Maruti Suzuki : ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು ಗೊತ್ತಾ? ಸಂಪೂರ್ಣ ವಿವರ ಇಲ್ಲಿದೆ

Maruti Suzuki: ಜನಪ್ರಿಯ ಕಾರು (car) ತಯಾರಿಕಾ ಕಂಪನಿಗಳು ಮಾರುಕಟ್ಟೆಗೆ ಹಲವು ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಹಾಗೆಯೇ ಜನರು ಆಕರ್ಷಿತರಾಗಿ ಕಾರು ಕೊಳ್ಳಲು ಮುನ್ನುಗ್ಗುತ್ತಿದ್ದಾರೆ. ಇದೀಗ ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಗಳ ವಿವರ ಇಲ್ಲಿದೆ. ಮಾರುತಿ ಸುಜುಕಿಯಿಂದ (Maruti Suzuki ) ಹಿಡಿದು ಟಾಟಾದವರೆಗೆ (tata) ಕಾರುಗಳ ಪಟ್ಟಿ ಇಲ್ಲಿದೆ.

ಮಾರುತಿ ಸುಜುಕಿ ಬಲೆನೊ (maruti suzuki Baleno): ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಬಲೆನೊ ಮೊದಲು ಸ್ಥಾನದಲ್ಲಿದೆ. ಈ ಬ್ರಾಂಡ್​ನ 18,592 ಕಾರುಗಳು ಫೆಬ್ರವರಿ 2023ರಲ್ಲಿ ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 12, 570 ಕಾರುಗಳು ಮಾರಾಟವಾಗಿದ್ದವು. ಮಾರುತಿ ಸುಜುಕಿ ಬಲೆನೊ ಪ್ರಸ್ತುತ 9 ವೆರಿಯೆಂಟ್‌‌ಗಳನ್ನು ಹೊಂದಿದ್ದು, 6 ಬಣ್ಣಗಳ ಆಯ್ಕೆ ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್​ (maruti suzuki swift): ಭಾರತದ ಜನಪ್ರಿಯ ಹ್ಯಾಚ್​ಬ್ಯಾಕ್ ಕಾರು ಮಾರುತಿ ಸುಜುಕಿ ಸ್ವಿಫ್ಟ್​ನ​ 18,412 ಯೂನಿಟ್​ ಫೆಬ್ರವರಿಯಲ್ಲಿ ಮಾರಾಟವಾಗಿದೆ. ಕಳೆದ ವರ್ಷ 19,202 ಕಾರುಗಳು ಮಾರಾಟ​ ಆಗಿದ್ದವು. ಇದು 1.2-ಲೀಟರ್ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ (90PS/113Nm) ಹೊಂದಿದ್ದು, ಇದು 5-ಸ್ಪೀಡ್ AMTಯ ಗೇರ್ ಬಾಕ್ಸ್ ಪಡೆದಿದೆ. 5-ಸ್ಪೀಡ್ ಮ್ಯಾನುವಲ್ ಆಯ್ಕೆಯೊಂದಿಗೆ ಮಾತ್ರ ಈ ಕಾರು ಲಭ್ಯವಿದ್ದು, CNG ಜೊತೆಗೆ ಇದರ ಮೈಲೇಜ್ 30.90km/kg ವರೆಗೆ ಇರಲಿದೆ. ಸುಜುಕಿ ಸ್ವಿಫ್ಟ್ ಸಿಎನ್‌ಜಿಯ ಬೆಲೆ 6 ಲಕ್ಷದಿಂದ 8.98 ಲಕ್ಷದವರೆಗೆ ಇರಲಿದೆ.

ಮಾರುತಿ ಸುಜುಕಿ ಆಲ್ಟೊ (maruti suzuki alto): ಕಳೆದ ಫೆಬ್ರವರಿಯಲ್ಲಿ 18,114 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ 11, 551 ಕಾರುಗಳು ಮಾರಾಟವಾಗಿದ್ದವು. ಈ ಬಾರಿ ಈ ಕಾರು ಮೂರನೇ ಸ್ಥಾನ ಪಡೆದಿದೆ. ಸದ್ಯ ಕಂಪನಿ ಆಲ್ಟೊದ ಅಡಿಯಲ್ಲಿ ಎರಡು ಕಾರುಗಳನ್ನು ಮಾರಾಟ ಮಾಡುತ್ತಿದೆ. ಅದು ಮಾರುತಿ ಆಲ್ಟೊ ಕೆ 10 (maruti alto K10) ಮತ್ತು ಮಾರುತಿ ಆಲ್ಟೊ 800 (maruti alto 800) ಆಗಿದೆ.

ಮಾರುತಿ ಸುಜುಕಿ ವ್ಯಾಗನ್​ಆರ್​ (maruti suzuki wagon R): ವ್ಯಾಗನ್ ಆರ್ ಅನ್ನು ಭಾರತದಲ್ಲಿ 18 ಡಿಸೆಂಬರ್ 1999 ರಂದು ಪ್ರಾರಂಭಿಸಲಾಯಿತು ಮತ್ತು ನಂತರ ಹಲವಾರು ನವೀಕರಣಗಳಿಗೆ ಒಳಗಾಗಿದೆ. 31 ಡಿಸೆಂಬರ್ 2019 ರ ಹೊತ್ತಿಗೆ, ವ್ಯಾಗನ್ ಆರ್ ಭಾರತದಲ್ಲಿ 2.4 ಮಿಲಿಯನ್ ಯುನಿಟ್‌ಗಳಿಗಿಂತ ಹೆಚ್ಚು ಮಾರಾಟವಾಗಿದೆ. ಸದ್ಯ ಮಾರುತಿ ಸುಜುಕಿಯ ವ್ಯಾಗನ್ಆರ್ ಫೆಬ್ರವರಿ 2023ರಲ್ಲಿ 16, 889 ಕಾರು ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯ 14,669 ಕಾರುಗಳಿಗೆ ಹೋಲಿಸಿದರೆ ಪ್ರಗತಿ ಸಾಧಿಸಿದೆ.

