Tata Nano : ಕೇವಲ 30ರೂ.ನಲ್ಲಿ 100 ಕಿ.ಮೀ.ಓಡೋ ಕಾರು! ಈ ವ್ಯಕ್ತಿಯ ಚಾಕಚಕ್ಯತೆಗೆ ನೆಟ್ಟಿಗರು ಫಿದಾ!!!
Solar-Powered Car: ಸೂರ್ಯನ ಬೆಳಕು ಜೀವಿಗಳ ಬದುಕಿಗೆ ಅತ್ಯಂತ ಅಮೂಲ್ಯವಾದದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ!! ಇಂದು ನಮ್ಮ ಓಡಾಟಕ್ಕೆ ವಾಹನಗಳು(Vechicles) ಅತ್ಯವಶ್ಯಕವಾಗಿದ್ದು, ಪೆಟ್ರೋಲ್(Petrol), ಡೀಸೆಲ್( Disel) ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿರುವ ನಡುವೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ( Electric Vechicle)ಮುಖ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಸೌರ ಚಾಲಿತ ಶಕ್ತಿಯ ಬಳಕೆಯಿಂದ ವಿಭಿನ್ನ ಪ್ರಯೋಗ, ಅನ್ವೇಷಣೆಗಳು ಹಿಂದಿನಿಂದಲೂ ನಡೆಯುತ್ತಿದ್ದು, ಇದೀಗ, ಸೌರಚಾಲಿತ ಕಾರನ್ನು ತಯಾರಿ ಮಾಡಿದ್ದಾರೆ.
ಸೂರ್ಯನ ಬೆಳಕಿನಿಂದ (Solar System) ಆಗುವ ಪ್ರಯೋಜನಗಳ ಬಗ್ಗೆ ಸಹಜವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಸೂರ್ಯನ ಬೆಳಕು ಅಗತ್ಯವಾದ ಜೀವಸತ್ವಗಳ ಜೊತೆಗೆ ಪರಿಸರವನ್ನು ಪೋಷಿಸುವವರೆಗೆ ನೆರವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ತಾಪಮಾನ (Temperature) ಹೆಚ್ಚಳ ಕಾಣುತ್ತಿದ್ದು, ಇದರ ನಡುವೆಯೇ ಸೂರ್ಯನಿಂದ (Sun)ಸಿಗುವ ಹೇರಳವಾದ ಶಕ್ತಿಯನ್ನು ಬಳಸಿ ನವೀಕರಿಸಲಾಗದ ಇಂಧನ ಮೂಲಗಳ ಬದಲಿಗೆ ಸೌರವಿದ್ಯುತ್ ಬಳಕೆ ಮಾಡುವ ವಿಧಾನವನ್ನು ಹೆಚ್ಚಿನವರು ಪ್ರಯೋಗ ಮಾಡಿ ಪ್ರಯೋಜನ ಕಂಡುಕೊಳ್ಳುತ್ತಿದ್ದಾರೆ.
ಇದೀಗ, ವೃತ್ತಿಯಲ್ಲಿ ಉದ್ಯಮಿಯಾಗಿರುವ (Businessperson)ಮನೋಜಿತ್ ಎಂಬವರು ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದು, ಈ ಕಾರಿಗೆ ಯಾವುದೇ ಪೆಟ್ರೋಲ್ ಅವಶ್ಯಕತೆ ಇಲ್ಲ ಎನ್ನಲಾಗಿದೆ. ಇದರ ವಿಶೇಷತೆ ಕೇಳಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.
ಬಂಕುರಾದ ಕಟ್ಜುರಿದಂಗ ನಿವಾಸಿಯಾಗಿರುವ ಮನೋಜಿತ್ ಮೊಂಡಲ್ ಸೌರಶಕ್ತಿ ಚಾಲಿತ ಕಾರನ್ನು(Solar-Powered Car) ತಯಾರಿಸಿದ್ದು, ಈ ಪೆಟ್ರೋಲ್-ಮುಕ್ತ “ಸೋಲಾರ್ ಕಾರ್” ಆಗಿದೆ. ಈ ಕಾರಿನಲ್ಲಿ ಎಂಜಿನ್ ಇಲ್ಲದೇ ಕಾರು ಮಾಡುವುದರಿಂದ ಕಾರು ಸ್ಟಾರ್ಟ್ ಮಾಡಿದರೂ ಸದ್ದು ಉಂಟಾಗುವುದಿಲ್ಲ. ಗೇರ್ ವ್ಯವಸ್ಥೆ ಇದ್ದು, ಈ ಕಾರು ನಾಲ್ಕನೇ ಗೇರ್‌ನಲ್ಲಿ ಬಹುತೇಕ ಮೌನವಾಗಿ ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.
ಇದರ ವಿಶೇಷತೆ ಏನಪ್ಪಾ ಅಂದರೆ, ಕೇವಲ 30 ರಿಂದ 35 ರೂ.ಗಳಲ್ಲಿ 100 ಕಿಲೋಮೀಟರ್ ಓಡುತ್ತದೆ. ಸದ್ಯ, ಮನೋಜಿತ್ ಮೊಂಡಲ್ ಈ ಕಾರನ್ನು ಊರಲ್ಲಿ ಸುತ್ತಾಡಿದ ವೀಡಿಯೋ ವೈರಲ್ (Viral) ಆಗಿ ಸಂಚಲನ ಸೃಷ್ಟಿ ಮಾಡಿದೆ. ಈ ಸೋಲಾರ್ ಚಾಲಿತ ಕಾರು ಬಂಕುರಾದ ಟ್ರೆಂಡಿಂಗ್ ವಿಷಯವಾಗಿ ಮಾರ್ಪಟ್ಟಿದೆ. ಸದ್ಯ, ಕಾರಿನ ನಿರ್ವಹಣಾ ವೆಚ್ಚ ಕೇಳಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆ ಸೌರ ಚಾಲಿತ ಕಾರು ಅಗ್ಗದ ಬೆಲೆಯಲ್ಲಿ ಕೊಂಡುಕೊಳ್ಳಲು ನೆರವಾಗುತ್ತದೆ.