Rishabh Shetty Kannada speech: ವಿಶ್ವಸಂಸ್ಥೆ ಸಭೆಯಲ್ಲಿ ರಿಷಬ್ ಶೆಟ್ಟಿಯ ಕನ್ನಡ ಭಾಷಣವನ್ನು ಕೇವಲ 12 ಸೆಕೆಂಡ್ ಗೆ ನಿಲ್ಲಿಸಲು ಸೂಚಿಸಿದ್ದು ಯಾಕೆ ?

Rishabh Shetty Kannada speech stopped: ವಿಶ್ವಸಂಸ್ಥೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಇತ್ತೀಚೆಗೆ ನಟ, ನಿರ್ದೇಶಕ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ (Rishabh Shetty) ಮಾತನಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಅವರು ಕನ್ನಡದಲ್ಲಿ ಮಾತಾಡಿ ಗಮನ ಸೆಳೆದಿದ್ದರು ಎನ್ನಲಾಗಿತ್ತು. ಆದರೆ ವಿಶ್ವಸಂಸ್ಥೆ ಮಂಡಳಿ ವಾರ್ಷಿಕ ಸಭೆಯಲ್ಲಿನ ಅವರ ಭಾಷಣವನ್ನು ಅರ್ಧಕ್ಕೆ ಅಲ್ಲ, ಕೇವಲ 12 ಸೆಕೆಂಡ್ ಗೆ ರಿಷಬ್ ಶೆಟ್ಟಿ ಭಾಷಣ ಮೊಟಕು ಮಾಡಲಾಗಿದೆ ಎಂಬ ಸುದ್ದಿ ಬಂದಿದೆ.

 

ವಿಶ್ವಸಂಸ್ಥೆಯ ಮಾನವ ಹಕ್ಕು ಸಂರಕ್ಷಣೆ ಪರಿಷತ್ತಿನ 28ನೇ ಸಭೆಯಲ್ಲಿ ರಿಷಬ್ ಪರಿಸರ ಸಂರಕ್ಷಣೆ ವಿಷಯದಲ್ಲಿ ಭಾಷಣ ಮಾಡಲು ದೊಡ್ಡದಾಗಿ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡು ಹೋಗಿದ್ದರು. ಅಲ್ಲಿ ರಿಷಬ್ ಶೆಟ್ಟಿಯವರು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ್ದರು. ಆದರೆ ಭಾಷಣ ಶುರುವಾದ ಕೇವಲ 12 ಸೆಕೆಂಡುಗಳಲ್ಲಿ ಅವರ ಭಾಷಣವನ್ನು ನಿಲ್ಲಿಸುವಂತೆ ಹೇಳಲಾಯಿತು.

ವಿಶ್ವಸಂಸ್ಥೆಯಲ್ಲಿ ಯಾವುದೇ ಭಾಷೆಯಲ್ಲಿ ಭಾಷಣ ಮಾಡುವ ಅವಕಾಶವಿದೆ. ಇಂಗ್ಲಿಷ್ ಸೇರಿದಂತೆ ವಿಶ್ವಸಂಸ್ಥೆಯ ಅನುಮೋದನೆ ಇರುವ ಕೆಲ ಭಾಷೆಗಳಿಗೆ ಅನುವಾದ ಮಾಡಿ ಅದನ್ನುಪ್ರಸಾರ ಮಾಡಲಾಗುತ್ತದೆ. ರಿಷಭ ಶೆಟ್ಟಿಯ ಭಾಷಣದ ಮಧ್ಯೆ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಅವರ ಭಾಷಣ ಇಂಗ್ಲಿಷ್ ಅಥವಾ ಬೇರೆ ಭಾಷೆಗಳಿಗೆ ಅನುವಾದ ಆಗದ ಕಾರಣ ಅವರ ಭಾಷಣವನ್ನು ಆರಂಭದಲ್ಲಿಯೇ ತಡೆಹಿಡಿಯಲಾಯಿತು.

ರಿಷಬ್ ಶೆಟ್ಟಿಯವರ ಭಾಷಣದ ಅನುವಾದವು ತಾಂತ್ರಿಕ ಸಮಸ್ಯೆಯಿಂದ ಪ್ರಸಾರವಾಗಲಿಲ್ಲ. ಹೀಗಾಗಿ ರಿಷಬ್ ಶೆಟ್ಟಿ ಮಾತನ್ನು ಕೇವಲ 12 ಸೆಕೆಂಡ್ ಗೆ ತಡೆಹಿಡಿದು ಬೇರೆಯವರಿಗೆ ಅವಕಾಶ ಮಾಡಿಕೊಡಲಾಯಿತು. ಕೇವಲ 12 ಸೆಕೆಂಡುಗಳಿಗೆ ಮಾತ್ರ ಭಾಷಣ ಮಾಡಿ ರಿಶಬ್ ಶೆಟ್ಟಿ ಅಲ್ಲಿಂದ ನಿರ್ಗಮಿಸಬೇಕಾಯಿತು.

Leave A Reply

Your email address will not be published.