India Best Cruiser Bike: Royal Enfield ಬಿಟ್ಟರೆ ಇವು ಭಾರತದ ಅತ್ಯುತ್ತಮ ಕ್ರೂಸರ್ ಬೈಕ್‌ಗಳು; ಇಲ್ಲಿದೆ ಟಾಪ್-5 ಲಿಸ್ಟ್‌!

India Best Cruiser Bike : ಇಂದಿನ ಯುವ ಪೀಳಿಗೆ ಬೈಕ್‌ ವಿಷಯದಲ್ಲಿ ಬಹಳ ಕ್ರೇಜ್‌ ಹೊಂದಿದೆ ಎಂದು ಹೇಳಬಹುದು. ಅಂತವರಿಗೆ, ಭಾರತದಲ್ಲಿನ ಟಾಪ್ 5 ಅತ್ಯುತ್ತಮ ಕ್ರೂಸರ್ ಬೈಕ್‌ಗಳ ಕುರಿತು ನಾವು ಇಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತೇವೆ. ರಾಯಲ್ ಎನ್ ಫೀಲ್ಡ್ ಅಲ್ಲದೆ ಬಜಾಜ್ ಬೈಕ್ ಗಳೂ ಇದರಲ್ಲಿ ಸೇರಿವೆ. ನೀವು ಬೈಕು ಖರೀದಿಸಲು ಯೋಜಿಸುತ್ತಿದ್ದರೆ ಮತ್ತು ನಿಮಗೆ ಯಾವ ಬೈಕ್ ತೆಗೆದುಕೊಳ್ಳುವುದು, ಯಾವುದು ದಿ ಬೆಸ್ಟ್‌ ಎಂಬ ಗೊಂದಲದಲ್ಲಿದ್ದರೆ, ಇಲ್ಲಿ ನಾವು ನಿಮಗೆ ಬೆಸ್ಟ್ ಕ್ರೂಸರ್ ಬೈಕ್ (India Best Cruiser Bike) ಮಾದರಿಗಳ ಸಂಪೂರ್ಣ ವಿವರಗಳನ್ನು ಹೇಳುತ್ತಿದ್ದೇವೆ. ನಿಮಗೆ ಯಾವ ಬೈಕು ಉತ್ತಮವಾಗಿದೆ ಎಂಬುದನ್ನು ನೀವು ಸುಲಭವಾಗಿ ಆಯ್ಕೆ ಮಾಡಬಹುದು.

ಜಾವಾ ಪೆರಾಕ್ (Jawa Perak) : ಜಾವಾ ಪೆರಾಕ್ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, 343cc ಎಂಜಿನ್ ಹೊಂದಿದ್ದು, 30bhp ಮತ್ತು 31Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿದೆ. ಬೈಕಿನ ಬಣ್ಣವು ಗಾಢ ಮತ್ತು ಕ್ಲಾಸಿ ಆಗಿದೆ. ಇದರ ಬೈಕ್ ಬೆಲೆ 2,11,368 ರೂ. ಈ ಬೈಕಿನ ಬೆಲೆ 2,11,368 ರೂ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350(Royal Enfield Bullet 350) : ಬುಲೆಟ್ 350 ಭಾರತದ ಅತ್ಯುತ್ತಮ ಕ್ರೂಸರ್‌ಗಳಲ್ಲಿ ಒಂದಾಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 346cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನಿಂದ 19.8bhp ಮತ್ತು 28Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ ಇದರ ಬೆಲೆ 1,50,893 ರೂ.

ಜಾವಾ 42 (Jawa 42) : ಡ್ಯುಯಲ್-ಚಾನೆಲ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಸಜ್ಜುಗೊಂಡಿದೆ. ಇದು 294.72CC ಎಂಜಿನ್ ಹೊಂದಿದ್ದು 26.84 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ 1369 ಮಿಲಿಯನ್ ವ್ಹೀಲ್‌ಬೇಸ್‌ನೊಂದಿಗೆ ಬರುತ್ತದೆ. ಇದರ ಬೆಲೆಯ 1,74,573 ರೂ. ಆಗಿದೆ.

ಬಜಾಜ್ ಅವೆಂಜರ್ ಕ್ರೂಸ್ 220 ( Bajaj Avenger Cruise 220) : ಎತ್ತರದ ವಿಂಡ್‌ಶೀಲ್ಡ್ ಮತ್ತು ಕಡಿಮೆ-ಸ್ಲಂಗ್ ಸೀಟ್‌ನೊಂದಿಗೆ ಕ್ಲಾಸಿಕ್ ಕ್ರೂಸರ್ ಬಯಸುವವರಿಗೆ ಈ ಬೈಕ್ ಉತ್ತಮ. ಬೈಕ್ 220cc, ಸಿಂಗಲ್-ಸಿಲಿಂಡರ್ ಏರ್ ಮತ್ತು ಆಯಿಲ್-ಕೂಲ್ಡ್ DTS-i ಎಂಜಿನ್‌ನಿಂದ ಚಾಲಿತವಾಗಿದ್ದು ಅದು 19bhp ಮತ್ತು 17.5Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 53 kmpl ಮೈಲೇಜ್ ನೀಡುತ್ತದೆ. ಕ್ರೂಸರ್ ಬೈಕ್ ಸಿಂಗಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ. ಈ ಬೈಕಿನ 1,38,999 ರೂ.

ಜಾವಾ ಸ್ಟ್ಯಾಂಡರ್ಡ್ (Jawa standard:) : ಜಾವಾ ತನ್ನ ಎಂಜಿನ್ ಅನ್ನು ಮಹೀಂದ್ರ ಮೊಜೊದಿಂದ (Mahindra Mojo) ಪ್ರತಿರೂಪ ಎಂದೇ ಹೇಳಬಹುದು. ಆದರೂ ಅದನ್ನು ರೆಟ್ರೊ-ಶೈಲಿಯ ಕ್ರೂಸರ್‌ನಂತೆ ಕಾಣಲು ವಿಭಿನ್ನವಾಗಿ ಟ್ಯೂನ್ ಮಾಡಲಾಗಿದೆ. Jawa 300 ರೂಪಾಂತರವನ್ನು ಅವಲಂಬಿಸಿ ಡ್ಯುಯಲ್-ಚಾನೆಲ್ ಮತ್ತು ಸಿಂಗಲ್-ಚಾನೆಲ್ ABS ಅನ್ನು ಹೊಂದಿದೆ. 294.72 ಎಂಜಿನ್ ಇದೆ, ಇದರ ಗರಿಷ್ಠ ಶಕ್ತಿ 20.1kW ಆಗಿದ್ದು ಇದು 26.84Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇವು ಮೂರು ಬಣ್ಣ ಆಯ್ಕೆಗಳು ಲಭ್ಯವಿದೆ. ಕಪ್ಪು, ಮರೂನ್ ಮತ್ತು ಬೂದು ಬಣ್ಣವನ್ನು ಒಳಗೊಂಡಿರುವ ಇದರ ಬೆಲೆ 1,83,648 ರೂ.

ಇದನ್ನೂ ಓದಿ: TOP 5 Cheapest Bike : ಟಾಪ್‌ 5 ಅಗ್ಗದ ಬೆಲೆಬಾಳುವ ಗಾಡಿಗಳಿವು! ಸಾಮರ್ಥ್ಯ ಕಡಿಮೆ ಅಂದ್ಕೊಂಡಿದ್ದವರಿಗೆ ಟಕ್ಕರ್‌ ನೀಡಿದ ಗಾಡಿಗಳಿವು!

Leave A Reply

Your email address will not be published.