Rishab Shetty Speech : ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಮಾತನಾಡಿದ ‘ಕಾಂತಾರ’ ನಟ ರಿಷಬ್ ಶೆಟ್ಟಿ
Rishab Shetty Speech : ಚಿತ್ರರಂಗದಲ್ಲಿ (Kannada film industry) ಅತ್ಯಂತ ಜನಪ್ರಿಯ ನಟ ಮತ್ತು ನಿರ್ದೇಶಕ ಎಂದೇ ಸೈ ಎನಿಸಿಕೊಂಡಿರುವ ರಿಷಬ್ ಶೆಟ್ಟಿ(Rishab Shetty)ವಿಶ್ವಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ(Environmental Protection) ಹಾಗೂ ಪರಿಸರದ ಮಹತ್ವದ ಬಗ್ಗೆ ಕನ್ನಡದಲ್ಲಿ ಭಾಷಣ ಮಾಡುವುದರ ಮೂಲಕ ಕನ್ನಡದ ಅಭಿಮಾನವನ್ನು ತೋರ್ಪಡಿಸಿದ್ದಾರೆ.
ಕಡಲ ತೀರದ ಪ್ರತಿಭಾವಂತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ವಿಶ್ವಸಂಸ್ಥೆಯಲ್ಲಿ (United Nations) ಕನ್ನಡ ಭಾಷೆಯಲ್ಲಿ (Kannada Language)ಭಾಷಣ ಮಾಡಿ ತನ್ನ ಕನ್ನಡ ಅಭಿಮಾನವನ್ನು ಇನ್ನಷ್ಟು ಎತ್ತಿ ಹಿಡಿದಿದ್ದಾರೆ. ಪರಿಸರ ಸಂರಕ್ಷಣೆ ಹಾಗೂ ಪರಿಸರದ ಕಾಳಜಿಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಭಾಷಣ (Rishab Shetty Speech)ಮಾಡಿ ಅಭಿಮಾನಿಗಳ ಮನಸನ್ನು ಇನ್ನಷ್ಟು ಗೆದ್ದಿದ್ದಾರೆ. ಸ್ವಿಜರ್ ಲ್ಯಾಂಡ್ (Switzerland) ಜಿನಿವಾದಲ್ಲಿರುವ (Geneva) ವಿಶ್ವಸಂಸ್ಥೆಯ (United Nations) ಪ್ರಧಾನ ಕಚೇರಿಯಲ್ಲಿ ರಿಷಬ್ ಶೆಟ್ಟಿ ಕನ್ನಡದಲ್ಲಿ ಭಾಷಣ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಇಂದು ವೈರಲ್ ಆಗಿದ್ದು, ಕನ್ನಡಿಗರು ತಮ್ಮ ನೆಚ್ಚಿನ ನಟನ ಕನ್ನಡಾಭಿಮಾನವನ್ನು ಕಣ್ತುಂಬಿಕೊಂಡಿದ್ದಾರೆ.
ಕನ್ನಡದಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ ‘ಎಲ್ಲರಿಗೂ ನಮಸ್ಕಾರ. ನಾನು ರಿಷಬ್ ಶೆಟ್ಟಿ. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದುವರೆ ವರ್ಷಗಳಿಗಿಂತಲು ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತಿರುವ ಭಾರತದ ಇಂದು ನಾನು ಇಕೋಫಾರ್ಮ್(Ecoform) ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ಇದು ನನಗೆ ಬಹಳ ಸಂತೋಷದ ವಿಷಯ. ಪರಿಸರದ ಸುಸ್ಥಿರತೆ ಕಾಪಾಡುವುದು ಬಹಳ ಮುಖ್ಯವಾಗಿದೆ.ಇದನ್ನು ಕಾಪಾಡುವುದು ನನ್ನ ಕರ್ತವ್ಯ’ ಎಂದು ವಿಶ್ವಸಂಸ್ಥೆಯ ಸಭೆಯಲ್ಲಿ ಕೌನ್ಸಿಲ್ ಮೆಂಬರ್ಸ್ (Council Members)ಸಮ್ಮುಖದಲ್ಲಿ ರಿಷಬ್ ಶೆಟ್ಟಿಯವರು 18 ಸೆಕೆಂಡ್ (18 second)ಗಳ ಕಾಲ ಕನ್ನಡದಲ್ಲಿ ಭಾಷಣ(Speech) ಮಾಡಿದ್ದಾರೆ. ಕನ್ನಡದಲ್ಲಿ ಮಾತಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್ ಆಗಿದೆ.
