Post office scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ನೀವು ಪಡೆಯಬಹುದು 50 ಲಕ್ಷ ರೂಪಾಯಿ ; ಸಂಪೂರ್ಣ ಮಾಹಿತಿ ಇಲ್ಲಿದೆ.

post office scheme: ಸರ್ಕಾರದ ಹಲವು ಯೋಜನೆಗಳಲ್ಲಿ ಅಂಚೆ ಕಚೇರಿಯ ಯೋಜನೆಯು (post office scheme) ಒಂದು. ಈ ಯೋಜನೆ ಜನರ ಹಿತದೃಷ್ಟಿಗಾಗಿ ಸರ್ಕಾರ (government) ನಡೆಸುವ ದೊಡ್ಡಮಟ್ಟದ ಉಳಿತಾಯ ಯೋಜನೆ (Post Office saving schemes) ಎಂದೇ ಹೇಳಬಹುದು. ಇದು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ (Finance) ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ (Savings) ನೆರವಾಗುತ್ತದೆ.

 

ಅಂಚೆ ಕಚೇರಿಯು ಇತರ ಸಂಸ್ಥೆಗಳಂತೆ ಹಲವಾರು ಯೋಜನೆಗಳನ್ನು ಹೊಂದಿದೆ. ಅಂಚೆ ಕಚೇರಿಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನೂ ಪಡೆಯಬಹುದು. ಅಂಚೆ ಕಚೇರಿ ಯೋಜನೆಗಳಲ್ಲಿ ಸಿಗುವ ಬಡ್ಡಿಯ (intrest) ಪ್ರಮಾಣವು ಜನರು ಅವುಗಳಲ್ಲಿ ಹೂಡಿಕೆ ಮಾಡಲು ಆದ್ಯತೆ ನೀಡುತ್ತದೆ. ಹಾಗೇ ಇದರಲ್ಲಿ ನಿಮ್ಮ ಹೂಡಿಕೆಯೂ ಸುರಕ್ಷಿತವಾಗಿರುತ್ತದೆ.

ಪೋಸ್ಟ್ ಆಫೀಸ್ ನ ಯಾವುದೇ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ಜನರು ಹಣವನ್ನು (money) ಉಳಿತಾಯ ಮಾಡಬಹುದು ಹಾಗೂ ಒಂದಕ್ಕಿಂತ ಹೆಚ್ಚು ಖಾತೆಯನ್ನು ತೆರೆಯಬಹುದು. ಉಳಿತಾಯ ಖಾತೆಯಲ್ಲಿ ಹಣವನ್ನು ಕಳೆದುಕೊಳ್ಳುವ ಯಾವುದೇ ಭಯ ಭೀತಿ ಇರುವುದಿಲ್ಲ.

ಇದೀಗ ಅಂಚೆ ಕಚೇರಿಯ ಗ್ರಾಹಕರಿಗೆ ಭರ್ಜರಿ ಸುದ್ದಿ ಸಿಕ್ಕಿದೆ. ಹೌದು, ಅಂಚೆ ಗ್ರಾಹಕರಿಗೆ ಸರ್ಕಾರದಿಂದ 50 ಲಕ್ಷ ರೂಪಾಯಿ ಹಣ ಲಭಿಸುತ್ತಿದೆ. ಇದರ ಲಾಭ ಪಡೆಯುವುದು ಹೇಗೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ಯೋಜನೆಯ‌ ಮೂಲಕ ನೀವು 50 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹಣವನ್ನು ದ್ವಿಗುಣಗೊಳಿಸಬಹುದಾಗಿದೆ. ಮತ್ತು ಇದು ಅತ್ಯಂತ ಹಳೆಯ ಸರ್ಕಾರಿ ವಿಮಾ ಯೋಜನೆಯಾಗಿದೆ.

ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಯೋಜನೆಯಲ್ಲಿ 19 ವರ್ಷದಿಂದ 55 ವರ್ಷದೊಳಗಿನವರು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ಪಾಲಿಸಿದಾರರು 50 ಲಕ್ಷದವರೆಗೆ ಸೌಲಭ್ಯವನ್ನು ಪಡೆಯುತ್ತಾರೆ. ಇದರಲ್ಲಿ ಬೋನಸ್ ಕೂಡ ಸಿಗುತ್ತದೆ. ಜೊತೆಗೆ ಕನಿಷ್ಠ ವಿಮಾ ಮೊತ್ತ 20,000 ಮತ್ತು ಗರಿಷ್ಠ 50 ಲಕ್ಷ ರೂ. ಸಿಗುತ್ತದೆ. ಅಲ್ಲದೆ, ಪಾಲಿಸಿದಾರನು ಯೋಜನೆಯ ಹೂಡಿಕೆಯ ಮಧ್ಯದಲ್ಲೇ ಸಾವನ್ನಪ್ಪಿದರೆ ಅಥವಾ ಪಾಲಿಸಿದಾರನ ಮರಣದ ನಂತರ ಆತನು ಹೂಡಿಕೆ ಮಾಡಿದ ಎಲ್ಲಾ ಹಣವನ್ನು ನಾಮಿನಿಗೆ ನೀಡಲಾಗುತ್ತದೆ.

ಈ ಯೋಜನೆಯಲ್ಲಿ ಪಾಲಿಸಿದಾರರು 4 ವರ್ಷಗಳ ಕಾಲ ನಿರಂತರವಾಗಿ ಪಾಲಿಸಿ ಇಟ್ಟುಕೊಂಡರೆ ಸಾಲ ಸೌಲಭ್ಯ ಕೂಡ ಸಿಗುತ್ತದೆ. ಒಂದು ವೇಳೆ ಪಾಲಿಸಿಯನ್ನು ನಿಲ್ಲಿಸಲು ಬಯಸಿದರೆ, 3 ವರ್ಷಗಳ ನಂತರ ಅದನ್ನು ನಿಲ್ಲಿಸಬಹುದು. ಆದರೆ ನೀವು 5 ವರ್ಷಗಳ ಮೊದಲು ಪಾಲಿಸಿ ನಿಲ್ಲಿಸಿದರೆ ಬೋನಸ್‌ನ ಪ್ರಯೋಜನ ಸಿಗುವುದಿಲ್ಲ. ಹಾಗೆಯೇ ಈ ಪಾಲಿಸಿಯ ಪ್ರಯೋಜನವು 80 ವರ್ಷಗಳ ವಯಸ್ಸಿನಲ್ಲಿ ಲಭ್ಯವಿರುತ್ತದೆ. ನೀವು 80 ವರ್ಷಗಳ ವಯಸ್ಸಿನಲ್ಲಿ ಮಾತ್ರ ವಿಮಾ ಮೊತ್ತದ ವಿಮೆಯ ಸೌಲಭ್ಯವನ್ನು ಪಡೆಯುತ್ತೀರಿ.

ಜೀವ ವಿಮೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಲಿಂಕ್ ಗೆ ಕ್ಲಿಕ್ ಮಾಡಿ https://pli.indiapost.gov.in ಈ ಮೂಲಕ ಜೀವ ವಿಮೆಗೆ ಅರ್ಜಿ ಸಲ್ಲಿಸಿ.

Leave A Reply

Your email address will not be published.