Honda Hero Bike : ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಹಾಗೂ ಹೋಂಡಾ ಶೈನ್ ನಡುವಣ ವ್ಯತ್ಯಾಸವೇನು ಗೊತ್ತೇ?

Honda Hero Bike: ಬೈಕ್ ಅಂದರೆ ಸಾಕು!!! ಹುಡುಗರ ಪಾಲಿನ ಗರ್ಲ್ ಫ್ರೆಂಡ್ ಇದ್ದಂತೆ. ಎಲ್ಲೇ ಹೋದರು ಬಂದರೂ ಯುವಜನತೆಗೆ ಬೈಕ್ ಮೇಲಿನ ವ್ಯಾಮೋಹ ಕಡಿಮೆ ಅಗುವಂತಹದಲ್ಲ. ಇಂದು ಮಾರುಕಟ್ಟೆಯಲ್ಲಿ ಹೊಸ ಹೊಸ ವೈಶಿಷ್ಟ್ಯದ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಹೀರೋ ಸ್ಪ್ಲೆಂಡರ್ ಪ್ಲಸ್‌(Hero Splendor Plus) ಬೈಕಿಗೆ ಟಕ್ಕರ್ ನೀಡಲು ಹೋಂಡಾ ಮೋಟಾರ್‌ಸೈಕಲ್ (Honda Motorcycle & Scooter India Pvt Ltd)ತನ್ನ ಹೊಸ 100cc ಶೈನ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆಗೊಳಿಸಿದೆ. ಹಾಗಿದ್ರೆ, ಈ ಎರಡು ಬೈಕ್ ಗಳ ( Honda Hero Bike) ವಿಶೇಷತೆ ಏನು ಎಂಬ ಕುತೂಹಲ ನಿಮಗೆ ಮೂಡುವುದು ಸಹಜ. ಇದಕ್ಕೆ ಉತ್ತರ ನಾವು ಹೇಳ್ತೀವಿ ಕೇಳಿ!!

Honda Shine 100 Vs Hero Splendor Plus :ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus )
ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus) ವೀಲ್‌ಬೇಸ್ 1236 ಎಂಎಂ, ಸೀಟ್ ಎತ್ತರ 785 ಎಂಎಂ ಮತ್ತು ಗ್ರೌಂ ಡ್ ಕ್ಲಿಯರೆನ್ಸ್ 165 ಎಂಎಂ ಒಳಗೊಂಡಿದೆ. ಇದರ ಇಂಧನ ಟ್ಯಾಂಕ್ 9.8-ಲೀಟರ್‌ಗಳಲ್ಲಿ ಸ್ವಲ್ಪ ದೊಡ್ಡದಾಗಿದ್ದು, ಹೊಸ ಹೋಂಡಾ 100 ಸಿಸಿ ಬೈಕ್‌ಗೆ ಹೋಲಿಕೆ ಮಾಡಿದರೆ, ಹೀರೋ ಸ್ಪ್ಲೆಂಡರ್ ಪ್ಲಸ್ 112 ಕೆಜಿ ಕರ್ಬ್ ತೂಕ ಹೊಂದಿದ್ದು ಭಾರವಾಗಿದೆ. ಸ್ಪ್ಲೆಂಡರ್ ಪ್ಲಸ್‌ನ ವೀಲ್‌ಬೇಸ್, ಸೀಟ್ ಎತ್ತರ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಶೈನ್ 100 ಬೈಕ್ ಗಿಂತ ಸ್ವಲ್ಪ ಕಡಿಮೆಯಾಗಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ ಶೈನ್ 100 ಗಿಂತ ಹೆಚ್ಚಿನ ವಿಶೇಷತೆಯನ್ನು ಒಳಗೊಂಡಿದೆ. ಬ್ಲೂಟೂತ್ ಕನೆಕ್ಟಿವಿಟಿ, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಮತ್ತು ಡಿಜಿಟಲ್ ಸ್ಪೀಡೋಮೀಟರ್‌ನೊಂದಿಗೆ ಪ್ಯಾಕ್ ಮಾಡಲಾಗಿರುವ ಸ್ಪ್ಲೆಂಡರ್ ಎಕ್ಸ್‌ಟೆಕ್ ರೂಪಾಂತರದ ಬೆಲೆಯು ರೂ.75,840 ಆಗಿದೆ. ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ 97.2cc ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ ಅನ್ನು ಒಳಗೊಂಡಿದೆ.

