Anu Prabhakar : ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮಾತನಾಡಿದ ನಟಿ ಅನು ಪ್ರಭಾಕರ್!
Anu Prabhakar :ಇತ್ತೀಚಿನ ಯುಟ್ಯೂಬ್ ಚಾನಲ್ (youtube channel) ನಲ್ಲಿ ಸಂದರ್ಶನ ( interview) ನೀಡಿರುವ ಅನು ಪ್ರಭಾಕರ್ (Anu Prabhakar) ತಮ್ಮ ಮೊದಲ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಹಾಗೂ ಹೆಣ್ಣು ಮಕ್ಕಳ ಪೋಷಕರಿಗೆ ಕಿವಿ ಮಾತನ್ನು ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ (sandalwood) ಸಾಕಷ್ಟು ಹೆಸರು ಮಾಡಿರುವ ನಟಿ ಅನು ಪ್ರಭಾಕರ್ ತಮ್ಮ ಮೊದಲ ಮದುವೆಯ ಬಗ್ಗೆ ಹಲವಾರು ವರ್ಷಗಳ ನಂತರ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಭಿನಯ ಶಾರದೆ ಆಗಿರುವ ಜಯಂತಿ ಅವರ ಬಗ್ಗೆ ಮಾತನಾಡಿರುವ ಅನು ಪ್ರಭಾಕರ್ ಜಯಂತಿ ಅವರ ಮಗನನ್ನು 2001-2002 ರಲ್ಲಿ ಮದುವೆ ಆಗಿ 10-11 ಗಳ ಕಾಲ ವರ್ಷ ಸಂಸಾರ ಮಾಡಿ, ಡಿವೋರ್ಸ್ (divorce) ಆಗಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಮದುವೆಯ ವಿಚಾರ ಬಂದಾಗ ಅವರು ಮೊದಲು ಮಾತನಾಡಿದ್ದು ಜಯಂತಿ ಅಮ್ಮನವರ ಬಗ್ಗೆ.
ಅವರ ಸೊಸೆಯಾಗಿದ್ದ ಅನು ಅವರ ಜೊತೆ ಒಂದೊಳ್ಳೆ ಪ್ರೀತಿ ವಿಶ್ವಾಸದ ಸಂಬಂಧ ಹೊಂದಿದ್ದರು. ಒಬ್ಬ ನಟಿಯಾಗಿ, ಹೆಣ್ಣಾಗಿ, ತಾಯಿಯಾಗಿ, ಅವರಿಂದ ಕಲಿಯುವ ವಿಷಯ ತುಂಬಾ ಇದೆ. ಅವರೊಂದಿಗೆ ನಾನು ಅನೇಕ ವರ್ಷ ಜೊತೆಗಿದ್ದು ಬಹಳಷ್ಟು ಕಲಿತಿದ್ದೇನೆ. ಇದಾದ ನಂತರ ನನ್ನ ಜೀವನದ ಬಗ್ಗೆ ಎಲ್ಲರಿಗೂ ಏನು ಆಗಿದೆ ಎಂದು ತಿಳಿದಿದೆ ಎಂದರು. ಅನು ಪ್ರಭಾಕರ್ ಎಂದು ಇಂಟರ್ನೆಟ್ ನಲ್ಲಿ ಸರ್ಚ್ ( search) ಮಾಡಿದರೆ ಮೊದಲು ಬರುವ ವಿಚಾರವೇ ನನ್ನ ಡಿವೋರ್ಸ್(divorce) ಹಾಗೂ ನನ್ನ ಮೊದಲ ಮದುವೆ ಎಂದು ತಿಳಿಸಿದ್ದಾರೆ.
ಜಯಂತಿ ಅಮ್ಮ ಕೂಡ ನನಗೆ ಸಿನೆಮಾದಲ್ಲಿ ನಟನೆ ಮಾಡುವಂತೆ ತಿಳಿಸಿದ್ದರು. ಹಾಗೆಯೇ ನಾನು ಅನೇಕ ಸಿನೆಮಾಗಳಲ್ಲಿ (cinema) ನಟನೆ ಮಾಡಿದೆ. ನನ್ನ ಡ್ರೆಸ್ಸಿಂಗ್ ಸೆನ್ಸ್ (ಡ್ರೆಸ್ಸಿಂಗ್ sense) ಬಗ್ಗೆ ಜಯಂತಿ ಅಮ್ಮನೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಹೀಗೆ ಇದರ ಬಗ್ಗೆ ಮಾತನಾಡುತ್ತಿದ್ದ ಅನು ಅವರು ಮೊದಲ ಮದುವೆ ಯಾಕೆ ಮುರಿಯಿತು, ಏನಾಯ್ತು ಎಂಬುವುದು ತೀರಾ ಪರ್ಸನಲ್ (personal) ಈ ವಿಷಯ ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂಬುದಾಗಿ ಹೇಳಿದರು.
