Flying Bike: ರಸ್ತೆಯ ಮೇಲಲ್ಲ, ಆಕಾಶದಲ್ಲಿ ಚಲಿಸುವ ಬೈಕ್ ಇದು; ವೈರಲ್ ಆಯ್ತು ಈ ವಿಡಿಯೋ
Flying Bike: ಬೈಕುಗಳು ಯಾವತ್ತೂ ಯುವಕರ ಮೊದಲ ಕ್ರೇಜ್ ! ಸ್ಪೋರ್ಟ್ ಬೈಕ್ ತಗೊಂಡು ರಸ್ತೆಯಲ್ಲಿ ಹಾರುವ ಸ್ಪೀಡಿನಲ್ಲಿ ಓಡಿಸಬೇಕು ಎನ್ನುವುದು ಎಲ್ಲ ಯುವಕರ ಬಯಕೆ. ಸ್ಪೀಡಿಂಗ್ ಬೈಕು, ಹಾಲಿವುಡ್ ನ ಕೆಲವು ಆಕ್ಷನ್ ಸಿನಿಮಾಗಳಲ್ಲಿ ಕಂಡಂತೆ ಹೀರೋ ಬೈಕ್ ನಲ್ಲಿ ಆಕಾಶದಲ್ಲಿ ಹಾರಾಡುವುದನ್ನು ನೀವು ನೋಡಿರಬಹುದು. ಇದೆಲ್ಲಾ ಕಾಲ್ಪನಿಕ, ಕೇವಲ ಫಿಕ್ಷನ್ ಸಿನಿಮಾಕ್ಕೆ ಮಾತ್ರ ಸೀಮಿತ ಎಂದು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಆಕಾಶದಲ್ಲಿ ಹಾರಾಡುವ ಬೈಕ್ ಈಗ ತಯಾರಾಗಿ ಬಿಟ್ಟಿದೆ. ಸದ್ಯ ಸ್ಟೈಲಿಶ್ ಬೈಕ್ ಒಂದು ಆಕಾಶದಲ್ಲಿ ಹಾರಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಜಪಾನಿನ ಕಂಪನಿಯೊಂದು ಈಗಾಗಲೇ ಭವಿಷ್ಯದ ಹಾರುವ ಬೈಕ್ ಅನ್ನು ತಯಾರಿಸಿಬಿಟ್ಟಿದ್ದು, ನಿಮ್ಮ ಕನಸಿನ ಈ ಹಾರುವ ಬೈಕ್ ಕನಸು ಈಗ ನನಸಾಗಿದೆ. ಜಪಾನಿನ ಸ್ಟಾರ್ಟ್ ಅಪ್ ಕಂಪನಿ AERWINS ಕಂಪನಿ ಈಗಾಗಲೇ ಫ್ಯೂಚುರೆಷ್ಟಿಕ್ ಪ್ಲೈಯಿಂಗ್ ಬೈಕ್ (Flying Bike) ತಯಾರಿಸಿದೆ. ಇದು ಸಾಮಾನ್ಯ ಬೈಕಲ್ಲ, ಹಾರುವ ಬೈಕು. ಎಕ್ಸ್ ತ್ರುಸಿಮೋ (XTURISMO) ಎನ್ನುವ ಈ ಬೈಕ್ ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಬೈಕ್ ಎನಿಸಿಕೊಂಡಿದೆ. ಈ ಹೋವರ್ ಬೈಕ್ ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಜಪಾನಿನಲ್ಲಿ ಮಾರಾಟಕ್ಕೆ ಇದೆ. ಸದ್ಯದಲ್ಲೇ ಜಪಾನದಿಂದ ಹೊರಗೆ, ಅಮೆರಿಕದಲ್ಲಿ ಈ ಬೈಕ್ ಗಳ ಮಾರಾಟ ಆರಂಭಿಸುವುದಾಗಿ ಕಂಪನಿಯ ಸಿಇಓ ತಿಳಿಸಿದ್ದಾರೆ.
