Assembly Election Congress Candidates: 125 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್​​​ ಮಾಡಿದ ಕಾಂಗ್ರೆಸ್! ಯಾರಿಗೆ ಟಿಕೆಟ್, ಯಾರಿಗೆ ಕೊಕ್? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!

Assembly Election Congress Candidates : ಸದ್ಯದಲ್ಲೇ ಎದುರಾಗುವ ಕರ್ನಾಟಕ ವಿಧಾನಸಭೆಯ ಚುನಾವಣೆಗೆ(Karnataka Assembly Election)ಈಗಾಗಲೇ ಬಿಜೆಪಿ ಸಂಭಾವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲೇ ಕಾಂಗ್ರೆಸ್ ಕೂಡ ಮೊದಲ ಹಂತದಲ್ಲಿ 125 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸಲು ಸಿದ್ಧಮಾಡಿಕೊಂಡಿದೆಯೆಂದು ಕೇಂದ್ರ ಚುನಾವಣಾ ಸಮಿತಿಯು ಶುಕ್ರವಾರ ಅಂತಿಮಗೊಳಿಸಿದೆ.

 

ಹೌದು, ನಿನ್ನೆ ದಿನ ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನೇತೃತ್ವದಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದಿದ್ದು, ಸಭೆಯಲ್ಲಿ ಅಭ್ಯರ್ಥಿಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ 71 ಹಾಲಿ ಶಾಸಕರಿಗೆ ಮತ್ತೆ ಟಿಕೆಟ್​ ನೀಡಲು ನಿರ್ಧರಿಸಲಾಗಿದೆ. ಮೊದಲ ಪಟ್ಟಿಯನ್ನು ಯುಗಾದಿ ಹಬ್ಬದ ನಂತರ ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ರಾಜ್ಯ ಘಟಕದ ನಾಯಕರ ಸಲಹೆ ಮೇರೆಗೆ ಇನ್ನು ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.

ಕರ್ನಾಟಕದಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಹಠಕ್ಕೆ ಕಾಂಗ್ರೆಸ್​​ ಬಿದ್ದಿದೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಪ್ರಚಾರದ ವೇಗವನ್ನು ಕಾಂಗ್ರೆಸ್​​ ನಾಯಕರು ಜೋರು ಮಾಡಿದ್ದು, ಆಡಳಿತರೂಧ ಬಿಜೆಪಿ ಸರ್ಕಾರದ ವಿರುದ್ಧ ನಿರಂತರವಾಗಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ಶಾಸಕರ ಜತೆ ಕಳೆದ ಬಾರಿ ಕಡಿಮೆ ಅಂತದಲ್ಲಿ ಸೋತವರಿಗೂ ಟಿಕೆಟ್​ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

ಪಟ್ಟಿ ಬಿಡುಗಡೆ ಬಗ್ಗೆ ಮಾತನಾಡಿದ ಹಿರಿಯ ಮುಖಂಡರೊಬ್ಬರು, ”ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಅವರು ಇದೇ 20ರಂದು ಬೆಳಗಾವಿಯಲ್ಲಿ ನಡೆಯುವ ‘ಯುವ ಕ್ರಾಂತಿ ರ‍್ಯಾಲಿ’ಗೆ ಬರಲಿದ್ದಾರೆ. ಆ ಬಳಿಕವೇ ಮೊದಲ ಪಟ್ಟಿ (Assembly Election Congress Candidates) ಪ್ರಕಟಿಸಬೇಕು ಎಂದು ಹಲವು ನಾಯಕರು ಸಲಹೆ ನೀಡಿದ್ದಾರೆ. ಇದಕ್ಕೆ ಹೈಕಮಾಂಡ್‌ ಕೂಡ ಬಹುತೇಕವಾಗಿ ಒಪ್ಪಿದೆ ಎಂದು ಹೇಳಿದರು.

