Richest Hindu: ಈತ ಶ್ರೀಮಂತ ಹಿಂದೂ ಪಾಕಿಸ್ತಾನದಲ್ಲಿ ! ಆಸ್ತಿ ಲೆಕ್ಕ ಕೇಳಿದರೆ ನಿಜಕ್ಕೂ ಬೆರಗಾಗ್ತೀರ!!

Richest Hindu : ಅತ್ಯಂತ ಬಡವ (Poor Man) ಮತ್ತು ಶ್ರೀಮಂತ ನನ್ನು (Richest Man) ಎಲ್ಲರೂ ಬೇಗ ಗುರುತಿಸುತ್ತಾರೆ. ಯಾಕೆಂದರೆ ಅವರಿಬ್ಬರ ಸ್ಥಿತಿ ಗತಿ ಪರಸ್ಪರ ವಿರುದ್ಧವಾಗಿರುತ್ತದೆ. ಹಾಗೆಯೇ ಆ ಶ್ರೀಮಂತ ವ್ಯಕ್ತಿ ನಮ್ಮ ಭಾರತ (India) ದೇಶದವನಾಗಿದ್ದೂ (Nation), ಬೇರೆ ದೇಶದಲ್ಲಿ ನೆಲೆಸಿದ್ದಾರೆಂದರೆ ಅವರ ವಿವರಗಳನ್ನು ಬಹಿರಂಗ ಪಡಿಸದೇ ಇರಲು ಸಾಧ್ಯವೇ . ಹಾಗೆಯೇ ಇಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ಪಾಕ್ ನಲ್ಲಿ ವಾಸಿಸುತ್ತಿದ್ದೂ ಆತನ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ.

 

ಇನ್ನು ಪಾಕಿಸ್ತಾನವು ಪ್ರಸ್ತುತ ತುಂಬಾನೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಆ ದೇಶದಲ್ಲಿ ಇದೀಗ ಹಿಟ್ಟು, ಅಕ್ಕಿ, ಮೊಟ್ಟೆ ಮುಂತಾದ ಅಗತ್ಯ ಆಹಾರ ಪದಾರ್ಥಗಳ ಕೊರತೆ ಅಲ್ಲಿನ ಜನರಿಗೆ ತುಂಬಾನೇ ಕಾಡುತ್ತಿದೆ. ಹೀಗಿರುವಾಗ ಭಾರತೀಯ ಶ್ರೀಮಂತ ವ್ಯಕ್ತಿ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅದರಲ್ಲೂ ಈ ವ್ಯಕ್ತಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ (Richest Hindu) ವ್ಯಕ್ತಿ ಅಂತ ಹೇಳಲಾಗುತ್ತಿದೆ.

ಮುಖ್ಯವಾಗಿ ಪಾಕಿಸ್ತಾನದ ಹಿಂದೂಗಳನ್ನು ಪಾಕಿಸ್ತಾನದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಪರಿಗಣಿಸುವಲ್ಲಿ ಪಾಕಿಸ್ತಾನವು ವಿಶ್ವದಾದ್ಯಂತ ಕುಖ್ಯಾತವಾಗಿದೆ. ಹಾಗಿರುವಾಗ
ದೀಪಕ್ ಪೆರ್ವಾನಿ ಎಂಬಾತ ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ ಎಂದು ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಈ ವ್ಯಕ್ತಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಪರಿಗಣಿಸಲ್ಪಟ್ಟಿದ್ದಾರೆ.
ಅಷ್ಟಕ್ಕೂ ಈತನ ಹಿನ್ನೆಲೆ ಏನು ಅನ್ನೋದು ನಿಮಗೆ ಕಾತುರ ಇರಬಹುದು.