ಮಾರುತಿ ಸುಜುಕಿ ಡಿಸೈರ್​ (maruti suzuki dizer) : ಟಾಪ್​ 10 ಪಟ್ಟಿಯಲ್ಲಿರುವ ಏಕೈಕ ಸೆಡಾನ್ ಕಾರು ಮಾರುತಿ ಸುಜುಕಿ ಡಿಸೈರ್​. ಫೆಬ್ರವರಿಯಲ್ಲಿ 16, 798 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 17, 438 ಕಾರುಗಳನ್ನು ಕಂಪನಿ ಮಾರಾಟ ಮಾಡಿತ್ತು.

ಮಾರುತಿ ಸುಜುಕಿ ಬ್ರೆಜಾ (maruti suzuki brezza): ಫೆಬ್ರವರಿ 2023ರಲ್ಲಿ 15, 787 ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. 2022ರ ಫೆಬ್ರವರಿಯಲ್ಲಿ 9, 256 ಕಾರುಗಳು ಸೇಲ್​ ಅಗಿದ್ದವು. ಬ್ರೆಝಾ ಸಿಎನ್ಜಿ (Brezza CNG) ಎಂಜಿನ್ ಕಾರ್ಯಕ್ಷಮತೆ, ಇದು 1.5-ಲೀಟರ್, 4-ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 87 hp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಾರು, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಹಾಗೂ 9-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನಂತಹ ನವೀನ ವೈಶಿಷ್ಟ್ಯಗಳನ್ನು ಹೊಂದಿದೆ.

ಟಾಟಾ ನೆಕ್ಸಾನ್ (tata Nexon) : ಟಾಟಾ ನೆಕ್ಸಾನ್ ಫೆಬ್ರವರಿ 2023ರಲ್ಲಿ 13,914 ಕಾರುಗಳು ಸೇಲ್​ ಆಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 12, 259 ನೆಕ್ಸಾನ್​ ಮಾರಾಟವಾಗಿದ್ದವು. ಸದ್ಯ ಈ ಕಾರು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿವೆ.

ಮಾರುತಿ ಇಕೊ (tata eco): ​ಮಾರುತಿ ಇಕೊ ಒಟ್ಟು 11,352 ಕಾರುಗಳನ್ನು ಮಾರುತಿ ಸುಜುಕಿ ಫೆಬ್ವವರಿಯಲ್ಲಿ ಸೇಲ್ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,190 ಕಾರುಗಳು ರಸ್ತೆಗೆ ಇಳಿದಿದ್ದವು.

ಟಾಟಾ ಪಂಚ್​ : ಫೆಬ್ರವರಿಯಲ್ಲಿ ಒಟ್ಟು 11,168 ಕಾರುಗಳು ಮಾರಾಟವಾಗಿವೆ. ಕಳೆದ ವರ್ಷ ಈ ಅವಧಿಯಲ್ಲಿ 9,592 ಕಾರುಗಳನ್ನು ಮಾರಾಟ ಮಾಡಿತ್ತು ಟಾಟಾ ಮೋಟಾರ್ಸ್​. ಟಾಟಾ ಪಂಚ್ (Tata Punch) 5 ಆಸನಗಳನ್ನು ಹೊಂದಿರುವ ಕಾರಾಗಿದ್ದು, ಇದು 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಅಲ್ಲದೆ, ಈ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 86 bhp ಪವರ್ ಮತ್ತು 113 nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಪಂಚ್ 5-ಸ್ಪೀಡ್ ಮ್ಯಾನುವಲ್ ಮತ್ತು ಐಚ್ಛಿಕ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಸಂಯೋಜಿಸಲ್ಪಟ್ಟಿದೆ. ಈ ಕಾರಿನ ಮೈಲೇಜ್ ಪ್ರತಿ ಲೀಟರ್‌ಗೆ ಸುಮಾರು 19 ಕಿ.ಮೀ. ಆಗಿದೆ.

ಹ್ಯುಂಡೈ ಕ್ರೆಟಾ (hundai creta): ಈ ಪಟ್ಟಿಯಲ್ಲಿರುವ ಏಕೈಕ ದೊಡ್ಡ ಗಾತ್ರದ ಎಸ್​ಯುವಿ ಹ್ಯುಂಡೈ ಕ್ರೆಟಾ. ಫೆಬ್ರವರಿಯಲ್ಲಿ 10, 421 ಕಾರುಗಳು ಮಾರಾಟವಾಗಿದ್ದವು. ಕಳೆದ ವರ್ಷ 9606 ಕಾರುಗಳನ್ನು ಕಂಪನಿ ಮಾರಿತ್ತು. ಈ ಬಾರಿ ಕೊಂಚ ಹೆಚ್ಚು ಮಾರಾಟ ಕಂಡಿದೆ.

ಇದನ್ನೂ ಓದಿ: Work From Home : ಇನ್ನು work from home ರದ್ದು? ಕಚೇರಿಗಳಿಗೆ ಬಂದು ಕೆಲಸ ಮಾಡಲು ಹೇಳಿದ ಕಂಪನಿಗಳು ಯಾವುವು ಗೊತ್ತಾ

Leave A Reply

Your email address will not be published.