Men’s Health: ಕೂಲ್‌ ಡ್ರಿಂಕ್ಸ್ ಹೆಚ್ಚಾಗಿ ಕುಡಿತೀರಾ ಗಂಡಸರೇ? ನಿಮ್ಮ ಪುರುಷತ್ವಕ್ಕೇ ಧಕ್ಕೆ, ಹುಷಾರ್‌!

Men’s Health: ಕೂಲ್‌ ಡ್ರಿಂಕ್ಸ್ (cool drinks) ಹೆಚ್ಚಾಗಿ ಎಲ್ಲಾರೂ ಕುಡಿತಾರೇ. ಆದರೆ, ಗಂಡಸರೇ ನೀವು ಕೂಲ್‌ ಡ್ರಿಂಕ್ಸ್ ಹೆಚ್ಚಾಗಿ ಕುಡಿತಿದ್ದರೆ, ಎಚ್ಚರ!! ನಿಮ್ಮ ಪುರುಷತ್ವಕ್ಕೇ ಧಕ್ಕೆ ಉಂಟಾಗಬಹುದು (Men’s Health). ಹೌದು, ಪುರುಷರು ಹೆಚ್ಚಾಗಿ ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಅಧ್ಯಯನ ತಿಳಿಸಿದೆ.

ಪುರುಷರು ಹೆಚ್ಚಾಗಿ ತಂಪು ಪಾನೀಯಗಳನ್ನು ಕುಡಿದರೆ ಹಲವು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ, ಪುರುಷರಲ್ಲಿಯೂ ಬಂಜೆತನ (Infertility) ಸಮಸ್ಯೆ ಕಾಣಿಸಿಕೊಳ್ಳುತ್ತದೆ. ತೆಳು ದೇಹಾಕಾರದವರು ಸಕ್ಕರೆಯುಕ್ತ ಪಾನೀಯ ಸೇವನೆ ಮಾಡಿದರೆ ಅದು ಅವರಲ್ಲಿ ಬಂಜೆತನಕ್ಕೆ ಕಾರಣವಾಗಲಿದೆ.

ಪುರುಷರು ಸಕ್ಕರೆ ಪಾನೀಯಗಳನ್ನು, ಕೂಲ್ ಡ್ರಿಂಕ್ಸ್ ಹೆಚ್ಚು ಕುಡಿದರೆ ಅದು ವೀರ್ಯದ ಚಲನಶೀಲತೆ ಮತ್ತು ಬೊಜ್ಜು (obesity) ಉಂಟು ಮಾಡಬಹುದು ಎಂದು ಅಧ್ಯಯನಗಳು ತಿಳಿಸಿವೆ. ಈ ಬಗ್ಗೆ ಅಧ್ಯಯನ ನಡೆಸಿದ್ದು, ಈ ವೇಳೆ ಶೇ. 25ರಷ್ಟು ಪುರುಷರಲ್ಲಿ ಈ ಸಮಸ್ಯೆಯು ಕಂಡುಬಂದಿದೆ. ಅಲ್ಲದೆ, ಅತಿಯಾಗಿ ಸಕ್ಕರೆಯುಕ್ತ ಪಾನೀಯಗಳನ್ನು ಸೇವನೆ ಮಾಡಿದರೆ, ಅದರಿಂದ ಸಂತಾನೋತ್ಪತ್ತಿ ಹಾರ್ಮೋನ್ ಕಡಿಮೆ ಆಗುತ್ತದೆ.

ಹಾಗೆಯೇ ಹೆಚ್ಚಿನ ಪುರುಷರಿಗೆ ಬೊಜ್ಜು ಇರುತ್ತದೆ. ಆದರೆ ಇದನ್ನು ಕರಗಿಸಿಕೊಳ್ಳಿ. ಯಾಕಂದ್ರೆ ಇದರಿಂದ ನಿಮ್ಮ ಹೆಂಡತಿಗೆ ತೊಂದರೆ
ಉಂಟಾಗಬಹುದು. ಪುರುಷರಲ್ಲಿ ಇದು ವೀರ್ಯದ ಗಣತಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಇದು ಮಹಿಳೆಯರಲ್ಲಿ ಗರ್ಭಪಾತ, ಋತುಚಕ್ರದ ಅಸಾಮಾನ್ಯತೆಗೆ ಕಾರಣವಾಗಬಹುದು.

ಪುರುಷರು ತೊಡೆಯ ಮೇಲೆ ಲ್ಯಾಪ್ ಟಾಪ್ (laptop) ಇಟ್ಟುಕೊಂಡು ಕೆಲಸ ಮಾಡಬಾರದು. ತೊಡೆಯ ಮೇಲೆ ಲ್ಯಾಪ್ ಟಾಪ್ ಇರಿಸಿ ಕೆಲಸಮಾಡುವವರಲ್ಲಿ ಬಂಜೆತನದ ಸಮಸ್ಯೆಯು ಹೆಚ್ಚಾಗಿದ್ದು, ವೀರ್ಯ ನಾಶವು ಅತಿಯಾಗಿ ಇರುವುದು ಎಂದು ಅಧ್ಯಯನಗಳು ಹೇಳಿವೆ.

Leave A Reply

Your email address will not be published.