Airtel : ನೀವೂ ಕೂಡ ಏರ್‌ಟೆಲ್ ಗ್ರಾಹಕರೇ! ಹಾಗಿದ್ದರೆ ಈ ಆಫರ್ ಆನಂದಿಸಿರಿ

Airtel : ಪ್ರಸಿದ್ಧ ಟೆಲಿಕಾಂ ಕಂಪೆನಿಗಳಲ್ಲಿ ಏರ್​ಟೆಲ್​ ಕೂಡಾ ಒಂದು. ಈ ಕಂಪೆನಿ ಮಾರುಕಟ್ಟೆಯಲ್ಲಿ ಅತೀ ಹಚ್ಚು ಗ್ರಾಹಕರನ್ನು ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜಿಯೋ ಕಂಪೆನಿಗೆ ಪ್ರತಿಸ್ಪರ್ಧಿಯಾಗಿರುವ ಏರ್​ಟೆಲ್​ (Airtel) ಕಂಪೆನಿ ಸ್ಮಾರ್ಟ್​ಫೋನ್​ ಬಳಕೆದಾರರನ್ನು ತನ್ನತ್ತ ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಹೊಸ ​ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಏರ್​​ಟೆಲ್​ ಕಂಪೆನಿ ಇದೀಗ ಮತ್ತೊಂದು ಗುಡ್​ ನ್ಯೂಸ್​ ಅನ್ನು ಕಂಪೆನಿ ಗ್ರಾಹಕರಿಗೆ ನೀಡಿದೆ.

ಸದ್ಯ ರಿಲಯನ್ಸ್ ಜಿಯೋಗೆ ಸ್ಪರ್ಧೆ ನೀಡುವ ಸಲುವಾಗಿ ಇದೀಗ ಏರ್‌ಟೆಲ್ ಕೂಡ ಅಸ್ತಿತ್ವದಲ್ಲಿರುವ ಎಲ್ಲಾ ಯೋಜನೆಗಳಲ್ಲಿ ಡೇಟಾ ಬಳಕೆಯ ಮೇಲಿನ ಮಿತಿಯನ್ನು ತೆಗೆದುಹಾಕುವುದಾಗಿ ಘೋಷಿಸಿದೆ. ಹೌದು, “ಏರ್‌ಟೆಲ್ 5G ಬಳಕೆದಾರರು ಇನ್ನು ಮುಂದೆ ಡೇಟಾ ಮಿತಿಗಳು ಅಥವಾ ದೈನಂದಿನ ಡೇಟಾ ಬಗ್ಗೆ ಚಿಂತಿಸಬೇಕಾಗಿಲ್ಲ.

ಯಾಕೆಂದರೆ ಇದೀಗ 5G ಡೇಟಾ ಬಳಕೆಗೆ ಯಾವುದೇ ಮಿತಿಯಿಲ್ಲ. 239 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರು ಇದೀಗ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು” ಎಂದು ಏರ್‌ಟೆಲ್ ಸಂಸ್ಥೆ ತಿಳಿಸಿದೆ.

ಭಾರತದಲ್ಲಿ 5G ಒದಗಿಸುವಲ್ಲಿ ಮುಂಚೂಣಿಯ ಟೆಲಿಕಾಂ ಕಂಪೆನಿಗಳಾಗಿ ಗುರುತಿಸಿಕೊಂಡಿರುವ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್‌ಟೆಲ್‌ ಎರಡೂ ಪೈಪೋಟಿಗೆ ನಿಂತಿದ್ದು, . ಇಲ್ಲಿಯವರೆಗೂ ಜಿಯೋ ತಾನು 5G ಸೇವೆಗಳನ್ನು ಆರಂಭಿಸಿರುವ ನಗರಗಳಲ್ಲಿ ಅನಿಯಮಿತ ಉಚಿತ 5G ಡೇಟಾ ಬಳಕೆಗೆ ಅವಕಾಶ ನೀಡಿತ್ತು .

ಇದೀಗ ಏರ್‌ಟೆಲ್ ಕೂಡ ತನ್ನ 5G ಪ್ಲಸ್ ನೆಟ್‌ವರ್ಕ್‌ನಲ್ಲಿ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು ಎಂದು ಹೇಳಿದೆ. ಏರ್‌ಟೆಲ್ 5G ಪ್ಲಸ್ ಈಗ ಸುಮಾರು 270 ಭಾರತೀಯ ನಗರಗಳಲ್ಲಿ ಲಭ್ಯವಿದೆ.

