Beaches: ಈ ಬೀಚ್​ಗಳು ಇನ್ನುಮುಂದೆ ಕಾಣಸಿಗಲ್ಲ; ಶೀಘ್ರವೇ ಮ್ಯಾಪ್​ನಿಂದ ಕಣ್ಮರೆಯಾಗಲಿದೆ! ಕಾರಣ ಏನು ಗೊತ್ತಾ?

Tunisia Sandy Beach: ದೇಶದಲ್ಲಿ ಹಲವಾರು ಬೀಚ್ ಗಳಿವೆ. ಅದೆಷ್ಟೋ ಜನರಿಗೆ ಬೀಚ್​ಗಳಲ್ಲಿ ಕಾಲಹರಣ ಮಾಡುವ ಬಯಕೆ. ಪ್ರವಾಸಿಗರು ಅಲ್ಲಿನ ಸ್ಥಳದ ಸೊಬಗನನ್ನು ಸವಿಯಲು ತೆರಳುತ್ತಾರೆ. ಆದರೆ ಇನ್ನುಮುಂದೆ ಕೆಲವೊಂದು ಬೀಚ್ ಗಳು ಕಣ್ಮರೆಯಾಗಲಿದೆ. ಹೌದು,  ಶೀಘ್ರದಲ್ಲೇ ಮ್ಯಾಪ್​ನಿಂದ ಬೀಚ್ ಗಳು (Beaches) ಮಾಯವಾಗಲಿದೆ. ಯಾಕೆ? ಯಾವ ಬೀಚ್? ಮಾಹಿತಿ ಇಲ್ಲಿದೆ.

ಸದ್ಯ ಹವಾಮಾನದ (Weather) ಬದಲಾವಣೆ  ಹೆಚ್ಚಾಗಿದೆ. ವಿಪರೀತ ಬಿಸಿಲು, ದಿಢೀರ್ ಮಳೆ (rain) ಎಲ್ಲಾ ಆರಂಭವಾಗಿದೆ. ಹಾಗೆಯೇ ಕೆಲವೊಮ್ಮೆ ಪ್ರವಾಹಗಳು ಉಕ್ಕಿ ಹರಿಯುತ್ತದೆ. ಇದರ ಪರಿಣಾಮ ಭೂ, ಅರಣ್ಯ, ಕಡಲತೀರಗಳ ಮೇಲೆ ಬೀಳುತ್ತದೆ.

ಇತ್ತೀಚೆಗೆ ಉತ್ತರ ಆಫ್ರಿಕಾದ ದೇಶವಾದ ಟ್ಯುನೀಷಿಯಾದ (Tunisia Sandy Beach) ಮರಳಿನ ಕಡಲತೀರ ಕಣ್ಮರೆಯಾಗಿ ಬಂಡೆಗಳು ಕಾಣಿಸಿಕೊಳ್ಳಲಾರಂಭಿಸಿವೆ. ಕಡಲತೀರಗಳಲ್ಲಿ ಅತಿಯಾದ ನಿರ್ಮಾಣ ಕಾರ್ಯಗಳು, ಸಮುದ್ರ ಮಟ್ಟ ಏರಿಕೆ, ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾದ ಹಲವಾರು ಅಣೆಕಟ್ಟುಗಳಿಂದ (dam) ಸಮುದ್ರಕ್ಕೆ ಮರಳು ಹರಿವು ಕಡಿಮೆಯಾಗುವುದರಿಂದ ಈ ಅಪಾಯ ಸಂಭವಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅಲ್ಲದೆ, ಸಮುದ್ರದ ಕಡೆಗೆ ಬರುವ ನೀರಿನ ಜೊತೆಗೆ ಬರುವ ಮರಳನ್ನು ಅಣೆಕಟ್ಟುಗಳು ತಡೆಯುವುದರಿಂದ ಕಡಲತೀರದಲ್ಲಿ ಬಂಡೆಗಳು ಕಾಣಿಸಿಕೊಳ್ಳಲಾರಂಭಿಸಿವೆ.

ಕಳೆದ ವರ್ಷ 2020 ರಲ್ಲಿ, ಮರಳಿನ ಸವೆತದ ಬಗ್ಗೆ ವಿಜ್ಞಾನಿಗಳು  ಸಂಶೋಧನಾ ಫಲಿತಾಂಶಗಳನ್ನು ಪ್ರಕಟಿಸಿದ್ದು, ಪ್ರಪಂಚದ 50% ಕ್ಕಿಂತ ಹೆಚ್ಚು ಮರಳಿನ ಕಡಲತೀರಗಳು ಈ ಶತಮಾನದ ಅಂತ್ಯದ ವೇಳೆಗೆ ನಾಶವಾಗುತ್ತವೆ ಎಂದು ಹೇಳಲಾಗಿದೆ.

ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಕರಾವಳಿ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಸದ್ಯ ಈ ಬದಲಾವಣೆಯಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಕರಾವಳಿಯಲ್ಲಿನ ಸುಮಾರು 60% ಮರಳಿನ ಹೊದಿಕೆಯು ಸವೆತಕ್ಕೆ ಗುರಿಯಾಗುತ್ತದೆ ಎಂದೆನ್ನಲಾಗಿದೆ. ಹಿಂದೂ ಮಹಾಸಾಗರ ಕೂಡ ಸುಮಾರು 100-200 ಮೀಟರ್‌ಗಳಷ್ಟು ಕಡಿಮೆಯಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : NMPT Recruitment 2023: ಮಂಗಳೂರಿನಲ್ಲಿ ಉದ್ಯೋಗವಕಾಶ!!

Leave A Reply

Your email address will not be published.