Marriage : ಮದುವೆಯಾದ ಮೂರೇ ದಿನಕ್ಕೆ ಎಸ್ಕೇಪ್ ಆದ ವರಮಹಾಶಯ! ಕಾರಣ ಕೇಳಿದ್ರೆ ಶೂಟಿಂಗ್ ಮಾಡಿದ್ದು ಹೇಳ್ತಾನೆ!!
Marriage: ಪ್ರೀತಿ (Love) ಕೆಲವರ ಪಾಲಿಗೆ ಒಂದು ಸುಂದರ ಭಾವವಾದರೆ ಮತ್ತೆ ಕೆಲವರ ಪಾಲಿಗೆ ನುಂಗಲಾರದ ಬಿಸಿ ತುಪ್ಪದಂತೆ ಪರಿಣಮಿಸುತ್ತದೆ. ಪ್ರೀತಿ ಪ್ರೇಮ ಎಂದು ಮನೆಯವರ ವಿರೋಧದ ನಡುವೆ ಮದುವೆಯಾಗಿ ಸಾವಿನ (Death) ಕದ ತಟ್ಟಿದ ಅದೆಷ್ಟೋ ಜೀವಂತ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಆದರೆ, ಇಲ್ಲೊಬ್ಬ ಮಹಾಶಯ ಮದುವೆಯಾದ ಮೂರೇ ದಿನಕ್ಕೆ ಪರಾರಿಯಾಗಿ ವರಸೆ ಬದಲಿಸಿದ ಘಟನೆ ಮುನ್ನಲೆಗೆ ಬಂದಿದೆ.
ಪ್ರೀತಿಸಿ ಮದುವೆಯಾಗಿ ಸಪ್ತಪದಿ ತುಳಿದು ಮನೆ ಸೇರುವ ಮೊದಲೇ ಏನೋ ಒಂದು ರಾಮಾಯಣ ರಂಪಾಟ ಮಾಡಿ ನಾನೊಂದು ತೀರ. ನೀನೊಂದು ತೀರ ಎಂದು ಬೀದಿ ಗಲಾಟೆ ಮಾಡಿ ಗಂಡ ಹೆಂಡತಿ(Wife) ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ನಡೆಯೋದು ಕಾಮನ್. ಗಂಡ (Husband)ಹೆಂಡಿರ ಜಗಳ ಉಂಡು ಮಲಗುವ ತನಕ ಅಂತ ಸುಖಿ ಸಂಸಾರ ನಡೆಸುವವರು ಕೂಡ ಇದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ.
ಪ್ರೀತಿಸಿ ಮದುವೆಯಾಗಿ ಮೂರೇ ದಿನಕ್ಕೆ ಪತ್ನಿಯನ್ನು ಬಿಟ್ಟು ನಾಪತ್ತೆಯಾಗಿದ್ದು ಮಾತ್ರವಲ್ಲ ಕಣ್ರೀ!! ಮದುವೆ ಆಗಿದೆ ಅನ್ನೋದನ್ನೇ ಒಪ್ಪಿಕೊಳ್ಳೋಕೆ ರೆಡಿ ಇಲ್ಲ ಆಸಾಮಿ ಅಂದರೆ ಅಚ್ಚರಿಯಾಗುತ್ತದೆ. ಮದುವೆಯಾದ ಫೋಟೋ ( Marriage Photos)ತೋರಿಸಿದರೆ ನಾನು ಆಕೆಯನ್ನು ಮದುವೆಯಾಗಿಲ್ಲ. ಅದು ಕೇವಲ ಶಾರ್ಟ್ ಮೂವಿ ತೆಗೆಯಲು ತೆಗೆದ ಫೋಟೋ ಎಂದಿದ್ದಾನಂತೆ. ಸದ್ಯ, ಈ ಕುರಿತು ಆತನ ಪತ್ನಿ ಪೋಲಿಸ್ ಸ್ಟೇಷನ್ ಮೆಟ್ಟಿಲೇರಿದ ಘಟನೆ ನಡೆದಿದೆ.
ಧರಣಿ ಎಂಬ ಯುವತಿಗೆ 2016 ರಲ್ಲಿ ಮದುವೆಯಾಗಿದ್ದು (Marriage) ಕೌಟುಂಬಿಕವಾಗಿ ವೈಮನಸ್ಯ ಮೂಡಿ ಪತ್ನಿ ಪತಿಯಿಂದ( Breakup) ದೂರವಾಗಿದ್ದಾಳೆ. ಈ ವಿಚಾರಗಳು ಸುರೇಶ್ ಎಂಬಾತನಿಗೆ ತಿಳಿದು ಆ ಬಳಿಕ ಧರಣಿ ಸುರೇಶ್ ಎಂಬಾತನನ್ನು ಮದುವೆಯಾಗಿದ್ದು, ಕಳೆದ ಫೆಬ್ರುವರಿ 13 ರಂದು ದೇವಸ್ಥಾನ ವೊಂದರಲ್ಲಿ ಧರಣಿ ಮತ್ತು ಸುರೇಶ್ ಮದುವೆಯಾಗಿದ್ದಾರೆ ಎನ್ನಲಾಗಿದೆ. ಧರಣಿಯನ್ನು ಮದುವೆಯಾಗಿ ಕೇವಲ ಮೂರೇ ದಿನಕ್ಕೆ ಸುರೇಶ್ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಫೆಬ್ರವರಿ 18 ರಂದು ಮನೆಗೆ ಬಂದು ಕರೆದುಕೊಂಡು ಹೋಗುವುದಾಗಿ ಹೇಳಿ ಹೋದವನು ಮತ್ತೆ ಮನೆ ಕಡೆಗೆ ತಿರುಗಿ ಕೂಡ ನೋಡಿಲ್ಲ ಎಂದು ಧರಣಿ ದೂರಿದ್ದಾಳೆ.
ಫೆಬ್ರವರಿ 13ರಂದು ಸಪ್ತಪದಿ ತುಳಿದು ಸತಿಪತಿಗಳಾಗಿ, ಫೆಬ್ರವರಿ 13ರಿಂದ 17ರವರೆಗೆ ಜೊತೆಯಾಗಿಯೇ ಇದ್ದ ಸುರೇಶ್ ಫೆಬ್ರವರಿ 18 ಮನೆಗೆ ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ನಾಪತ್ತೆಯಾಗಿರುವ(Missing Complaint) ಕುರಿತು ಪತ್ನಿ ಧರಣಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಈ ನಡುವೆ, ಮದುವೆ ಪೋಟೊಗಳ ಕುರಿತು ಸುರೇಶನಿಗೆ ಕೇಳಿದರೆ ನನಗೆ ಮದುವೆಯೇ ಆಗಿಲ್ಲ.ನಾನು ಕೇವಲ ಆಕೆಯ ಸ್ನೇಹಿತನಂತೆ ಇದ್ದೆ ಅಷ್ಟೇ!! ಆ ಫೋಟೋಗಳು ಶಾರ್ಟ್ ಮೂವಿ (Short Movie)ಚಿತ್ರೀಕರಿಸಬೇಕಾದಾಗ ತೆಗೆದ ಫೋಟೋಗಳು ಎಂದು ಸುರೇಶ್ ಹೇಳಿಕೊಂಡಿದ್ದಾನೆ ಎನ್ನಲಾಗಿದ್ದು, ಸದ್ಯ, ಈ ಪ್ರಕರಣದ ಕುರಿತು ಪೋಲೀಸರು (Police) ತನಿಖೆ ನಡೆಸುತ್ತಿದ್ದಾರೆ.