XTURISMO ಬೈಕ್ ಹಾರಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವ್ಯಕ್ತಿ ಒಬ್ಬ ಬೈಕ್ ಮೇಲೆ ಕುಳಿತು ಆಕಾಶದಲ್ಲಿ ಸುತ್ತುತ್ತಿರುವ ದೃಶ್ಯ ನೋಡಬಹುದು. ಬೈಕ್ ಸವಾರ ಬೈಕ್ ಸ್ಟಾರ್ಟ್ ಮಾಡಿದ ಕೂಡಲೇ ಮೊದಲು ಗಾಳಿಯಲ್ಲಿ ಏರಿ ನಂತರ ಹಾರಲು ಆರಂಭಿಸುತ್ತದೆ ಬೈಕ್. ಉದ್ಯಮಿ ಕೋರ್ಟ್ ಎನ್ನುವ ಬಳಕೆದಾರರು ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. xturismo_official ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು ಈ ಬೈಕ್ ನಿಜವಾಗಿಯೂ ಕಾಲ್ಪನಿಕ ಅಲ್ಲ, ನಿಜಕ್ಕೂ ಇದು ಅಸ್ತಿತ್ವದಲ್ಲಿ ಎಂದು ಈಗ ದೃಢ ಆಗಿದೆ.
ಹಾರುವ ಬೈಕ್ ಏನೋ ಮಾರ್ಕೆಟ್ ಗೆ ಬಂತು, ಅದರ ಬೆಲೆ ಏನು ಅಂತ ನೀವ್ ಕೇಳಿದ್ರೆ ಅದಕ್ಕೂ ಉತ್ತರ ಉಂಟು. ಆದರೆ ಈ ಫ್ಲೈಯಿಂಗ್ ಬೈಕ್ ನ ಬೆಲೆ ಕೇಳಿದ್ರೆ ಬೈಕಿನ ಥರಾನೇ ನಿಮ್ಮ ತಲೆ ಕೂಡಾ ಆಕಾಶದಲ್ಲಿ ಗಿರಗಿರನೆ ತಿರುಗೋದು ಪಕ್ಕಾ. ಈ ಸೂಪರ್ ಬೈಕಿನ ಬೆಲೆ 7,77,000 ಅಮೇರಿಕನ್ ಡಾಲರ್ ಗಳು. ಅಂದರೆ ಇವತ್ತಿನ ಭಾರತೀಯ ಮೌಲ್ಯದಲ್ಲಿ 6.41 ಕೋಟಿ ರೂಪಾಯಿಗಳು.
ಈ ಬೈಕಿನ ಹಾರಾಟದ ವಿಡಿಯೋವನ್ನು ಎರಡು ವಾರಗಳ ಹಿಂದೆಯೇ ಶೇರ್ ಮಾಡಲಾಗಿತ್ತು. ಈ ಮಿಲಿಯನ್ ಗಟ್ಟಲೆ ಜನ ವೀಕ್ಷಿಸಿದ್ದಾರೆ. ಹಾರುವ ಬೈಕ್ ನ ಈ ವಿಡಿಯೋ ನೋಡಿದರೆ ಸಿನಿಮಾ ನೋಡಿದಂತೆ ಭಾಸವಾಗುತ್ತದೆ ಅಂತ ಕೆಲವರು ಕಮೆಂಟ್ ಮಾಡಿದ್ದರೆ, ಮತ್ತೆ ಕೆಲವರು, ಇದು ಮನುಷ್ಯ ಕುಳಿತುಕೊಳ್ಳಬಹುದಾದ ಡ್ರೋನ್ ಅಷ್ಟೇ. ಬೈಕ್ ಅಲ್ಲ ಎಂಬುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಹಾರಾಡುವ ಬೈಕ್ ಈಗ ಮಾರ್ಕೆಟ್ ನಲ್ಲಿ ಹವಾ ಎಬ್ಬಿಡುತ್ತಿದೆ. ಸದ್ಯ ಬಾರತದಲ್ಲಿಯೂ ಜನರಲ್ಲಿ ಕುತೂಹಲ ಮೂಡಿಸಿದ್ದು ಇದರ ಬಗ್ಗೆ ಇನ್ನಷ್ಟು ಅಪ್ಡೇಟ್ ಗಾಗಿ ಜನ ಕಾದಿದ್ದಾರೆ.
ಇದನ್ನೂ ಓದಿ: Blue Whale : 181ಕೆಜಿ ತೂಕದ ನೀಲಿ ತಿಮಿಂಗಿಲದ ಹೃದಯದ ಚಿತ್ರ ವೈರಲ್! ಅಬ್ಬಾ ಏನಿದು ವಿಚಿತ್ರ?