Dr. Puneeth Rajkumar: ಪುನೀತ್ ಸೇವಾ ಕಾರ್ಯದ ಬಗ್ಗೆ ಅಪಸ್ವರ?!
Dr. Puneeth Rajkumar :ಇಡೀ ರಾಜ್ಯವೇ ಕರ್ನಾಟಕ ರತ್ನ ದಿ. ಡಾ. ಪುನೀತ್ ರಾಜ್ ಕುಮಾರ ಅವರ ಜನ್ಮ ದಿನವನ್ನು ಸ್ಪೂರ್ತಿ ದಿನವನ್ನಾಗಿ ರಾಜ್ಯದಾದ್ಯಂತ ಆಚರಿಸುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ ಅವರು ಪ್ರತಿಯೊಬ್ಬರಿಗೂ ಮಾದರಿ. ೧೯೭೫ ಮಾರ್ಚ್ ೧೭ ರಂದು ಚೆನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ಜನಿಸಿದ ಪುನೀತ್ ರಾಜ್‌ಕುಮಾರ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ನಟನೆ ಮೂಲಕ ಹಲವು ಚಿತ್ರಗಳಲ್ಲಿ ಬಾಲ ನಟರಾಗಿ ಚಂದನವನದಲ್ಲಿ ಹೆಸರು ಮಾಡಿದವರು.
ಬಳಿಕ ಕನ್ನಡ ಚಿತ್ರರಂಗದಲ್ಲಿ ಸಕ್ರೀಯರಾದ ಪುನೀತ ರಾಜ್‌ಕುಮಾರ (Dr.Puneeth Rajkumar) ಅಪ್ಪು ಎಂದೇ ಚಿತ್ರರಂಗದಲ್ಲಿ ಖ್ಯಾತನಾಮರಾದವರು. ನಾಲ್ಕು ದಶಕಗಳ ಕಾಲ ತಮ್ಮ ಸಿನಿಯಾನದಲ್ಲಿ 14 ಚಿತ್ರಗಳಲ್ಲಿ ಬಾಲ ನಟನಾಗಿ ಹಾಗೂ 25 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕನಟನಾಗಿ ನಟಿಸುವ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ಪುನೀತ್.
1976 ರಲ್ಲಿ ಸಣ್ಣ ಮಗುವಿದ್ದಾಗಲೇ ಪುನೀತ್ ಪ್ರೇಮದ ಕಾಣಿಕೆ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡರು. ನಂತರ ವರನಟ ಡಾ. ರಾಜ್‌ಕುಮಾರ ಅವರ ಪ್ರೋತ್ಸಾಹದಿಂದ ಹಲವು ಚಿತ್ರಗಳಲ್ಲಿ ಅಭಿನಯಿಸಿ ಬಾಲ ನಟನಾಗಿ ಸೈ ಎಣಿಸಿಕೊಂಡರು. 1984 ರಲ್ಲಿ ತೆರೆ ಕಂಟ ಬೆಟ್ಟದ ಹೂ ಚಿತ್ರದಲ್ಲಿ ನಟಿನೆ ಮಾಡಿ ಎಲ್ಲರ ಚಿತ್ತ ಸೆಳೆದವರು.
ನಿರ್ದೇಶಕ ಪುರಿಜಗನ್ನಾಥ ನಿರ್ದೇಶನದಲ್ಲಿ 2002 ರಲ್ಲಿ ತೆರೆ ಕಂಡ ಅಪ್ಪು ಚಲನಚಿತ್ರ ಕನ್ನಡ ಚಿತ್ರರಂಗದಲ್ಲಿ ಹಿಟ್ ಚಿತ್ರವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆ ಸಿನಿ ರಂಗದಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಜನ ಮನ್ನಣೆಯನ್ನು ಪುನೀತ್ ರಾಜಕುಮಾರ್ ಪಡೆದಿದ್ದಾರೆ.
ಆದರೆ, 2021ರ ಅಕ್ಟೋಬರ್ 21 ರಂದು ಜಿಮ್‌ನಲ್ಲಿ ಪುನೀತ್ ವರ್ಕೌಟ್ ಮಾಡುತ್ತಿದ್ದಾಗ ಗೃದಯ ಸ್ಥಂಬನದಿಂದಾಗಿ ಚಿಕಿತ್ಸೆ ಫಲಿಸದೇ ಪುನೀತ್ ಅಸುನೀಗಿದರು. ಇಳಿ ವಯಸ್ಸಿನಲ್ಲಿಯೇ ಕನ್ನಡ ಚಿತ್ರ ರಂಗದ ಮೇರು ನಟನನ್ನು ಕಳೆದುಕೊಂಡ ಇಡೀ ಕರುನಾಡು ಮಮ್ಮಲು ಮರುಗಿದ್ದಂತೂ ನಿಜ.
ಆದರೆ, ಇಂದು ಎಲ್ಲರೂ ಪುನೀತ್ ಅವರ ಜನ್ಮ ದಿನದ ಸಂಭ್ರಮದಲ್ಲಿದ್ದರೆ ಕೆಲ ಕಿಡಿಗೇಡಿಗಳು ಟ್ವಿಟ್ಟರ್ ನಲ್ಲಿ ಪುನೀತ್ ರಾಜ್ ಕುಮಾರ ಅವರು ಮಾಡಿರುವ ಸೇವಾ ಕಾರ್ಯಗಳು (Puneeth Rajkumar social work) ಸುಳ್ಳು. ಅದನ್ನು ಯಾರು ನಂಬಬೇಡಿ ಎಂದು ಪುನೀತ್ ರಾಜ್ ಕುಮಾರ ಸ್ಕ್ಯಾಮ್ಸ್ ಎಂದು ಹ್ಯಾಶ್ ಟ್ಯಾಗ್ ಮಾಡಿದ್ದಾರೆ. ಈ ಹ್ಯಾಶ್ ಟ್ಯಾಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ಲಾಗಿದೆ.