ದೀಪಕ್ ಪೆರ್ವಾನಿ ಎಂಬವನು ಪಾಕಿಸ್ತಾನದ ಮಿರ್‌ಪುರ್ ಖಾಸ್ ನಲ್ಲಿ 1973 ರಲ್ಲಿ ಜನಿಸಿದ ದೀಪಕ್ ಪೇರ್ವಾನಿ ಒಬ್ಬ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ನಟ ಆಗಿದ್ದಾನೆ. ದೀಪಕ್ ಪೇರ್ವಾನಿ ಪಾಕಿಸ್ತಾನದ ಹಿಂದೂ ಸಿಂಧಿ ಸಮುದಾಯಕ್ಕೆ ಸೇರಿದವರು. ಈತ ಪಾಕಿಸ್ತಾನದ ಫ್ಯಾಷನ್ ಉದ್ಯಮದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2022 ರಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರ ವಾರ್ಷಿಕ ನಿವ್ವಳ ಮೌಲ್ಯವು ಸುಮಾರು 71 ಕೋಟಿ ರೂಪಾಯಿ ಆಗಿದೆ .

ಸದ್ಯ ದೀಪಕ್ ಪ್ರಸಿದ್ಧ ಫ್ಯಾಷನ್ ಡಿಸೈನರ್ ಆಗುವುದರೊಂದಿಗೆ ಚಿತ್ರ ನಟ ಸಹ ಆಗಿದ್ದಾರೆ . ದೀಪಕ್ ಅವರು ಜನಪ್ರಿಯ ಪಾಕಿಸ್ತಾನಿ ಹಮ್ ಟಿವಿಯಲ್ಲಿ ಪ್ರಸಾರವಾದ ಧಾರಾವಾಹಿಗಳಾದ ಮೇರೆ ಪಾಸ್ ಪಾಸ್ ಮತ್ತು ಕಡೂರತ್ (2013) ನಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೆ 2017 ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಕಾಮಿಡಿ ‘ಪಂಜಾಬ್ ನಹೀ ಜಾಹುಂಗಿ ಚಿತ್ರದಲ್ಲೂ ದೀಪಕ್ ಅವರು ನಟಿಸಿದ್ದಾರೆ.

ಅದಲ್ಲದೆ ದೀಪಕ್ ಪೆರ್ವಾನಿ ಸೋದರ ಸಂಬಂಧಿ ನವೀನ್ ಪೆರ್ವಾನಿ ಪಾಕಿಸ್ತಾನದ ಸ್ನೂಕರ್ ಆಟಗಾರ. 2006ರಲ್ಲಿ ಕತಾರ್ ನ ದೋಹಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ನವೀನ್ ಪಾಕಿಸ್ತಾನ ರಾಷ್ಟ್ರವನ್ನು ಪ್ರತಿನಿಧಿಸಿದ್ದರು. ನವೀನ್ ಅವರು ದೀಪಕ್ ಅವರ ಸೋದರ ಸಂಬಂಧಿ ಆಗಿದ್ದಾರೆ.

ಏನೇ ಆಗಲಿ, ಪಾಕಿಸ್ತಾನದ ಹಿಂದೂಗಳನ್ನು ಪಾಕಿಸ್ತಾನದಲ್ಲಿ ಎರಡನೇ ದರ್ಜೆಯ ನಾಗರಿಕರಾಗಿ ಪರಿಗಣಿಸುವಲ್ಲಿ ಪಾಕಿಸ್ತಾನವು ವಿಶ್ವದಾದ್ಯಂತ ಕುಖ್ಯಾತವಾಗಿದೆ. ಅದಲ್ಲದೆ ಹಿಂದೂ ಗಳನ್ನು ಕೀಳಾಗಿ ಕಾಣುವ ಈ ದೇಶದಲ್ಲಿ ಕೆಲವು ಹಿಂದೂಗಳು ತಮ್ಮ ಗುರುತನ್ನು ಶಿಖರಕ್ಕೆ ಏರಿಸಿರುವುದು ಹೆಮ್ಮೆಯ ವಿಷಯವಾಗಿದೆ.

ಇದನ್ನೂ ಓದಿ : ಹೋಂಡಾ ಕಂಪನಿಯಿಂದ ಬಿಗ್‌ ಅಪ್ಡೇಟ್‌!

Leave A Reply

Your email address will not be published.