Maruti suzuki : ಅತ್ಯುತ್ತಮ ಮೈಲೇಜ್ ನೀಡುವ ಮಾರುತಿ ಸುಜುಕಿ ಬ್ರೆಝಾ CNG ಬಿಡುಗಡೆ ; ವೈಶಿಷ್ಟ್ಯತೆ ಹೇಗಿದೆ?

Maruti suzuki brezza: ಜನಪ್ರಿಯ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ (Maruti suzuki brezza ) ಈಗಾಗಲೇ ಹಲವು ಹೊಚ್ಚ ಹೊಸ ಕಾರುಗಳನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಉತ್ತಮ ವೈಶಿಷ್ಟ್ಯದ ಅತ್ಯುತ್ತಮ ಕಾರುಗಳನ್ನು ಪರಿಚಯಿಸುವ ಮೂಲಕ ಹೆಗ್ಗಳಿಕೆ ಪಾತ್ರವಾಗಿದೆ. ಇದೀಗ ಕಂಪನಿ ಅತ್ಯುತ್ತಮ ಮೈಲೇಜ್ ನೀಡುವ 2023ರ ಬ್ರೆಝಾ CNG ಎಸ್‍ಯುವಿ ಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.

ಬ್ರೆಝಾ CNG ಯ ಪ್ರಾರಂಭಿಕ ಎಕ್ಸ್ ಶೋರೂಂ ಬೆಲೆ ರೂ.9.14 ಲಕ್ಷ ಆಗಿದ್ದು, ಹೊಸ ಮಾರುತಿ ಸುಜುಕಿ ಬ್ರೆಝಾ CNG ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಲಾಗಿದೆ. ಖರೀದಿಗೆ ಗ್ರಾಹಕರು ರೂ.25,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಬಹುದು. ಬ್ರೆಝಾ CNG 3 ಟ್ರಿಮ್ ಹಂತಗಳಲ್ಲಿ ಲಭ್ಯವಿದ್ದು, ಇದರ ಮಿಡ್-ಸ್ಪೆಕ್ VXI ರೂಪಾಂತರ ಎಕ್ಸ್ ಶೋರೂಂ ಬೆಲೆಯು ರೂ,10.49 ಲಕ್ಷಗಳಾಗಿದೆ. ಹಾಗೆಯೇ ಟಾಪ್-ಸ್ಪೆಕ್ ZXI ರೂಪಾಂತರದ ಎಕ್ಸ್ ಶೋರೂಂ ಬೆಲೆ ರೂ,11.89 ಲಕ್ಷ ಆಗಿದೆ.

2023ರ ಮಾರುತಿ ಸುಜುಕಿ ಬ್ರೆಝಾ CNG ಎಸ್ಯುವಿ (2023 maruti suzuki brezza cng) ಪ್ರಸ್ತುತ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದ್ದು, ಇದು 1.5-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ VVT, ನ್ಯಾಚುರಲ್ ಆಸ್ಪೈರರ್ಡ್ ಪೆಟ್ರೋಲ್ ಎಂಜಿನ್ ಅನ್ನು ನೀಡುತ್ತದೆ. ಪೆಟ್ರೋಲ್ ಮೋಡ್‌ನಲ್ಲಿ 99.2 ಬಿಹೆಚ್‍ಪಿ ಪವರ್ ಮತ್ತು 136 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ಮೋಡ್‌ನಲ್ಲಿ 86.63 ಬಿಹೆಚ್‍ಪಿ ಪವರ್ ಮತ್ತು 86.63 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಬ್ರೆಝಾ CNG 25.51 ಕಿ.ಮೀ ಮೈಲೇಜ್ ನೀಡುತ್ತದೆ.

ಈ ಕಾರಿನಲ್ಲಿ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ 9.0-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್, ಹೆಡ್-ಅಪ್ ಡಿಸ್ಪ್ಲೇ (HUD), ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್, ಕನೆಕ್ಟಿವಿಟಿ ಟೆಕ್, ಅಲೆಕ್ಸಾ ನಂತಹ ಕನೆಕ್ಟಿವಿಟಿ ಸೇರಿದಂತೆ ಹಲವು ಅತ್ಯುತ್ತಮ ಫೀಚರ್ಸ್ ಗಳು ಇವೆ.

ಸುರಕ್ಷತಾ ದೃಷ್ಟಿಯಿಂದ ಈ ಎಸ್ ಯುವಿ 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ), 360-ಡಿಗ್ರಿ ಸರೌಂಡ್-ವ್ಯೂ ಕ್ಯಾಮೆರಾ, ಹಿಲ್-ಹೋಲ್ಡ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌ ಸೇರಿದಂತೆ ಹಲವು ವೈಶಿಷ್ಟ್ಯಗಳು ಒಳಗೊಂಡಿದೆ. ಸದ್ಯ ಈ ಕಾರು ಗ್ರಾಹಕರನ್ನು ತನ್ನತ್ತ ಸೆಳೆಯಲಿದೆ. ಹಾಗೇ ಮಾರುಕಟ್ಟೆಯಲ್ಲಿ ಭರ್ಜರಿ ಪೈಪೋಟಿ ನೀಡಲಿದೆ.

Leave A Reply

Your email address will not be published.