UDID Enrolment Number : ಸರ್ಕಾರದ ಯೋಜನೆಯ ಲಾಭ ಪಡೆಯಬೇಕಾದರೆ ದಿವ್ಯಾಂಗರು ನೀಡಬೇಕಾಗಿದೆ ಈ ದಾಖಲೆ! ಬಂದಿದೆ ಹೊಸ ನಿಯಮ
UDID Enrolment Number : ಸರ್ಕಾರವು ಜನಸಾಮಾನ್ಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ವಿಕಲ ಚೇತನರು ಅಥವಾ ದಿವ್ಯಾಂಗರಿಗೆ ಸಹಕಾರಿಯಾಗಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಇದೀಗ ವಿಕಲ ಚೇತನರು (Disabled people) ಸರ್ಕಾರದ ಈ ಯೋಜನೆಗಳ (government scheme) ಲಾಭ ಪಡೆಯಲು ಈ ದಾಖಲೆ ನೀಡಬೇಕಿದೆ. ಈ ಬಗ್ಗೆ ಹೊಸ ನಿಯಮ ಬಂದಿದ್ದು, ಏಪ್ರಿಲ್ 1, 2023 ರಿಂದ ನಿಯಮ ಅನ್ವಯವಾಗಲಿದೆ. ಯಾವ ದಾಖಲೆ? ಮಾಹಿತಿ ಇಲ್ಲಿದೆ.
ಏಪ್ರಿಲ್ 1, 2023 ರಿಂದ, ವಿಕಲಾ ಚೇತನರು ಸರ್ಕಾರಿ ಯೋಜನಗೆಳ ಲಾಭ ಪಡೆಯಲು ಕೇಂದ್ರವು ನೀಡುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಸಂಖ್ಯೆಯನ್ನು ನಮೂದಿಸುವುದು (UDID Enrolment Number) ಕಡ್ಡಾಯವಾಗಿರುತ್ತದೆ. ಯುಡಿಐಡಿ ಕಾರ್ಡ್ ಇಲ್ಲದಿರುವವರು ವಿಕಲಚೇತನ ಪ್ರಮಾಣಪತ್ರದೊಂದಿಗೆ ಯುಡಿಐಡಿ ನೋಂದಣಿ ಸಂಖ್ಯೆಯನ್ನು ಒದಗಿಸಬೇಕು ಎಂದು ಸರ್ಕಾರ ತಿಳಿಸಿದೆ. ಹಾಗೆಯೇ ಯುಡಿಐಡಿ ಸಂಖ್ಯೆ ಇದ್ದರೆ ಅಂಗವೈಕಲ್ಯ ಪ್ರಮಾಣಪತ್ರದ ಭೌತಿಕ ಪ್ರತಿ ಅಥವಾ ಅಂಗವೈಕಲ್ಯ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.
ಹಾಗಿದ್ದರೆ ಯುಡಿಐಡಿ ಸಂಖ್ಯೆ ಪಡೆಯುವುದು ಹೇಗೆ ?
• ವಿಕಲ ಚೇತನರು ಯುಡಿಐಡಿ ವೆಬ್ ಪೋರ್ಟಲ್‌ನಲ್ಲಿ ನೋಂದಾಯಿಸಲು ರಿಜಿಸ್ಟರ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
• PwD ಸಿಸ್ಟಮ್‌ಗೆ ಲಾಗ್ ಇನ್ ಆಗಿ Apply online for Disability Certificate ಮೇಲೆ ಕ್ಲಿಕ್ ಮಾಡಿ.
• ಕಲರ್ ಪಾಸ್‌ಪೋರ್ಟ್ ಫೋಟೋ ಮತ್ತು ಆದಾಯ ಪುರಾವೆ, ಗುರುತಿನ ಪುರಾವೆ ಮತ್ತು SC/ST/OBC ಪುರಾವೆಗಳಂತಹ ಇತರೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
• CMO ಕಚೇರಿ/ವೈದ್ಯಕೀಯ ಪ್ರಾಧಿಕಾರಕ್ಕೆ ಡೇಟಾ ಸಲ್ಲಿಕೆಯಾಗುತ್ತದೆ.
• ಡೇಟಾವನ್ನು CMO ಕಚೇರಿ/ವೈದ್ಯಕೀಯ ಪ್ರಾಧಿಕಾರವು ಪರಿಶೀಲಿಸುತ್ತದೆ.
• ಪರಿಶೀಲನೆಗೆ ಸಂಬಂಧಪಟ್ಟ ತಜ್ಞರನ್ನು CMO ಕಚೇರಿ ಅಥವಾ ವೈದ್ಯಕೀಯ ಪ್ರಾಧಿಕಾರವು ನಿಯೋಜಿಸುತ್ತದೆ.
• ತಜ್ಞ ವೈದ್ಯರು PwD ಯ ಅಂಗವೈಕಲ್ಯವನ್ನು ನಿರ್ಣಯಿಸುತ್ತಾರೆ ಮತ್ತು ಅಂಗವೈಕಲ್ಯದ ಬಗ್ಗೆ ಅಭಿಪ್ರಾಯ ನೀಡುತ್ತಾರೆ.
• CMO ಕಚೇರಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಸಿದ್ಧಪಡಿಸುತ್ತದೆ ಮತ್ತು UDID ಮತ್ತು ಅಂಗವೈಕಲ್ಯ ಪ್ರಮಾಣಪತ್ರವನ್ನು ಜನರೇಟ್ ಮಾಡುತ್ತದೆ.
• UDID ಡೇಟಾಶೀಟ್ UDID ಕಾರ್ಡ್ ಅನ್ನು ಮುದ್ರಣಕ್ಕೆ ಕಳುಹಿಸಲಾಗುತ್ತದೆ.
• ಬಳಿಕ ಈ ಕಾರ್ಡ್ ಅನ್ನು PwD ಗೆ ರವಾನಿಸಲಾಗುತ್ತದೆ.
ಹೊಸ ನಿಯಮ ಏಪ್ರಿಲ್ 1, 2023 ರಿಂದ ಅನ್ವಯವಾಗಲಿದ್ದು, ಈ ಪ್ರಕಾರ ಮಾಡಿದರೆ ಮಾತ್ರವೇ ದಿವ್ಯಾಂಗರು ಸರ್ಕಾರದ ಯೋಜನೆಯ ಲಾಭ ಪಡೆಯಬಹುದು.