ಹೊಂಡ ಶೈನ್ 100(Honda Shine 100cc);
ಈ ಹೊಸ ಹೋಂಡಾ ಶೈನ್ 100cc( Honda Shine 100)ಬೈಕ್ ಬೆಲೆಯು ರೂ.64,900 ಗಳಾಗಿದ್ದರೆ, ಈ ಬೈಕ್ ಗೆ ಜಿದ್ದಾಜಿದ್ದಿನ ಪೈಪೋಟಿ ನೀಡಲು ರೆಡಿಯಾಗಿರುವ ಹೀರೋ ಸ್ಪ್ಲೆಂಡರ್ ಪ್ಲಸ್ ಬಹು ರೂಪಾಂತರಗಳಲ್ಲಿ ದೊರೆಯಲಿದೆ. ಈ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನ ಆರಂಭಿಕ ಬೆಲೆಯು ರೂ.72,420 ಆಗಿದೆ. ಹೋಂಡಾ ಮೋಟಾರ್‌ಸೈಕಲ್ ಹೊಸದಾಗಿ ಬಿಡುಗಡೆಗೊಳಿಸಿದ ಶೈನ್ 100cc(Honda Shine 100cc) ಬೈಕ್ ಅನ್ನು ಒಂದೇ ರೂಪಾಂತರದಲ್ಲಿ ಒದಗಿಸುತ್ತಿದೆ. ಹೋಂಡಾದ ಹೊಸ ಶೈನ್ 100cc ತನ್ನ 100cc, ಸಿಂಗಲ್-ಸಿಲಿಂಡರ್ ಎಂಜಿನ್‌ (Single cylinder engines)ಅನ್ನು ಒಳಗೊಂಡಿದ್ದು, ಈ ಎಂಜಿನ್ 7.6 ಪಿಎಸ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಪಿಸ್ಟನ್-ಕೂಲಿಂಗ್ ಆಯಿಲ್ ಜೆಟ್ ಮತ್ತು ಆಫ್‌ಸೆಟ್ ಪಿಸ್ಟನ್ ಜೊತೆಗೆ ಆಟೋಮ್ಯಾಟಿಕ್ ಚಾಕ್ ಸಿಸ್ಟಮ್‌ನೊಂದಿಗೆ ಸ್ಟಾರ್ಟ್ ಸೊಲೆನಾಯ್ಡ್ ಅನ್ನು ಒಳಗೊಂಡಿವೆ.

ಹೋಂಡಾ ಶೈನ್ 100cc 1245mm ಉದ್ದದ ವೀಲ್‌ಬೇಸ್‌ ಅನ್ನು ಒಳಗೊಂಡಿದ್ದು, 786mm ಸೀಟ್ ಎತ್ತರವಿದ್ದು, 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಕೂಡ ಒಳಗೊಂಡಿದೆ. ಇನ್ನು ಹೋಂಡಾ ಶೈನ್ 100 ಸ್ಪ್ಲೆಂಡರ್‌ಗಿಂತ ಸುಮಾರು 7,500 ಕಡಿಮೆ ಬೆಲೆಯನ್ನು ಒಳಗೊಂಡಿದೆ. ಈ ಎಂಜಿನ್ 7.9 ಬಿಹೆಚ್‍ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, ಮುಂಭಾಗ, ಹಿಂಭಾಗ ಡ್ರಮ್ ಬ್ರೇಕ್ (Drum Brake) ಅನ್ನು ಒಳಗೊಂಡಿದೆ

ಬೈಕ್ ಡೈಮಂಡ್ ಫ್ರೇಮ್ ಅನ್ನು ಹೊಂದಿದ್ದು, ಟೆಲಿಸ್ಕೋಪಿಕ್ ಫೋರ್ಕ್ ಮುಂಚೂಣಿಯಲ್ಲಿ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್‌ ಹೊಂದಿದೆ. ಇದು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು( Drum Brake)ಒಳಗೊಂಡಿದೆ. ಈ ಬೈಕಿನ(Bike) ಇಂಧನ ಟ್ಯಾಂಕ್ ಸಾಮರ್ಥ್ಯವು 9-ಲೀಟರ್ ಆಗಿದೆ. ಬೈಕ್ 99 ಕೆಜಿ ಕರ್ಬ್ ತೂಕವನ್ನು ಒಳಗೊಂಡಿದೆ. ಆಕ್ಸಲ್‌ಗಳಲ್ಲಿ ಅಳವಡಿಸಲಾಗಿರುವ ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಒಳಗೊಂಡಿದೆ.

 

ಇದನ್ನೂ ಓದಿ :Maruti Suzuki : ಫೆಬ್ರವರಿ 2023ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾರುಗಳು ಯಾವುದು ಗೊತ್ತಾ? ಸಂಪೂರ್ಣ ವಿವರ ಇಲ್ಲಿದೆ

Leave A Reply

Your email address will not be published.