿಎಸ್ ವ್ಯಾಗರಗೊಂಡಿದೆ. ಬಿಜೆಪಿಯ ಈ ನಡೆ ‘ಒಕ್ಕಲಿಗರ ಮೇಲೆ ವಕ್ರದೃಷ್ಟಿ’ ಎಂದು ಜೆಡಿಎಸ್ ಕಿಡಿಕಾರಿದೆ. ಈ ಮಧ್ಯೆ ಒಕ್ಕಲಿಗರ ಸಂಘವು ಚಿತ್ರಕ್ಕೆ ಊರಿಗೌಡ ಮತ್ತು ನಂಜೇಗೌಡ ಟೈಟಲ್ ನೀಡಬಾರದೆಂದು ಫಿಲಂ ಚೇಂಬರ್ ನ ಮೆಟ್ಟಲೇರಿದೆ.
ಉರಿ ಗೌಡ ನಂಜೇಗೌಡ ಪೋಸ್ಟರ್ ಕೂಡಾ ಬಿಡುಗಡೆ
ಉರಿ ಗೌಡ ನಂಜೇಗೌಡ ಸಿನಿಮಾದ ಪೋಸ್ಟರ್ ಅನ್ನು ಕೂಡಾ ಸಚಿವ ಮುನಿರತ್ನ ಅವರು ಬಿಡುಗಡೆ ಮಾಡಿದ್ದಾರೆ. ಈ ಐತಿಹಾಸಿಕ.ಎನ್ನಿಸುವ ಪೋಸ್ಟರ್‌ನಲ್ಲಿ ಉರೀಗೌಡ ನಂಜೇಗೌಡ ಖಡ್ಗ ಹಿಡಿದು ನಿಂತಿದ್ದಾರೆ. ಕಾಲಮಾನ 1750 ರಿಂದ 1799 ಎಂದು ಹಾಕಲಾಗಿದೆ. ಇತಿಹಾಸದ ಘಟನೆಯನ್ನು ಆಧರಿಸಿದ ಸತ್ಯ ಕತೆ ಇದೆನ್ನಲಾಗಿದೆ. ಪೋಸ್ಟರ್ ನಲ್ಲಿ ಅವರು ಬ್ರಿಟೀಷರೊಂದಿಗೆ ಯುದ್ಧ ಮಾಡುತ್ತಿರುವ ಚಿತ್ರಗಳು ಕಂಡು ಬರುತ್ತಿವೆ. ಬಿಡುಗಡೆಯಾದ ಸಿನಿಮಾ ಪೋಸ್ಟರ್‌ನಲ್ಲಿ ನಿರ್ಮಾಪಕ ಜಾಗದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ಅರ್ಪಿಸುವ ಜಾಗದಲ್ಲಿ ಸಿ ಟಿ ರವಿ ಹಾಗೂ ಆರ್ ಅಶೋಕ್ ಅವರ ಫೋಟೊ ಇವೆ. ಜತೆಗೆ ಕಮಾನುಗಳು, ಗೋರಿಗಳ ಫೋಟೊಗಳನ್ನು ಹಾಕಲಾಗಿದೆ.
ಉರಿಗೌಡ ನಂಜೇಗೌಡರ ಬಗ್ಗೆ ಬಿಜೆಪಿಗೆ ನಂಬಿಕೆ ಇದೆ. ಆದರೆ ಎಚ್‌ಡಿ ಕುಮಾರಸ್ವಾಮಿಗೆ ಅನುಮಾನ ಇದೆ. ಹಾಗಾಗಿ ಇತಿಹಾಸ ಮರುಪರಿಶೀಲನೆ ಮಾಡೋಣ ಎಂದು ಆರ್. ಅಶೋಕ್ ಅವರು ಹೇಳಿದ್ದಾರೆ.
ಮುನಿರತ್ನಂ ನಿರ್ಮಾಣದ ದರ್ಶನ್ ನಾಯಕತ್ವದ ಕುರುಕ್ಷೇತ್ರ ಕಲಾವಿದರು ಈ ಚಿತ್ರದಲ್ಲಿ ನಡೆಸುತ್ತಿದ್ದಾರೆ. ಕುರುಕ್ಷೇತ್ರ ಚಿತ್ರವನ್ನು 3 ಡಿ ಸಿನಿಮಾದಲ್ಲಿ ಮೂಡಿಸಿ ಅಲ್ಲಿ ಕಲಾ ವಿಭಾಗವನ್ನು ನಿರ್ವಹಣೆ ಮಾಡಿದ್ದ ಗೋಪಿ ಎಂಬುವವರೇ ಈ ಸಿನಿಮಾದಲ್ಲಿ ಕಲಾ ಸೃಷ್ಟಿ ವಿಭಾಗವನ್ನು ನಿರ್ವಹಿಸಲಿದ್ದಾರೆ. ಈ ಮೂಲಕ ಅದ್ಧೂರಿಯಾಗಿಯೇ ಚಿತ್ರ ತೆರೆ ಮೇಲೆ ಬರಬಹುದು ಎನ್ನಲಾಗುತ್ತಿದೆ.
ಈ ಚಿತ್ರಕ್ಕೆ ನಾಯಕ ನಟರ ಆಯ್ಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಇಬ್ಬರು ನಾಯಕರುಗಳಾಗಿ ಯಾರು ನಟಿಸಬಹುದು ಎನ್ನುವ ಕುತೂಹಲ ಜನರಿಗೆ ಮೂಡಿದೆ. ಅಲ್ಲದೆ ಟಿಪ್ಪು ಸುಲ್ತಾನ್ ನನ್ನು ಖಳನಾಗಿ ಚಿತ್ರಿಸುವ ಸಂಭವವಿದೆ. ಬಿಜೆಪಿ ನಾಯಕರುಗಳೇ ಕೂತು ಬರೆದು ನಿರ್ಮಿಸುವ ಈ ಚಿತ್ರವು ಮುಂದಿನ ಚುನಾವಣೆಯ ಸಬ್ಜೆಕ್ಟ್ ಆಗಿರುವುದಂತೂ ಸತ್ಯ.