Kantara: ‘ಕಾಂತಾರ’ – ಗುಡ್​ ನ್ಯೂಸ್​ ನೀಡಿದ ‘ಹೊಂಬಾಳೆ’!

Kantara- Hombale Films: ಕಾಂತಾರ ( Kantara- Hombale Films) ಸಿನಿಮಾ ರಿಲೀಸ್ ಆಗಿ ಹಲವು ದಿನವಾದರೂ ಸಿನಿಮಾದ ಅಬ್ಬರ ಜೋರಾಗಿಯೇ ಇದೆ. ವಿಶ್ವಾದ್ಯಂತ ಸಂಚಲನ ಮೂಡಿಸಿ ಕರಾವಳಿಯ ಕಲೆಯನ್ನು ಬಿಂಬಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು. ಕನ್ನಡ ಸಿನಿಮಾರಂಗವನ್ನು (Kannada film industry) ಇಡೀ ಭಾರತೀಯ ಚಿತ್ರರಂಗವೇ (Indian film industry) ತಿರುಗಿ ನೋಡುವಂತೆ ಮಾಡಿದ ಗರಿಮೆ ಕಾಂತಾರದ್ದು ಎಂದರೆ ತಪ್ಪಾಗದು.

 

ಕಾಂತಾರ ಈ ವರ್ಷದ ದೊಡ್ಡ ಬ್ಲಾಕ್‌ಬಸ್ಟರ್‌ ಹಿಟ್ ಆದ ಸಿನಿಮಾ (blockbuster hit movie) ಗಳಲ್ಲಿ ಒಂದಾಗಿದ್ದು, ಕಾಂತಾರವು ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್‌ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ (kannada film). ಕಾಂತಾರ ಚಿತ್ರ ಅಕ್ಟೋಬರ್-15 ರಂದು ತಮಿಳು (Tamil) ಮತ್ತು ತೆಲುಗು (Telugu) ಭಾಷೆಯಲ್ಲಿ ರಿಲೀಸ್ ಆಗಿದ್ದು, ಡಿಸೆಂಬರ್-2 ರಂದು ತುಳು ಭಾಷೆಯಲ್ಲೂ (thulu language) ಕಾಂತಾರ ಬಿಡುಗಡೆಯಾಗಿತ್ತು. ಕಾಂತಾರ ಬಿಡುಗಡೆಯಾದ ಮೇಲೆ 400 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಾರ್ಪಟ್ಟಿದೆ.

ರಿಷಬ್ ಶೆಟ್ಟಿ (rishab shetty) ನಿರ್ದೇಶನ ಮತ್ತು ನಟನೆಯ ‘ಕಾಂತಾರ’ ಸಿನಿಮಾ ನೋಡಿ ಸ್ಟಾರ್ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಬಾಕ್ಸ್ ಆಫೀಸ್ ನಲ್ಲಿಯೂ ದೊಡ್ಡ ಮಟ್ಟದ ಕಮಾಯಿ ಮಾಡಿ ಹಿಟ್ ಸಿನಿಮಾಗಳ ಸಾಲಿನಲ್ಲಿ ಇತಿಹಾಸ ಸೃಷ್ಟಿಸಿದೆ. ಇಷ್ಟೇ ಅಲ್ಲದೆ ಈ ಸಿನಿಮಾದ ಯಶಸ್ಸು ರಿಷಬ್ ಶೆಟ್ಟಿಗೂ ನ್ಯಾಷನಲ್ ಸ್ಟಾರ್ ಪಟ್ಟ ತಂದು ಕೊಟ್ಟಿದ್ದಂತು ಸುಳ್ಳಲ್ಲ.

ಇದೀಗ ಕಾಂತಾರಗೆ (Kantara Movie) ವಿದೇಶಿ ಪ್ರೇಕ್ಷಕರಿಂದ ಬೇಡಿಕೆ ಬಂದಿದ್ದು, ಇಟಾಲಿಯನ್​ (Italian), ಸ್ಪ್ಯಾನಿಶ್​ (Spanish) ಭಾಷೆಯಲ್ಲೂ ರಿಲೀಸ್ ಆಗಲಿದೆ. ಈ ಭಾಷೆಗಳಿಗೆ ಡಬ್​ ಮಾಡಿ ತೆರೆಕಾಣಿಸಲು ಸಿದ್ಧತೆ ನಡೆದಿದೆ. ಈ ಸಂತಸದ ಸುದ್ದಿಯನ್ನು ‘ಹೊಂಬಾಳೆ ಫಿಲ್ಮ್ಸ್​’ (Hombale Films) ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಕನ್ನಡ ಭಾಷೆಯಲ್ಲಿ ರಿಲೀಸ್ ಆದ ಕಾಂತಾರ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಆನಂತರ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್​ (Hindi dubbing) ಮಾಡಿ ರಿಲೀಸ್​ ಮಾಡಲಾಯಿತು. ಎಲ್ಲ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಭರ್ಜರಿ ಕಲೆಕ್ಷನ್ ದೊರೆತಿದ್ದು, ಒಟಿಟಿ (ott) ಪ್ರೇಕ್ಷಕರಿಗಾಗಿ ಇಂಗ್ಲಿಷ್​ ವರ್ಷನ್​ ಕೂಡ ರಿಲೀಸ್​ ಆಯಿತು. ಈಗಲೂ ಈ ಸಿನಿಮಾದ ಹವಾ ಕಮ್ಮಿ ಆಗಿಲ್ಲ. ಇದೀಗ ಇಟಾಲಿಯನ್​ ಮತ್ತು ಸ್ಪ್ಯಾನಿಶ್​​ ಭಾಷೆಗಳಿಗೂ ಡಬ್​ ಆಗುತ್ತಿರುವುದು ಸಂತೋಷದ ವಿಚಾರ. ಈ ಬಗ್ಗೆ ‘ಹೊಂಬಾಳೆ ಫಿಲ್ಮ್ಸ್​’ ಟ್ವೀಟ್​ ಮಾಡಿದ್ದು, ನೆಟ್ಟಿಗರು ಜಪಾನಿ ಭಾಷೆಯಲ್ಲೂ ರಿಲೀಸ್​ ಮಾಡಿ ಎಂದು ಕಮೆಂಟ್​ ಮಾಡಿದ್ದಾರೆ.

Leave A Reply

Your email address will not be published.