Free Medical College: MBBS ಕನಸು ಕಂಡ ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿ! ಕರ್ನಾಟಕದ ಈ ಮೆಡಿಕಲ್ ಕಾಲೇಜಿನಲ್ಲಿ ನೀವು ಫ್ರೀ ಆಗಿ MBBS ಮಾಡಬಹುದು!

Free Medical College : ವೈದ್ಯಕೀಯ ಶಿಕ್ಷಣ (MBBS) ಪಡೆಯಬೇಕೆಬುಂದು ಅದೆಷ್ಟೋ ವಿದ್ಯಾರ್ಥಿಗಳ ಕನಸು. ಆದರೆ ಇಂದು ಶೈಕ್ಷಣಿಕ ಕ್ಷೇತ್ರವೂ ತುಂಬಾನೇ ದುಬಾರಿಯಾಗಿರುವ ಕಾರಣ, ಲಕ್ಷ ಗಟ್ಟಲೆ, ಕೋಟಿ ಗಟ್ಟಲೆ ಫೀಸು ತುಂಬಬೇಕಾದ ಕಾರಣ ಈ ವೈದ್ಯಕೀಯ ಶಿಕ್ಷಣದ ಕನಸು ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ನನಸಾಗದೇ ಕೊನೇವರೆಗೂ ಕನಸಾಗಿಯೇ ಉಳಿಯುತ್ತದೆ. ಇಲ್ಲ ಬಾಲ್ಯದಲ್ಲಿಯೇ ಈ ಆಸೆ ಕಮರಿಹೋಗುತ್ತದೆ. ಆದರೆ ಸದ್ಯ MBBS ಮಾಡಬೇಕೆಂದು ಕನಸು ಹೊತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೊಂದು ಸಂತಸದ ವಿಚಾರವೊಂದಿದೆ. ಕರ್ನಾಟಕದ ಈ ಮೆಡಿಕಲ್ ಕಾಲೇಜ್​ನಲ್ಲಿ MBBS ಫ್ರೀ (Free Medical College) ಆಗಿ ಓದಬಹುದು!

 

ಹೌದು, ಈ ಮೆಡಿಕಲ್ ಕಾಲೇಜಿನಲ್ಲಿ ನೀವು ಒಂದು ರೂಪಾಯಿ ಫೀಸ್ ಕಟ್ಟದೆ MBBS ಓದಬಹುದು. ಇದರ ಮೂಲಕ ನಿಮ್ಮ ಕನಸನ್ನು ನನಸಾಗಿಸಬಹುದು. ಮೆಡಿಕಲ್ ಓದಲು ಲಕ್ಷ ಅಲ್ಲ, ಕೋಟಿ ಕೋಟಿ ಸುರಿಬೇಕಾದ ಈ ಕಾಲದಲ್ಲಿ ಇದ್ಯಾವುದಪ್ಪ ಫ್ರೀಯಾಗಿ MBBS ಓದಿಸೋ ಕಾಲೇಜು ಅಂತ ಯೋಚಿಸ್ತಿದ್ದೀರಾ? ಅದುವೇ ಚಿಕ್ಕಬಳ್ಳಾಪುರ(Chikkaballapur) ದಲ್ಲಿರುವ ಸದ್ಗುರು ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ.

ಈ ನೂತನ ವೈದ್ಯಕೀಯ ಮಹಾವಿದ್ಯಾಲಯವನ್ನು ಇದೇ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಉದ್ಘಾಟಸಲಿದ್ದಾರೆ. ಇಲ್ಲಿ ಗ್ರಾಮೀಣ ಸೇವೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ಉಚಿತ ವೈದ್ಯಕೀಯ ಶಿಕ್ಷಣವನ್ನು ನೀಡುತ್ತದೆ. ಎಂಬಿಬಿಎಸ್ ಜೊತೆಗೆ ವೈದ್ಯಕೀಯ ಪಿಜಿ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್‌ಗಳೂ ಇರುತ್ತವೆ. ಇದರೊಂದಿಗೆ ಸ್ಥಳೀಯ ಗ್ರಾಮಸ್ಥರಿಗೆ ಉಚಿತ ಚಿಕಿತ್ಸೆಯನ್ನೂ ನೀಡಲಾಗುವುದು.

ಅಂದಹಾಗೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ(Muddenahalli) ಸತ್ಯಸಾಯಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಈ ವೈದ್ಯಕೀಯ ಕಾಲೇಜು ಉಚಿತ ವೈದ್ಯಕೀಯ ಶಿಕ್ಷಣವನ್ನು ನೀಡುತ್ತಿರುವ ದೇಶದ ಮೊದಲ ಸಂಸ್ಥೆ ಎಂಬ ಹಿರಿಮೆಗೂ ಪಾತ್ರವಾಗಿದೆ. ಇದು ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. 350 ಹಾಸಿಗೆಗಳಿರುವ ಸತ್ಯಸಾಯಿ ಸರಳಾ ಸ್ಮಾರಕ ಬೋಧನಾ ಆಸ್ಪತ್ರೆಯೂ ಸಂಸ್ಥೆಯ ಭಾಗವಾಗಿದೆ. ಈ ಯೋಜನೆಯು ಹಿಂದುಳಿದ ಗ್ರಾಮಗಳಿಗೆ ಉತ್ತಮ ಚಿಕಿತ್ಸೆ ಪಡೆಯಲು ಸಹಾಯ ಮಾಡುತ್ತದೆ ಎಂದು ಸತ್ಯಸಾಯಿ ಗ್ರಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಶೈಕ್ಷಣಿಕ ವೆಚ್ಚ ದುಬಾರಿಯಾಗಿರುವ ಈ ಸಂದರ್ಭದಲ್ಲಿ ಎಷ್ಟೋ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಒಂದು ಕನಸಿನ ಮಾತಾಗಿರುತ್ತಿತ್ತು. ಆದರೆ ಈಗ ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಖಾಸಗಿ ಭಾಗವಹಿಸುವಿಕೆಗಾಗಿ ಪ್ರಧಾನಿಯವರ ಕರೆಕೊಟ್ಟಿದ್ದು, ಇದರಿಂದ ಸ್ಫೂರ್ತಿ ಪಡೆದ ಸಂಸ್ಥೆ ಈ ಮಹಾನ್ ಕಾರ್ಯಕ್ಕೆ ಮುಂದಾಗಿದೆ. ಸಂಸ್ಥೆಯ ಈ ಮಹಾನ್ ಕಾರ್ಯಕ್ಕೆಎಲ್ಲೆಡೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ :  Junior NTR: ನೀವು ಪದೇ ಪದೇ ಅದನ್ನೇ ಕೇಳ್ತಿದ್ರೆ ನಾನು ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ: ಜೂ. ಎನ್‌ಟಿಆರ್!

Leave A Reply

Your email address will not be published.