ಮುಂಬರುವ ಮಾರ್ಚ್ 2024ರ ವೇಳೆಗೆ ಎಲ್ಲಾ ನಗರಗಳಲ್ಲಿ 5G ಪ್ಲಸ್ ಸೇವೆ ಲಭ್ಯವಿರಲಿದ್ದು, ಈ ಎಲ್ಲಾ ನಗರಗಳಲ್ಲಿನ ಗ್ರಾಹಕರು “ಅನಿಯಮಿತ 5G ಡೇಟಾ” ಆಫರ್ ಕ್ಲೈಮ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

ಅನಿಯಮಿತ 5G ಡೇಟಾ ಆಫರ್ ಪ್ರಕಟಣೆಯ ಕುರಿತಂತೆ ಪ್ರತಿಕ್ರಿಯಿಸಿರುವ ಭಾರ್ತಿ ಏರ್‌ಟೆಲ್‌ನ ಗ್ರಾಹಕ ವ್ಯವಹಾರದ ನಿರ್ದೇಶಕ ಶಾಶ್ವತ್ ಶರ್ಮಾ ಅವರು, “ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಸಂತೋಷಪಡಿಸಲು ನಾವು ಯಾವಾಗಲೂ ಶ್ರಮಿಸುತ್ತಿದ್ದೇವೆ. ಈ ಹೊಸ ಪರಿಚಯಾತ್ಮಕ ಕೊಡುಗೆಯ ಮೂಲಕ ನಮ್ಮ ಗ್ರಾಹಕರು ಡೇಟಾ ಮಿತಿಗಳ ಬಗ್ಗೆ ಚಿಂತಿಸದೆ ಅತ್ಯಂತ ವೇಗದಲ್ಲಿ ಇಂಟರ್‌ನೆಟ್ ಸರ್ಫ್ ಮಾಡಲು, ಸ್ಟ್ರೀಮ್ ಮಾಡಲು, ಚಾಟ್ ಮಾಡಲು ಮತ್ತು ಬಹು ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.

ಮುಖ್ಯವಾಗಿ ಏರ್‌ಟೆಲ್‌ ಅನಿಯಮಿತ 5G ಡೇಟಾ ಆಫರ್ ಪ್ರಯೋಜನ ಪಡೆಯಲು ಚಂದಾದಾರರು 5G ಬೆಂಬಲಿತ ಸ್ಮಾರ್ಟ್‌ಫೋನ್‌ ಹಾಗೂ 5G ಲಭ್ಯ ಇರುವ ಪ್ರದೇಶದಲ್ಲಿ ಇರಬೇಕು. ನಂತರ “ಅನಿಯಮಿತ 5G ಡೇಟಾ” ಆಫರ್ ಕ್ಲೈಮ್ ಮಾಡಲು ಏರ್‌ಟೆಲ್ ಗ್ರಾಹಕರು ಕಂಪನಿಯ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ತೆರೆಯಬೇಕಾಗುತ್ತದೆ. ಇಲ್ಲಿ ಬ್ಯಾನರ್ ಮುಖ್ಯ ಪುಟದಲ್ಲಿ ‘Claim Unlimited 5G data’ ಕಾಣಿಸುತ್ತದೆ. ನಂತರ ಆ ಆಯ್ಕೆಯ ಮೇಲೆ ಟ್ಯಾಪ್ ಮಾಡಿದಾಗ, ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ಆ ನಂತರ ಪೇಜ್‌ನ ಕೆಳಭಾಗದಲ್ಲಿ Claim Now ಬಟನ್ ಕಾಣುವಿರಿ. ಆ ಬಟನ್ ಟ್ಯಾಪ್ ಮಾಡುವ ಮೂಲಕ ಡೇಟಾ ಕೊಡುಗೆ ಸಕ್ರಿಯಗೊಳಿಸಬಹುದು. ನಂತರ ನಿಮ್ಮ ರೀಚಾರ್ಜ್ ಪ್ಯಾಕ್‌ನ ಮಾನ್ಯತೆಯವರೆಗೆ ಅನಿಯಮಿತ 5G ಡೇಟಾ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಅನಿಯಮಿತ 5G ಡೇಟಾ ಆಫರ್ ಯೋಜನೆಯನ್ನು ನೀವು ಆನಂದಿಸಬಹುದು.

Leave A Reply

Your email address will not be published.