ವಿಶ್ವಸಂಸ್ಥೆಯಲ್ಲಿ(United Nations)ಕನ್ನಡ ಭಾಷೆಯಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆ ತಂದಿರುವ ವಿಷಯವೇ!! ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿರುವ ರಿಷಬ್ ಶೆಟ್ಟಿಯ ವಿಡಿಯೋಗಳನ್ನು (Video)ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅಭಿಮಾನಿಗಳು(Fanas) ಸಂತಸವನ್ನು ಮತ್ತು ಕನ್ನಡದ ಬಗ್ಗೆ ತಮಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳಿಗೆ ಮತ್ತೊಂದು ಸಂತಸದ ವಿಷಯವೇನೆಂದರೆ, ರಿಷಬ್ ಶೆಟ್ಟಿ ನಟಿಸಿ(Acting) ನಿರ್ದೇಶನ(Direction) ಮಾಡಿರುವ ‘ಕಾಂತಾರ’ ಚಿತ್ರ(Exhibition Show) ವಿಶ್ವಸಂಸ್ಥೆಯಲ್ಲಿ ಪ್ರದರ್ಶನಗೊಳ್ಳಲಿದೆ. ನಮ್ಮ ಕನ್ನಡ ಚಲನಚಿತ್ರ ವಿಶ್ವಸಂಸ್ಥೆಯಲ್ಲಿ ತೆರೆ ಕಾಣುವುದು ಎಂದರೆ ಕನ್ನಡದ ಹಿರಿಮೆಯನ್ನು ಜಗತ್ತಿಗೆ ಸಾರುವ ಸುಸಂದರ್ಭವಾಗಿದ್ದು, ಇದು ಎಲ್ಲರೂ ಹೆಮ್ಮೆ ಪಡುವ ಸಂಗತಿ. ಮಾರ್ಚ್ 17 ರಂದು ಕನ್ನಡದ ಪವರ್ ಸ್ಟಾರ್ (Power Star) ಎಂದೇ ಕರೆಸಿಕೊಂಡ ಪುನೀತ್ ರಾಜ್‌ಕುಮಾರ್(Puneeth Rajkumar) ಅವರ ಹುಟ್ಟುಹಬ್ಬದಂದು ವಿಶ್ವಸಂಸ್ಥೆಯಲ್ಲಿ ‘ಕಾಂತಾರ’ ಸಿನಿಮಾ ಪ್ರದರ್ಶನವಾಗಲಿದೆ. ವಿಶ್ವಸಂಸ್ಥೆಯ ಕೌನ್ಸಿಲ್ ಮೆಂಬರ್ಸ್(Council Members) ಜೊತೆ ಕೂತು ರಿಷಬ್ ಶೆಟ್ಟಿ ‘ಕಾಂತಾರ’ (Kantara)ಚಿತ್ರವನ್ನ ವೀಕ್ಷಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕರಾವಳಿಯ ಸಂಪ್ರದಾಯದ ಬಗ್ಗೆ ಹೇಳಬೇಕೆಂದರೆ, ಕಾಡಿನಲ್ಲಿ(Forest) ವಾಸಿಸುವ ಜನರು ಅವರ ಜೀವನದ ಬಂಡಿ ಮತ್ತು ಅರಣ್ಯ ರಕ್ಷಣೆ ಬಗ್ಗೆ ಅವರಿಗಿರುವ ಕಾಳಜಿ ‘ಕಾಂತಾರ’ ಸಿನಿಮಾದಲ್ಲಿ ಚಿತ್ರೀಕರಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಮೊದಲಿನಿಂದಲು ನಂಬಿಕೊಂಡು ಬಂದಿರುವ ಭೂತ ಕೋಲ, ದೈವರಾದನೆ ಕುರಿತಾದ ಕಥೆಯನ್ನು ‘ಕಾಂತಾರ’ ಸಿನಿಮಾ ಒಳಗೊಂಡಿದೆ. ಭಾರತದಾದ್ಯಂತ ‘ಕಾಂತಾರ’ ಸಿನಿಮಾ ಜನರಲ್ಲಿ ಮೈಮನ ನವಿರೇಳಿಸುವಂತೆ ಹೊಸ ರೀತಿಯ ಸಂಚಲನ ಸೃಷ್ಟಿ ಮಾಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ‘ಕಾಂತಾರ’ ಚಲನ ಚಿತ್ರ ಬಂಪರ್ ಕಲೆಕ್ಷನ್(Collection) ಮಾಡಿತ್ತು. ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.ಇವರ ಪಾತ್ರಕ್ಕೆ ಜನರಿಂದ ಹೆಚ್ಚಿನ ರೀತಿಯಲ್ಲಿ ಮೆಚ್ಚುಗೆ ದೊರೆತಿದ್ದು, ಜನರ ಮನಸನ್ನು ಗೆದ್ದಿರುವ ಕಾಂತಾರ ಸಿನಿಮಾದ ಹವಾ ಇಂದಿಗೂ ಮುಗಿದಿಲ್ಲ ಅನ್ನೋದು ಅಷ್ಟೇ ಸತ್ಯ.