ನನ್ನ ಜೀವನದಲ್ಲಿ ಮತ್ತೊಬ್ಬರು ಪ್ರವೇಶಸಿದ್ದಾರೆ ಅನ್ನೋ ಪ್ರಶ್ನೆಗಳು ನಮ್ಮ ಪರ್ಸನಲ್ (personal) ಎಂದು ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ಮದುವೆ ಅದ ಮೇಲೆ ಗಂಡ ಹೆಂಡತಿಯ ಸಂಸಾರದಲ್ಲಿ ಬಿನ್ನಭಿಪ್ರಾಯ ಬರುವುದು ಸಹಜ ಅದರ ಬಗ್ಗೆ ಕೇವಲ ಅವರಿಬ್ಬರಿಗೆ ಮಾತ್ರ ತಿಳಿದಿರುತ್ತದೆ. ಈ ವಿಚಾರದ ಬಗ್ಗೆ ತಂದೆ ತಾಯಿಗೂ ಸಹ ತಿಳಿದಿರುವುದಿಲ್ಲ ಎಂದು ಹೇಳಿ, ಎಲ್ಲರಿಗೂ ಇರುವುದು ಒಂದೇ ಜೀವನ (life) ಅದನ್ನು ತುಂಬಾ ಸಂತೋಷವಾಗಿ ಕಳೆಯಬೇಕು. ನೋವಿನಿಂದ ಜೀವನ ಸಾಗಿಸಲು ಸಾದ್ಯವಿಲ್ಲ, ನೋವು ನೀಡುವ ಸಂಗತಿಗಳಿಂದ ದೂರ ಆಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅನು ಪ್ರಭಾಕರ್ ಹೇಳಿದ್ದಾರೆ.
ಹಾಗೆಯೇ ಮಾತನಾಡಿದ್ದ ಅನು ಅವರು ಹೆಣ್ಣು ಮಕ್ಕಳ ಪೋಷಕರಿಗೆ ಕಿವಿ ಮಾತನ್ನು ತಿಳಿಸಿದ್ದಾರೆ ಹೆಣ್ಣು ಮಕ್ಕಳು ನೋವಿನಿಂದ ಗಂಡನ ಮನೆಯಲ್ಲಿ ಇರಲು ಆಗುವುದಿಲ್ಲ ಎಂದಾಗ ಅವರ ಜೊತೆ ಇದ್ದು ಅವರಿಗೆ ಸಪೋರ್ಟ್ ಮಾಡಿ. ನನ್ನ ಜೀವನದಲ್ಲಿಯೂ ನನಗೆ ನನ್ನ ತಾಯಿ, ಅಣ್ಣ ಹಾಗೂ ಸ್ಕೂಲ್ ಫ್ರೆಂಡ್ಸ್ ನನಗೆ ಸಹಾಯ ಮಾಡಿದರು, ಅವರಿಂದ ನನಗೆ ಬಹಳ ಸಪೋರ್ಟ್ (support) ಸಿಕ್ಕಿತು. ಹಾಗಾಗಿ ಪ್ರತಿ ಒಂದು ಹೆಣ್ಣಿಗೂ ಅವರ ಪೋಷರಕ ಬೆಂಬಲ ಅತಿ ಮುಖ್ಯ. ನಿಮ್ಮ ಬೆಂಬಲದಿಂದಲೇ (support) ಅವರು ಜೀವನದಲ್ಲಿ ಕುಗ್ಗುವುದಿಲ್ಲ ಹಾಗೂ ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ. ಏನೇ ಆದರೂ ಮೊದಲು ಅವರ ಬೆಂಬಲಕ್ಕೆ (support) ನಿಲ್ಲಿ, ಬೇರೆ ಅವರ ಮಾತಿಗೆ ಕಿವಿ ಕೊಡಬೇಡಿ, ಜೀವನ ಅಂದ ಮೇಲೆ ನೆಗಟಿವ್ ಭಾಗ ಇರುತ್ತದೆ ಅದನ್ನು ಸ್ವೀಕರಿಸಿ ಮುಂದುವರೆಯಬೇಕು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.