Abhishek – Aishwarya : ಅಭಿಷೇಕ್ – ಐಶ್ವರ್ಯ ಮೊದಲ ರಾತ್ರಿ ಮಂಚ ಮುರಿದಿತ್ತಂತೆ.!

Abhishek – Aishwarya Rai: ಬಾಲಿವುಡ್‌ನ ಸ್ಟಾರ್‌ ಕಪಲ್‌ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ (Abhishek – Aishwarya Rai) ಅಭಿಮಾನಿಗಳು ಎಲ್ಲೆಡೆ ಇದ್ದಾರೆ. ಈ ಜೋಡಿಗಳು ಎಲ್ಲರಿಗೂ ಅಚ್ಚು ಮೆಚ್ಚು.

 

15ವರ್ಷಗಳ ಹಿಂದೆ, ಅಂದರೆ 2007 ರಲ್ಲಿ ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಮದುವೆಯಾಗಿ ಸುಮಾರು ವರ್ಷ ಕಳೆದರೂ ಇವರಿಬ್ಬರ ಸಂಬಂಧ ಎಲ್ಲರಿಗೂ ಮಾದರಿ ಆಗಿದೆ. ಸದ್ಯ ಪೋಷಕರಾದ ನಂತರವೂ, ಈ ದಂಪತಿಗಳು ಯಾವಾಗಲೂ ಪರಸ್ಪರ ಸಮಾನ ಪ್ರಾಮುಖ್ಯತೆಯನ್ನು ನೀಡುತ್ತಾರೆ ಮತ್ತು ಆದ್ದರಿಂದ ಅವರನ್ನು ‘ಪವರ್ ಜೋಡಿ’ ಗೌರವಯುತವಾಗಿ ಕರೆಯಲಾಗುತ್ತದೆ.

ಸದ್ಯ ಬಿ-ಟೌನ್‌ನ ಅತ್ಯಂತ ಸುಂದರ ಜೋಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು, ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿತ್ತು. ಐಶ್ವರ್ಯಾ ರೈ ಬಚ್ಚನ್ ಆಗಾಗ್ಗೆ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ಅಂತೆಯೇ ಐಶ್ವರ್ಯಾ ರೈ 2008 ರಲ್ಲಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಸಂದರ್ಶನ ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಹನಿಮೂನ್‌ನಲ್ಲಿ ಆದ ಘಟನೆಯೊಂದನ್ನು ಹೇಳಿದ್ದಾರೆ.

ಹನಿಮೂನ್‌ನಲ್ಲಿ ಐಶ್ವರ್ಯಾ ರೈಯನ್ನು ನಗಿಸಲು ಅಭಿಷೇಕ್ ಬಚ್ಚನ್ ಮಂಚದ ಎಲ್ಲಾ ಸ್ಕ್ರೂಗಳನ್ನು ಸಡಿಲಗೊಳಿಸಿದ್ದರು ಮತ್ತು ಸ್ವಲ್ಪ ಸಮಯದ ನಂತರ ಐಶ್ವರ್ಯಾ ಆ ಮಂಚದ ಮೇಲೆ ಕುಳಿತರು. ಆದರೆ ಸ್ಕ್ರೂಗಳು ಸಡಿಲಗೊಂಡ ಕಾರಣ, ಅವರು ಮಂಚದಿಂದ ಬಿದ್ದರು. ಹನಿಮೂನ್‌ ವೇಳೆ ನಡೆದ ಈ ಘಟನೆಯನ್ನು ಸಂದರ್ಶನದಲ್ಲಿ ಹೇಳಿದ್ದರು. ಅಭಿಷೇಕ್‌ನ ಚೇಷ್ಟೆಯಿಂದಾಗಿ, ಐಶ್ವರ್ಯಾ ರೈ ದಿನ ಕೋಪಗೊಂಡಿದ್ದರಂತೆ.

ಐಶ್ವರ್ಯಾ ರೈ ಬಗ್ಗೆ ಹೇಳಬೇಕೆಂದರೆ ಅವರು 1 ನವೆಂಬರ್ 1973 ರಂದು ಭಾರತದ ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು. ಐಶ್ವರ್ಯಾ ಅವರ ತಂದೆಯ ಹೆಸರು ಕೃಷ್ಣರಾಜ್ ರೈ ಅವರು ವೃತ್ತಿಯಲ್ಲಿ ಮೆರೈನ್ ಇಂಜಿನಿಯರ್ ಆಗಿದ್ದಾರೆ ಮತ್ತು ತಾಯಿಯ ಹೆಸರು ವೃಂದಾ ರೈ ಅವರು ಬರಹಗಾರ್ತಿ ಆಗಿದ್ದರು. ಇನ್ನು ಐಶ್ವರ್ಯಾ ರೈ ಬಚ್ಚನ್ 1994 ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದ ಮಹಿಳೆ. ಇವರು 1999 ರಲ್ಲಿ “ಪ್ಯಾರ್ ಹೋ ಗಯಾ” ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಐಶ್ವರ್ಯಾ ರೈ ಅವರ ಮಾತೃಭಾಷೆ ತುಳು, ಜೊತೆಗೆ ಅವರಿಗೆ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಮತ್ತು ತಮಿಳು ಭಾಷೆಗಳಲ್ಲಿ ಪರಿಣತಿ ಹೊಂದಿದ್ದಾರೆ.

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಗ್ಗೆ ಹೇಳಲು ಸುಮಾರು ವಿಷಯಗಳಿವೆ. ಒಟ್ಟಿನಲ್ಲಿ ಆಗಾಗ್ಗೆ ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಅದಲ್ಲದೆ ಇವರು ಅಭಿಮಾನಿಗಳನ್ನು ಮನರಂಜಿಸುತ್ತಾರೆ. ಇನ್ನು ಈ ಸಂದರ್ಶನ ವಿಚಾರ ನೋಡಿ ಅಭಿಮಾನಿಗಳ ಹಲವಾರು ಕಾಮೆಂಟ್ ಗಳ ಮಹಾ ಪೂರವೇ ಹರಿದಿದೆ.

ಇದನ್ನೂ ಓದಿ : Marriage : ಮದುವೆ ಮುಗಿಸಿ ಅತ್ತೆ ಮನೆಗೆ ಹೋಗಲು ನಿರಾಕರಿಸಿದ ವಧು!!

Leave A Reply

Your email address will not be published.