ಹರಿಹರ (ಆರ್‌.ರಾಮಪ್ಪ), ಕುಂದಗೋಳ (ಕುಸುಮಾ ಶಿವಳ್ಳಿ) ಹಾಗೂ ಲಿಂಗಸುಗೂರು (ಡಿ.ಎಸ್‌.ಹೂಲಗೇರಿ) ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನು ಕಣಕ್ಕೆ ಇಳಿಸಿದರೆ ಗೆಲುವು ಕಷ್ಟ ಎಂದು ಪಕ್ಷದ ಆಂತರಿಕ ಸಮೀಕ್ಷೆಗಳು ತಿಳಿಸಿವೆ. ಹಾಗಾಗಿ ಈ ಕ್ಷೇತ್ರಗಳಲ್ಲಿ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರಲು ಹೈಕಮಾಂಡ್ ನಿರ್ಧರಿಸಿದೆ. ಪಾವಗಡ (ವೆಂಕಟರಮಣಯ್ಯ), ಅಫಜಲಪುರ (ಎಂ.ವೈ.ಪಾಟೀಲ) ಕ್ಷೇತ್ರದ ಶಾಸಕರು ತಮ್ಮ ಪುತ್ರರಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್‌ ಒಪ್ಪಿದೆ. ಪುಲಕೇಶಿನಗರ (ಅಖಂಡ ಶ್ರೀನಿವಾಸಮೂರ್ತಿ) ಕ್ಷೇತ್ರದ ಕುರಿತು ಹಿರಿಯ ನಾಯಕರು ಇನ್ನಷ್ಟು ಚರ್ಚೆ ನಡೆಸಿ ಮುಂದಿನ ಹೆಜ್ಜೆ ಇಡುವುದು ಉತ್ತಮ ಎಂಬ ನಿರ್ಧಾರಕ್ಕೆ ಬರಲಾಯಿತು.

ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರಿಗೆ ರಾಜಾಜಿನಗರ ಕ್ಷೇತ್ರದಿಂದ ಟಿಕೆಟ್ ನೀಡಲು ಕೆಲವು ನಾಯಕರಿಂದ ಒಲವು ವ್ಯಕ್ತಪಡಿಸಿದರು. ಆದರೆ ಅವರು ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಪಡೆದ ಬಳಿಕ ಅಂತಿಮಗೊಳಿಸುವುದು ಉತ್ತಮ ಎಂದು ಹಲವು ಮುಖಂಡರು ಸಲಹೆ ನೀಡಿದರು.

ಈ ಬಾರಿ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಅವರು ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಅವರು ಸೂಚಿಸುವ ಮುಖಂಡರಿಗೆ ಟಿಕೆಟ್‌ ನೀಡಲು ತೀರ್ಮಾನಿಸಲಾಯಿತು. ಜತೆಗೆ, ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ, ಎರಡು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರ್ಪಡೆಯಾದ ಮುಳಬಾಗಿಲಿನ ಶಾಸಕ ಎಚ್‌.ನಾಗೇಶ್‌ ಅವರನ್ನು ಮಹದೇವಪುರದಲ್ಲಿ, ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಅವರನ್ನು ಬಸವನಗುಡಿ ಕ್ಷೇತ್ರದಲ್ಲಿ ಟಿಕೆಟ್ ನೀಡಲು ನಿರ್ಧರಿಸದಲಾಯಿತು.

ಬಿಜೆಪಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸಲು ಮುಂದಾಗಿರುವ ಕಾರಣ, ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವ ಸೂಚನೆಯನ್ನು ಹೈಕಮಾಂಡ್​ ರಾಜ್ಯ ನಾಯಕರಿಗೆ ನೀಡಿದೆ.

ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದ ಮಾಜಿ ಸಂಸದ ಧ್ರುವನಾರಾಯಣ್‌ ಅವರ ಅಕಾಲಿಕ ನಿಧನದಿಂದ ಈ ಬಾರಿಗೆ ಅವರ ಪುತ್ರ ದರ್ಶನ್​ ಅವರಿಗೆ ಟಿಕೆಟ್​ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಮೊದಲ ಪಟ್ಟಿಯಲ್ಲೇ ಅವರ ಹೆಸರು ಘೋಷಣೆ ಆಗಲಿದೆಯಂತೆ. ಹೊಳಲ್ಕೆರೆ ಕ್ಷೇತ್ರದ್ಲಲಿ ಮಾಜಿ ಸಚಿವ ಹೆಚ್ ಆಂಜನೇಯ ಅವರಿಗೆ ಟಿಕೆಟ್​ ನೀಡುವ ವಿಚಾರದಲ್ಲಿ ಸ್ಥಳೀಯರು ನಾಯಕರು ವಿರೋಧ ಮಾಡಿರುವುದನ್ನು ಹೈಕಮಾಂಡ್​ ಗಮನಕ್ಕೆ ತೆಗೆದುಕೊಂಡಿದ್ದು, ಸರ್ವೇಯಲ್ಲಿ ವ್ಯತಿರಿಕ್ತ ವರದಿ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್​ ಕೈ ತಪ್ಪುವ ಅವಕಾಶವಿದೆ ಎನ್ನಲಾಗಿದೆ.

ಇನ್ನು ಈ ನಡುವೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಮಹತ್ವದ ಸಲಹೆಯೊದನ್ನು ನೀಡಿದ್ದು, ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕೋಲಾರದಿಂದ ಸ್ಪರ್ಧೆ ಮಾಡಬೇಡಿ, ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

Leave A Reply

Your email address will not be published.